ETV Bharat / state

2022ರ ರೌಂಡಪ್​.. ಬೆಂಗಳೂರಲ್ಲಿ ನಡೆದ ಪ್ರಮುಖ ಘಟನಾವಳಿಗಳ ಹಿನ್ನೋಟ

author img

By

Published : Dec 31, 2022, 9:25 PM IST

ಬೆಂಗಳೂರುನಲ್ಲಿ ರಾಜ್ಯಾದ್ಯಂತ ಸದ್ದು ಮಾಡಿದ್ದ ಚಿಲುಮೆ ಸಂಸ್ಥೆಯ ದತ್ತಾಂಶ ಕಳವು ಪ್ರಕರಣ- ನಗರದಲ್ಲಿವೆ 30 ಸಾವಿರ ಗುಂಡಿಗಳು- ಬಿಎಂಟಿಸಿಯಲ್ಲಿ ಡಿಜಿಟಲ್ ಪಾವತಿ ಸೇರಿ 2022ರಲ್ಲಿನ ಪ್ರಮುಖ ಘಟನೆಗಳ ಮಾಹಿತಿ

2022 events in bengaluru
ಬೆಂಗಳೂರುನಲ್ಲಿ 2022ರಲ್ಲಿ ಸಂಭವಿಸಿದ ಪ್ರಮುಖ ಘಟಾನವಳಿಗಳ ಹಿನ್ನೋಟ

ಬೆಂಗಳೂರು: ಕೋವಿಡ್ ಆತಂಕದ ಛಾಯೆಯಲ್ಲಿಯೇ ಆರಂಭವಾದ 2022 ಮತ್ತೆ ಸಾಂಕ್ರಾಮಿಕ ರೋಗ ಹರಡುವ ಭೀತಿಯನ್ನು ರಾಜಧಾನಿಯಲ್ಲಿ ಹರಡಿ ಮುಕ್ತಾಯಗೊಳ್ಳುತ್ತಿದೆ.

ವರ್ಷದ ಆರಂಭದಿಂದ ಅಂತ್ಯದವರೆಗೂ ನಗರದಲ್ಲಿ ಮಳೆ ಅಧಿಕ ಪ್ರಮಾಣದಲ್ಲಿ ಸುರಿದು ಜಲಕಂಟಕ ನಗರ ಎನ್ನುವಂತೆ ಬಿಂಬಿತವಾಯಿತು. ನಗರದ ಮೂಲ ಸೌಕರ್ಯಗಳ ಹಲವು ಹುಳುಕುಗಳನ್ನು ಎತ್ತಿತೋರಿಸಿತು. ಪೂರ್ವ ಬೆಂಗಳೂರು ಭಾಗವೇ ಭಾಗಶಃ ಮುಳುಗಿಹೋದಂತಾಗಿತ್ತು.

ಜುಲೈನಲ್ಲಿ ಸುರಿದ ದಾಖಲೆಯ ಮಳೆ ಬೆಂಗಳೂರು ಪೂರ್ವ ಭಾಗವನ್ನು ಮುಳುಗಿಸಿತು. ಐಟಿ-ಬಿಟಿ ಕಂಪನಿಗಳು ಸೇರಿದಂತೆ ಪ್ರತಿಷ್ಠಿತ ಬಡಾವಣೆಗಳು ರಾಜಕಾಲುವೆಗಳನ್ನು ಒತ್ತುವರಿ ಮಾಡಿದ್ದೇ ಈ ಮುಳುಗಡೆಗೆ ಕಾರಣ ಎಂಬುದು ಸಾಬೀತಾದರೂ ಅನ್ನು ನಿವಾರಿಸುವಲ್ಲಿ ಬಿಬಿಎಂಪಿ ಹಿನ್ನಡೆಯೇ ಕಂಡಿತು. ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರು, ವಿರೋಧ ಪಕ್ಷ ನಾಯಕರು ರಸ್ತೆಗಳಲ್ಲಿ ಬೋಟ್‌ನಲ್ಲಿ ಸಂಚರಿಸಿ ಸಮಸ್ಯೆಯ ತೀವ್ರತೆ ಅರಿತುಕೊಂಡರು. ಎಲ್ಲರೂ ರಾಜಕಾಲುವೆ ಒತ್ತುವರಿ ತೆರವು ಮಾಡಬೇಕೆಂದು ಒತ್ತಾಯಿಸಿದರು. ಡಿಸೆಂಬರ್ ಅಂತ್ಯದಲ್ಲಿ ಒಂದೆರಡು ದಿನ ತೆರವು ಕಾರ್ಯಾಚರಣೆ ನಡೆಯಿಷ್ಟೇ. ಸಮಸ್ಯೆ ಈಗಲೂ ಹಾಗೆಯೇ ಉಳಿದುಕೊಂಡಿರುವುದು ವಿಪರ್ಯಾಸವಾಗಿದೆ.

ಹೊಸದಾಗಿ ನಿವೇಶನಗಳನ್ನು ವಿತರಿಸದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬದಲಿ ನಿವೇಶನ ನೀಡುವ ಆಯುಕ್ತರು ಸೇರಿದಂತೆ ಹಲವು ಅಧಿಕಾರಿಗಳ ವರ್ಗಾವಣೆ ಕಂಡಿತು. ಒಳಚರಂಡಿ ನೀರನ್ನು ನಿರ್ವಹಣೆ ಮಾಡುವಲ್ಲಿ ಸಾಧನೆಯೇನೂ ಮಾಡದ ಬಿಡಬ್ಲ್ಯು ಎಸ್‌ಎಸ್‌ಐ, ಗ್ರಾಹಕರು ಪಾವತಿಸಿದ ನಗದು ಜಲಮಂಡಳಿ ಖಾತೆಗೆ ಹೋಗದೆ ಗುತ್ತಿಗೆ ನೌಕರರು ಮಾಡಿಕೊಂಡ ಹಣ ದುರ್ಬಳಕೆಯ ಪ್ರಕರಣ ಹೆಚ್ಚು ಗಮನಸೆಳೆಯಿತು.

ಸಂಚಾರ ದಟ್ಟಣೆ ಸಮಸ್ಯೆ: ಕೋವಿಡ್ ನಂತರ ಹೆಚ್ಚು ಚಟುವಟಿಕೆ ಕಂಡ ವರ್ಷದಲ್ಲಿ ನಗರದ ರಸ್ತೆ, ಸಂಚಾರ ದಟ್ಟಣೆಯ ಸಮಸ್ಯೆಗಳು ಹೆಚ್ಚು ಕಾಡಿದವು. ರಸ್ತೆಯಲ್ಲಿ ಉಂಟಾದ ಗುಂಡಿಗಳಿಂದ ಸಂಭವಿಸಿದ ಅಪಘಾತದಿಂದ ಹತ್ತಾರು ಜನ ಪ್ರಾಣ ಕಳೆದುಕೊಳ್ಳುವಂತೆ ಆಯಿತು.

ಚಿಲುಮೆ ಪ್ರಕರಣ: ಈ ವರ್ಷ ಚಿಲುಮೆ ಸಂಸ್ಥೆಯ ದತ್ತಾಂಶ ಕಳವು ಪ್ರಕರಣ ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿ ಖುಖ್ಯಾತಿ ಪಡೆಯಿತು, ಇಬ್ಬರು ಐಎಎಸ್‌ ಅಧಿಕಾರಿಗಳಾದ ಶ್ರೀನಿವಾಸ್ ಹಾಗೂ ರಂಗಪ್ಪ ಅವರನ್ನು ಕೇಂದ್ರ ಚುನಾವಣೆ ಆಯೋಗ ಅಮಾನತುಗೊಳಿಸಿತು. ಹೈಕೋರ್ಟ್ ಅದನ್ನು ರದ್ದುಗೊಳಿಸಿತು. ಬಿಬಿಎಂಪಿ ಆಡಳಿತ ವ್ಯವಸ್ಥೆಯಲ್ಲಿ ಅತಿ ಹೆಚ್ಚು ಸದ್ದು ಮಾಡಿದ್ದ ವಿಷಯವೇ ಈ ಬರಿ ಇದಾಗಿತ್ತು. ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೆಲ ದಿನ ಆಸ್ಪತ್ರೆ ಸೇರಿಕೊಂಡಿದ್ದರು.

ರಸ್ತೆ ಗುಂಡಿ, ಪಾದಚಾರಿ ಮಾರ್ಗ ದುರಸ್ತಿ ಮಾಡದಿದ್ದರೆ ಎಂಜಿನಿಯರ್‌ಗಳ ಮೇಲೆ ಕ್ರಮ ಎಂದು ಮುಖ್ಯ ಆಯುಕ್ತರು ಹಲವು ಬಾರಿ ಈ ವರ್ಷ ಎಚ್ಚರಿಕೆ ನೀಡಿದರೂ ಸಹ ವರ್ಷದ ಅಂತ್ಯದವರೆಗೆ ಆಗಲಿಲ್ಲ. ಕೊನೆಗೆ ತುಷಾರ್ ಗಿರಿನಾಥ್ 'ಗುಂಡಿ ಮುಕ್ತರಸ್ತೆ' ಅಸಾಧ್ಯ ಎಂದು ಘೋಷಿಸಿದರು. ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯಲ್ಲಿ 970 ಕೋಟಿ ರೂ ಭ್ರಷ್ಟಾಚಾರದ ವಿವರಣೆಗೆ ಕೋರಿ ಜಾರಿ ನಿರ್ದೇಶನಾಲಯವು(ಇಡಿ) ಬಿಬಿಎಂಪಿ ಮುಖ್ಯ ಆಯುಕ್ತರಿಗೆ ವರ್ಷಾಂತ್ಯದಲ್ಲಿ ನೋಟಿಸ್‌ ಜಾರಿ ಮಾಡಿದ್ದು ಸಹ ಮಹತ್ತರ ಬೆಳವಣಿಗಯಾಗಿತ್ತು.

ನಗರದಲ್ಲಿವೆ 30 ಸಾವಿರ ಗುಂಡಿಗಳು: ಮೂಲಸೌಕರ್ಯ ಗಳನ್ನು ನೀಡಬೇಕಾದ ಬಿಬಿಎಂಪಿ, ವರ್ಷದ ಎಲ್ಲ ತಿಂಗಳೂ ಸುರಿದ ಮಳೆಯ ನೆಪವೊಡ್ಡಿ ರಸ್ತೆಯ ಗುಂಡಿಗಳನ್ನೇ ಮುಚ್ಚಲಿಲ್ಲ. ನಗರದಲ್ಲಿ 30 ಸಾವಿರ ಗುಂಡಿಗಳಿವೆ ಎಂದು ಅಧಿಕೃತವಾಗಿ ಬಿಬಿಎಂಪಿ ಒಪ್ಪಿಕೊಂಡಿತು. ಡಿಸೆಂಬರ್‌ನಲ್ಲಿ ಮಾತ್ರ ರಸ್ತೆ ಗುಂಡಿಗಳು ಮುಚ್ಚಿದಂತಾದವು. ಕೆಲವು ರಸ್ತೆಗಳು ಟಾರ್ ಕಂಡವು. ಇದರಿಂದ ಸಮಸ್ಯೆಯ ತೀವ್ರತೆ ಕಡಿಮೆಯಾಯಿತೆ ಹೊರತು, ನಿವಾರಣೆಯಾಗಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಜೂನ್ ಹಾಗೂ ನವೆಂಬರ್‌ನಲ್ಲಿ ನಗರಕ್ಕೆ ಬಂದಾಗ ರಸ್ತೆಗಳು ರಾತ್ರೋರಾತ್ರಿ ಡಾಂಬರು ಕಂಡಿದ್ದವು. ಕೊಮ್ಮಘಟ್ಟ ರಸ್ತೆ 24 ಗಂಟೆಯಲ್ಲೇ ಕುಸಿದು, ಪ್ರಧಾನಿ ಕಚೇರಿಯೂ ಇದರ ಬಗ್ಗೆ ವರದಿ ಕೇಳಿದ್ದು ಮುಖ್ಯವಾಗಿತ್ತು.

ಆರಂಭವಾದ ಶಿವರಾಂ ಕಾರಂತ್ ಬಡಾವಣೆಯ ಕಾಮಗಾರಿ: ಹೊಸ ಬಡಾವಣೆಗಳನ್ನು ನಿರ್ಮಿಸಿ, ಹೊಸ ನಿವೇಶನಗಳನ್ನು ಹಂಚುವ ಪ್ರಕ್ರಿಯೆಯಲ್ಲಿ ಹಿಂದುಳಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬದಲಿ ನಿವೇಶನ ನೀಡಲು ಪ್ರಾಮುಖ್ಯ ನೀಡಿತ್ತು. ಗೃಹ ಸಚಿವ ಅರಗ ಜ್ಞಾನೇಂದ್ರ ರಿಗೆ ನೀಡಿದ್ದ ಬದಲಿ ನಿವೇಶನದ ಬಗ್ಗೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.

ಇದರಿಂದಾಗಿಯೇ ಬಿಡಿಎ ಆಯುಕ್ತ ರಾಜೇಶ್ ಗೌಡ ಸೇರಿದಂತೆ ಹಲವು ಅಧಿಕಾರಿಗಳು ವರ್ಗಾವಣೆಯೂ ಆದರು. ಅತಿಹೆಚ್ಚು ವಾಹನ ದಟ್ಟಣೆಯ ಜಂಕ್ಷನ್‌ನಲ್ಲಿ ಒಂದಾದ ಹೆಬ್ಬಾಳ ಮೇಲೇತುವೆಯ ವಿಸ್ತರಣೆ ಬಿಡಿಎಯ ಪ್ರಮುಖ ಯೋಜನೆಯಾದರೂ ಅದನ್ನು ಕಾರ್ಯಗತಗೊಳಿಸಲಾಗಲಿಲ್ಲ. 2,560 ಎಕರೆ ಭೂಮಿಯನ್ನು ಸ್ವಾಧೀನಕೊಳ್ಳಬೇಕಾದ 73 ಕಿ.ಮೀ ಉದ್ದದ ಪೆರಿಫೆರಲ್ ವರ್ತುಲ ರಸ್ತೆ (ಪಿಆರ್ ಆರ್) ನಿರ್ಮಾಣ ಮತ್ತೆ ಮುನ್ನೆಲೆಗೆ ಬಂತಾದರೂ, ಪರಿಸರ ಇಲಾಖೆಯ ಸಮ್ಮತಿ ಸೇರಿದಂತೆ 36 ಸಾವಿರ ಮರಗಳ ನಾಶ ಹಾಗೂ ರೈತರಿಗೆ ಪರಿಹಾರದ ಗೊಂದಲಗಳು ಯೋಜನೆಯನ್ನು ಸ್ಥಗಿತಗೊಳಿಸಿದವು. ಸುಪ್ರೀಂ ಕೋರ್ಟ್ ಆದೇಶದಂತೆ ಕೊನೆಗೂ ಶಿವರಾಮ ಕಾರಂತ ಬಡಾವಣೆ ನಿರ್ಮಾಣ ವರ್ಷದ ಅಂತ್ಯದಲ್ಲಿ ಆರಂಭವಾಯಿತು.

ಜಲಮಂಡಳಿ ಅಕ್ರಮ: ಬಿಬಿಎಂಪಿ ವ್ಯಾಪ್ತಿಗೆ ಸೇರಿದ 110 ಹಳ್ಳಿಗಳು ಸೇರಿದಂತೆ ಹೊರವಲಯದ ಬಡಾವಣೆಗಳಿಗೆ ಒಳಚರಂಡಿ ವ್ಯವಸ್ಥೆನೀರಿನ ಸೌಲಭ್ಯ ಒದಗಿಸುವುದು ಸೇರಿದಂತೆ ಕೆರೆಗಳಿಗೆ ಒಳಚರಂಡಿ ನೀರನ್ನು ಯೋಜನೆಗಳು ಬಿಡಬ್ಲ್ಯು ಎಸ್‌ಎಸ್‌ಬಿಯಿಂದ ಈ ವರ್ಷ ಅನುಷ್ಠಾನವಾಗಲಿಲ್ಲ. ಆದರೆ, ಗ್ರಾಹಕರು ಪಾವತಿಸಿದ ಕೋಟ್ಯಂತರ ರೂಪಾಯಿಗಳನ್ನು ಗುತ್ತಿಗೆ ನೌಕರರನ್ನು ಮಂಡಳಿಗೆ ಕಟ್ಟಡ ದುರುಪಯೋಗಪಡಿಸಿಕೊಂಡರು. ಇದನ್ನು ಕಂಡುಹಿಡಿಯಲು ವರ್ಷಗಟ್ಟಲೆ ತೆಗೆದುಕೊಂಡ ಮಂಡಳಿ, ಕೊನೆಗೆ ಅದನ್ನು ಪರಿಶೀಲಿಸಿ, ಪೊಲೀಸ್ ಠಾಣೆಗೆ ದೂರು ನೀಡಿತ್ತು. ಈ ಸಂಬಂಧ 9 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಕಡಿಮೆಯಾದ ಸೋಂಕಿನ ತೀವ್ರತೆ: ವೈರಾಣುವಿನ ರೂಪಾಂತರಿ ಓಮೈಕ್ರೊನ್ ಪತ್ತೆಯಿಂದ ನಗರದಲ್ಲಿ ಕೋವಿಡ್ ಮೂರನೇ ಅಲೆ ಕಾಣಿಸಿಕೊಂಡಿತು. ಜನವರಿ ತಿಂಗಳಲ್ಲಿ ದಿನ ವೊಂದಕ್ಕೆ 30 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿ, ಸಕ್ರಿಯ ಪ್ರಕರಣಗಳು 2 ಲಕ್ಷದ ಗಡಿ ದಾಟಿತ್ತು. ಖಾಸಗಿ ಆಸ್ಪತ್ರೆ ಗಳ ಸಹಭಾಗಿತ್ವದಲ್ಲಿ ಕೋವಿಡ್ ಚಿಕಿತ್ಸೆಗೆ ನಗರದಲ್ಲಿ 5 ಸಾವಿರಕ್ಕೂ ಅಧಿಕ ಹಾಸಿಗೆಗಳನ್ನು ಗುರುತಿಸಲಾಗಿತ್ತು, ಮೊದಲೆರಡು ಅಲೆಗೆ ಹೋಲಿಸಿದರೆ ಸೋಂಕಿನ ತೀವ್ರತೆ ಕಡಿಮೆ ಇದ್ದಿದ್ದರಿಂದ ಅಷ್ಟಾಗಿ ಸಾವು-ನೋವು ಸಂಭವಿಸಲಿಲ್ಲ.

ಚೇತರಿಸಿಕೊಂಡ ವೈದ್ಯಕೀಯ ಪ್ರವಾಸೋದ್ಯಮ: ಕೋವಿಡ್ 3ನೇ ಅಲೆಯ ಬಳಿಕ (ಮಾರ್ಚ್ ನಂತರ), ಚಿಕಿತ್ಸೆಗೆ ಆದ್ಯತೆ ನೀಡಲಾಯಿತು. ಇದರಿಂದಾಗಿ ನಗರದ ವೈದ್ಯಕೀಯ ಪ್ರವಾಸೋದ್ಯಮ ಚೇತರಿಸಿಕೊಂಡಿತು. ವಿದೇಶದಿಂದ ರೋಗಿಗಳು ಮತ್ತೆ ಬರಲಾರಂಭಿಸಿದ್ದಾರೆ. ಆಫ್ರಿಕಾ, ಮಧ್ಯಪೂರ್ವ ದೇಶಗಳು, ಬಾಂಗ್ಲಾದೇಶ, ಆಫ್ಘಾನಿಸ್ತಾನ, ಶ್ರೀಲಂಕಾದವರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಶಸ್ತಚಿಕಿತ್ಸೆಗೆ ಒಳಗಾದರು. ಆಸ್ಪತ್ರೆಗಳ ಮೂಲಸೌಕರ್ಯ ವೃದ್ಧಿಗೂ ಆದ್ಯತೆ ನೀಡಲಾಯಿತು.

ಗರಿಗೆದರಿದ ಸಾಂಸ್ಕೃತಿಕ ಚಟುವಟಿಕೆ:ನಗರದಲ್ಲಿ ಮಾರ್ಚ್ ಬಳಿಕ ಕೋವಿಡ್ ನಿಯಂತ್ರಣಕ್ಕೆ ಬಂದಿದ್ದರಿಂದ ನಿರ್ಬಂಧಗಳನ್ನು ತೆರವುಗೊಳಿಸಿ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಯಿತು. ಇದರಿಂದಾಗಿ ವರ್ಷದ ಮೊದಲಾರ್ಧದ ಬಳಿಕ ಸಂಗೀತ, ನೃತ್ಯ, ನಾಟಕ ಸೇರಿ ವಿವಿಧ ಕಲಾ ಚಟುವಟಿಕೆಗಳು ಗರಿಗೆದರಿದವು.

ಬಿಎಂಟಿಸಿಯಲ್ಲಿ ಡಿಜಿಟಲ್ ಪಾವತಿ:ಎಲೆಕ್ಟಿಕ್‌ ಬಸ್‌ಗಳ ಸಂಚಾರ ಹೆಚ್ಚಾಗಿ 300 ಎಲೆಕ್ಟಿಕ್ ಬಸ್‌ಗಳು ಬಿಎಂಟಿಸಿಗೆ ಸೇರ್ಪಡೆಗೊಂಡಿದ್ದು, ನಗರದಲ್ಲಿ ಸಂಚರಿಸುತ್ತಿವೆ. ಪ್ರಯಾಣಿಕರು ಎಲ್ಲಾ ರೀತಿಯ ಪಾಸ್‌ಗಳನ್ನು ಆಪ್ ನಲ್ಲಿ ಪಡೆದುಕೊಳ್ಳಲು ಬಿಎಂಟಿಸಿ ಟುಮ್ಯಾಕ್ ಆ್ಯಪ್ ಬಿಡುಗಡೆ ಮಾಡಿತು. ನಗದು ರಹಿತ ಮತ್ತು ಕಾಗದ ರಹಿತ ವಹಿವಾಟಿನ ಕಡೆ ಮುಖ ಮಾಡಿದ ಬಿಎಂಟಿಸಿ, ಡಿಜಿಟಲ್ ಪಾವತಿ ಮೂಲಕವೇ ಪಾಸ್ ಖರೀದಿಸಲು ಅವಕಾಶ ಕಲ್ಪಿಸಿತು. ಪ್ರಯಾಣಿಕರನ್ನು ಸೆಳೆಯಲು ಮುನ್ನೆಲೆಗೆ ವೋಲ್ವೋ ಬಸ್‌ಗಳ ಪ್ರಯಾಣ ದರವನ್ನು ಕಡಿಮೆ ಮಾಡಿತು.

2022ರಲ್ಲಿ ಹೊಸ ಮೆಟ್ರೊ ರೈಲು ಮಾರ್ಗಗಳು ಸಾರ್ವಜನಿಕರಿಗೆ ಸಮರ್ಪಣೆಯಾಗದಿದ್ದರೂ, ಕಾಮಗಾರಿಗಳು ಅಂತಿಮ ಹಂತಕ್ಕೆ ಬಂದಿದ್ದು, ಮೂರು ಹೊಸ ಮಾರ್ಗಗಳು ಕಾರ್ಯಾರಂಭಕ್ಕೆ ಸಜ್ಜಾಗಿವೆ. ಬೆಂಗಳೂರು ಮೆಟ್ರೊ ರೈಲು ಮಾರ್ಗದ ಅತಿ ದೊಡ್ಡ ಸುರಂಗ ಮಾರ್ಗದ ಕಾಮಗಾರಿ ವೇಗವಾಗಿ ನಡೆದಿದೆ.

ಇದನ್ನೂ ಓದಿ:ಮಹಾನಗರಗಳ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚಿಸಲು ಅಧ್ಯಯನ, ವಸತಿ ಸೌಕರ್ಯ ಅಭಿವೃದ್ಧಿ - ಅಮಿತ್ ಶಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.