ಬೆಂಗಳೂರು: ಜ್ಯೂಸ್‌ನಲ್ಲಿ ಮತ್ತು ಬರುವ ಔಷಧಿ ಬೆರೆಸಿ ರೂಪದರ್ಶಿಯ ಖಾಸಗಿ ದೃಶ್ಯಗಳನ್ನು ಸೆರೆಹಿಡಿದುಕೊಂಡು ಅವುಗಳನ್ನು ತೋರಿಸಿ ಆಕೆ ಮೇಲೆ ಹತ್ತಾಾರು ಬಾರಿ ಅತ್ಯಾಚಾರ ಎಸಗಿದ ಆಕೆಯ ಪ್ರಿಯಕರನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
ದಾಸರಹಳ್ಳಿ ನಿವಾಸಿ 23 ವರ್ಷದ ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ದಾಸರಹಳ್ಳಿ ನಿವಾಸಿ ಪ್ರಮೋದ್ ಯಾದವ್ (23) ಬಂಧಿತ ಆರೋಪಿ. ಪ್ರಕರಣದ ಮತ್ತೊಬ್ಬ ಆರೋಪಿ, ಪ್ರಮೋದ್ ಸ್ನೇಹಿತ ಧನಂಜಯ್ ಎಂಬಾತನಿಗಾಗಿ ಹುಡುಕಾಟ ನಡೆಯುತ್ತಿದೆ. ಆರೋಪಿ ಬಳಿಯಿದ್ದ ಸಂತ್ರಸ್ತೆಯ ಖಾಸಗಿ ದೃಶ್ಯಗಳಿದ್ದ ಮೊಬೈಲ್ ಒಂದನ್ನು ಆರೋಪಿ ಹಾನಿಗೊಳಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಂತ್ರಸ್ತೆ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ಆರೋಪಿ ಮೆಡಿಕಲ್ ಸ್ಪೊರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮತ್ತು ಸ್ನೇಹಿತರೊಬ್ಬರ ಮೂಲಕ ಸಂತ್ರಸ್ತೆಯನ್ನು ಪರಿಚಯಿಸಿಕೊಂಡಿದ್ದಾನೆ. ಈ ವೇಳೆ ಇಬ್ಬರು ಪಿಯುಸಿಯ ಸಹಪಾಠಿಗಳು ಎಂಬುದು ಗೊತ್ತಾಗಿದೆ. ಬಳಿಕ ಇಬ್ಬರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದು, ಪ್ರಮೋದ್ ಈಕೆಯನ್ನು ವಿವಾಹವಾಗುವುದಾಗಿ ನಂಬಿಸಿ ಪ್ರೀತಿಸುವ ನಾಟಕವಾಡಿದ್ದ. ಈತನ ಮಾತಿಗೆ ಮರುಳಾದ ಯುವತಿ ಪ್ರಮೋದ್‌ನನ್ನೇ ಮದುವೆ ಆಗಲು ನಿರ್ಧರಿಸಿದ್ದಳು.
ಪ್ರಮೋದ್, ನಿನ್ನೊಂದಿಗೆ ತುಂಬಾ ಮಾತನಾಡಬೇಕು ಎಂದು ಪುಸಲಾಯಿಯಿಸಿ ಯುವತಿಯನ್ನು ಯಶವಂತಪುರ ಲಾಡ್ಜ್ಗೆ ಕರೆಸಿಕೊಂಡಿದ್ದಾನೆ. ಹೀಗೆ ಬಂದವಳಿಗೆ ಜ್ಯೂಸ್‌ನಲ್ಲಿ ಮತ್ತು ಬರುವ ಔಷಧಿ ಹಾಕಿ ಕುಡಿಯಲು ಕೊಟ್ಟಿದ್ದಾನೆ.
ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವೇಳೆ ಮೊಬೈಲ್‌ನಲ್ಲಿ ಪ್ರೇಯಸಿಯ ಖಾಸಗಿ ವಿಡಿಯೋ ಸೆರೆ ಹಿಡಿದಿದ್ದಾನೆ. ನಂತರ ಕೆಲ ದಿನಗಳ ಬಳಿಕ ಆರೊಪಿಯು ಮೊಬೈಲ್‌ನಲ್ಲಿ ಸೆರೆಹಿಡಿದ ಖಾಸಗಿ ವಿಡಿಯೋವನ್ನು ಯುವತಿಗೆ ತೋರಿಸಿ ಬೆದರಿಸಿ, ನಾನು ಕರೆದಾಗಲೆಲ್ಲ ನೀನು ಬರಬೇಕು. ಇಲ್ಲವಾದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ಅಪ್‌ಲೋಡ್ ಮಾಡುತ್ತೇನೆ. ನಿನ್ನ ಪೋಷಕರಿಗೆ ವಿಡಿಯೋ ತೋರಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡಿ, ಹತ್ತಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾಳೆ.
ಧನಂಜಯ್‌ನಿಂದಲೂ ಕಿರುಕುಳ ಈ ಮಧ್ಯೆ ಮಾಧ್ಯಮಗಳ ಮುಂದೆ ಬಂದು ಪ್ರಮೋದ್ ಯಾದವ್ ಮಾತ್ರವಲ್ಲ, ಧನಂಜಯ್ ಕೂಡ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದಾಳೆ. ಪ್ರಮೋದ್ ನನ್ನನ್ನು ಮದುವೆ ಮಾಡಿಕೊಳ್ಳಲು ಸಿದ್ದನಿದ್ದ. ಆದರೆ, ಧನಂಜಯ್ ಪ್ರಮೋದ್‌ಗೆ ತಲೆ ಕಿಡಿಸಿ ಮದುವೆ ಆಗದ ಹಾಗೆ ಮಾಡಿದ್ದ. ಜತೆಗೆ ಧನಂಜಯ್ ಕೂಡ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದ. ಈ ಬಗ್ಗೆ ಪ್ರಮೋದ್‌ಗೆ ಹೇಳಿದಾಗ ಆತ ನಂಬಲಿಲ್ಲ. ಅಲ್ಲದೆ, ನನ್ನ ಮೇಲೆ ಹಲ್ಲೆ ನಡೆಸಿ, ಬೇರೆಯವರ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಿಯಾ ಎಂದು ಆರೋಪಿಸಿದ್ದ.
ಈ ಬಗ್ಗೆ ದೂರು ಕೊಡುವುದಾಗಿ ಧನಂಜಯ್‌ಗೆ ಎಚ್ಚರಿಕೆ ನೀಡಿದಾಗ ಪ್ರಮೋದ್‌ನನ್ನು ಎಷ್ಟು ಬೇಕಾದರೂ ಹಣ ಕೊಟ್ಟು ಬಿಡಿಸಿಕೊಳ್ಳುತ್ತೇನೆ ಎಂದು ಸವಾಲು ಹಾಕಿದ್ದ. ಈ ಘಟನೆಗೆ ಮೂಲ ಕಾರಣ ಧನಂಜಯ್. ಆದರೆ ಯಶವಂತಪುರ ಪೊಲೀಸ್ ಅಧಿಕಾರಿಗಳು ಆತನ ವಿರುದ್ಧ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾಳೆ.