ಯಲಹಂಕ : ಚಿಕನ್ ತಿನ್ನುವ ಆಸೆಯಿಂದ ಕೊರೊನಾ ಭಯವನ್ನೇ ಮರೆತ ಜನರು ಕೋಳಿ ಫಾರಂ ಮುಂದೆ ಗುಂಪು ಗುಂಪಾಗಿ ನಿಂತು ಖರೀದಿಯಲ್ಲಿ ನಿರತರಾಗಿದ್ದರು.
ಯಲಹಂಕದ ದಿಬ್ಬೂರು ಗೇಟ್ ಬಳಿಯ ಗಾಳಪ್ಪ ಎಂಬುವರಿಗೆ ಸೇರಿದ ಕೋಳಿ ಫಾರಂ ಮುಂದೆ ಜನಸಾಗರವೇ ಸೇರಿತ್ತು. ಭಾನುವಾರವಾದ ಕಾರಣ, ನಾನ್ವೆಜ್ ತಿನ್ನುವ ಆಸೆಯಿಂದ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.