ETV Bharat / state

ಸಿನಿಮಾ ರಂಗಕ್ಕೆ ಹುಚ್ಚು ಹಿಡಿಸಿದ ಕೊರೊನಾ: ಲಾಕ್​​​​ಡೌನ್​​ನಿಂದ ಚಿತ್ರೋದ್ಯಮಕ್ಕೆ ಕೋಟ್ಯಂತರ ನಷ್ಟ..! - Loss of billions from the lockdown to the film industry

ಕೊರೊನಾ ಪ್ರೇರಿತ ಲಾಕ್​​​​ಡೌನ್​​ನಿಂದ ಚಿತ್ರೋದ್ಯಮಕ್ಕೆ ಕೋಟಿ ಕೋಟಿ ನಷ್ಟವಾಗಿದೆ. ಸಿನಿಮಾ ವ್ಯವಹಾರವಿಲ್ಲದೇ ಚಂದನವನಕ್ಕೆ ಬಿಗ್‌ಲಾಸ್‌ ಆಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ...

film industry
ಲಾಕ್​​​​ಡೌನ್​​ನಿಂದ ಚಿತ್ರೋದ್ಯಮಕ್ಕೆ ಕೋಟ್ಯಂತರ ನಷ್ಟ
author img

By

Published : Oct 21, 2020, 8:51 PM IST

ಬೆಂಗಳೂರು: ವರ್ಷ ಪೂರ್ತಿಯೂ ಬಿಂದಾಸ್ ಆಗಿದ್ದ ಸಿನಿಮಾ ಇಂಡಸ್ಟ್ರಿಗೆ, ಕೊರೊನಾದಿಂದ ಹುಚ್ಚು ಹಿಡಿದಂತಾಗಿದೆ. ಲಾಕ್​​​​ಡೌನ್​​ನಿಂದಾಗಿ ಚಿತ್ರೋದ್ಯಮಕ್ಕೆ ಕೋಟಿ ಕೋಟಿ ನಷ್ಟವಾಗಿದೆ. ಸತತ ಏಳು ತಿಂಗಳು ಸಿನಿಮಾ ಶೂಟಿಂಗ್, ಪ್ರದರ್ಶನ ಹಾಗೂ ವ್ಯವಹಾರವಿಲ್ಲದೇ ಸಿನಿಮಾ ರಂಗಕ್ಕೆ ಬಿಗ್‌ಲಾಸ್‌ ಆಗಿದೆ. ಚಂದನವನದ 80 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಸಿನಿಮಾ ಚಿತ್ರೀಕರಣ, ಚಿತ್ರಮಂದಿಗಳು ಬಂದ್ ಆಗಿದ್ದು. ಇದರಿಂದ ಸಾವಿರಾರು ಸಿನಿಮಾ ರಂಗದ ಕಾರ್ಮಿಕರು ಕೆಲಸವಿಲ್ಲದೇ ಸಂಕಷ್ಟಕ್ಕೆ ಸಿಲುಕಿವಂತಾಗಿದೆ.

ಇದೀಗ ನಿಧಾನವಾಗಿ ಹೊಸ ಸಿನಿಮಾಗಳು ಸೆಟ್ಟೇರುತ್ತಿದ್ದು, ಶೂಟಿಂಗ್ ಕೂಡ ನಡೆದಿದೆ. ಹಾಗೂ ಸಿನಿಮಾ ಪ್ರದರ್ಶನವೂ ಶುರುವಾಗಿದೆ. ಆದರೆ ಚಿತ್ರರಂಗ ಎಂದಿನಂತೆ ಚೇತರಿಸಿಕೊಳ್ಳುವುದಕ್ಕೆ ಕನಿಷ್ಟ ಪಕ್ಷ ಎರಡು ವರ್ಷಗಳಾದರೂ ಬೇಕು. ಅಕ್ಟೋಬರ್ 15 ರಿಂದ ಚಿತ್ರಮಂದಿಗಳನ್ನ ಓಪನ್ ಮಾಡುವುದಕ್ಕೆ ಅವಕಾಶ ಸಿಕ್ಕಿದೆ. ಆದರೆ ಅರ್ಧ ಸೀಟುಗಳನ್ನು ‌ಖಾಲಿ‌ ಬಿಡಬೇಕು ಎಂಬ ಕೇಂದ್ರದ ನಿಯಮವಿದೆ. ಈ ಹಿನ್ನೆಲೆ ಲಾಕ್​​ಡೌನ್​ನಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು, ನೇರವಾಗಿ ನಿರ್ಮಾಪಕರ ಮೇಲೆ ಬೀಳೋತ್ತೆ. ಇದರ ಜೊತೆಗೆ ಆರೇಳು ತಿಂಗಳಿಂದ ನಷ್ಟದಲ್ಲಿರುವ ಚಿತ್ರಮಂದಿರ ಮಾಲೀಕರಿಗೆ ಆತಂಕ ದೂರವಾಗಿಲ್ಲ. ಚಿತ್ರಮಂದಿರ ತೆರೆದರೂ ಜನರು ಬರುವ ವಿಶ್ವಾಸ ಮಾಲೀಕರಲ್ಲಿ ಇಲ್ಲ.

ಲಾಕ್​​​​ಡೌನ್​​ನಿಂದ ಚಿತ್ರೋದ್ಯಮಕ್ಕೆ ಕೋಟ್ಯಂತರ ನಷ್ಟ

ಇನ್ನು ಲಾಕ್​​ಡೌನ್ ಪರಿಣಾಮ ನಿರ್ಮಾಣ ಹಂತದಲ್ಲಿದ್ದ 100ಕ್ಕೂ ಅಧಿಕ ಸಿನಿಮಾಗಳು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಬಿಗ್ ಬಜೆಟ್ ಚಿತ್ರಗಳೆಂದು ಹೇಳಲಾಗುತ್ತಿರುವ ಯುವರತ್ನ, ಕೆಜಿಎಫ್ 2, ಕೋಟಿಗೊಬ್ಬ 3, ಪೊಗರು, ರಾಬರ್ಟ್ ಹೀಗೆ ದೊಡ್ಡ ಸ್ಟಾರ್ ನಟರ ಸಿನಿಮಾಗಳನ್ನು ಈ ಸಮಯದಲ್ಲಿ ರಿಲೀಸ್ ಮಾಡುವುದಕ್ಕೆ ನಿರ್ಮಾಪಕರು ಮನಸ್ಸು ಮಾಡುತ್ತಿಲ್ಲ. ಕೋಟಿ ಕೋಟಿ ಬಜೆಟ್​​ನಲ್ಲಿ ಸಿನಿಮಾ ನಿರ್ಮಾಣ ಮಾಡಿ, ಕಡಿಮೆ ಜನರು ಬರುವ ಈ ಟೈಮಲ್ಲಿ ರಿಲೀಸ್ ಮಾಡಿದ್ರೆ, ಕೋಟಿ ಕೋಟಿ ನಷ್ಟ ಅನುಭವಿಸಬೇಕಾಗುತ್ತದೆ. ಈ ಕಾರಣಕ್ಕೆ ಚಿತ್ರಮಂದಿಗಳು ಓಪನ್ ಆದ್ರೂ, ಬಿಗ್ ಬಜೆಟ್ ಸಿನಿಮಾಗಳು ಈ ವರ್ಷ ರಿಲೀಸ್ ಆಗೋದು ಡೌಟ್ ಎನ್ನಲಾಗ್ತಿದೆ.

ಇನ್ನು ಸಿನಿಮಾ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್ ಹೇಳುವ ಹಾಗೆ, ಸರ್ಕಾರದ ಅಂಕಿ ಅಂಶದ ಪ್ರಕಾರ ಒಂದು ವರ್ಷಕ್ಕೆ ಚಿತ್ರರಂಗದಿಂದ ರಾಜ್ಯ ಸರ್ಕಾರಕ್ಕೆ 100 ರಿಂದ 625 ಕೋಟಿ ರೂಪಾಯಿ ಆದಾಯವಿದೆ. ಕನ್ನಡ ಚಿತ್ರರಂಗದಲ್ಲಿ ಒಂದು ವರ್ಷಕ್ಕೆ ನಾಲ್ಕು ಸಾವಿರದಿಂದ, ಐದು ಸಾವಿರ ಕೋಟಿ ವಹಿವಾಟು ನಡೆಯುತ್ತದೆ. ಈ ಆಧಾರದಲ್ಲಿ ಕನ್ನಡ ಚಿತ್ರರಂಗಕ್ಕೆ ಸುಮಾರು ಎರಡುವರೆ ಸಾವಿರ ಕೋಟಿ ನಷ್ಟ ಆಗಿದೆ ಅಂತಾರೆ ಚಂದ್ರಶೇಖರ್. ಇದರಲ್ಲಿ ಶೇ. 30 ರಷ್ಟು ಪ್ರದರ್ಶಕರಿಗೆ, 60 ರಿಂದ 70 ರಷ್ಟು ವಿತರಕರಿಂದ, ನಿರ್ಮಾಪಕರಿಗೆ ಆದಾಯವಾಗುತ್ತದೆ. ಆದರೆ ರಾಜ್ಯ ಸರ್ಕಾರಕ್ಕೆ ಜಿಎಸ್​​ಟಿ ರೂಪದಲ್ಲಿ ಚಿತ್ರರಂಗದಿಂದ ವರ್ಷಕ್ಕೆ 625 ಕೋಟಿ ರೂಪಾಯಿ ಆದಾಯವಿದೆ ಅನ್ನೋದು ಅವರ ಮಾತು.

ಒಟ್ಟಿನಲ್ಲಿ ಕೊರೊನಾದ ಕನ್ನಡ ಚಿತ್ರರಂಗಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ನಿರ್ಮಾಪಕರು, ವಿತರಕರು ಹಾಗೂ ಚಿತ್ರಮಂದಿರದ ಮಾಲೀಕರಿಗೆ ದೊಡ್ಡ ಮಟ್ಟದಲ್ಲಿ ನಷ್ಟವಾಗಿದೆ. ಇದಕ್ಕೆ ಅಂಕಿ ಅಂಶಗಳೇ ಸಾಕ್ಷಿಯಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.