ETV Bharat / state

ಕೋವಿಡ್​​ನಿಂದ ಮೃತಪಟ್ಟವರ ದಹನಕ್ಕೂ ಸರದಿ ಸಾಲು.. ಪಾಲಿಕೆ ವ್ಯಾಪ್ತಿಯ 12 ಚಿತಾಗಾರಗಳಿಗೆ ಅನುಮತಿ - ಚಿತಾಗಾರದ ಬಳಿ ಆ್ಯಂಬುಲೆನ್ಸ್​ಗಳ ಸಾಲುಗಟ್ಟಿ ನಿಲ್ಲುತ್ತಿವೆ

ಬೆಂಗಳೂರಲ್ಲಿ ಕೊರೊನಾ ಮರಣಮೃದಂಗ ಬಾರಿಸುತ್ತಿದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆ ಬೆಳಗ್ಗೆ 7ಕ್ಕೆ ಮೃತದೇಹಗಳ ಅಂತ್ಯಕ್ರಿಯೆ ಆರಂಭಗೊಳ್ಳುತ್ತಿದ್ದು, ಕತ್ತಲಾದರೂ ಇದು ನೆರವೇರುತ್ತಲೇ ಇದೆ. ನಗರದ ಹಲವು ಚಿತಾಗಾರಗಳ ಬಳಿ ಆ್ಯಂಬುಲೆನ್ಸ್​ಗಳು ಸಾಲುಗಟ್ಟಿ ನಿಂತಿರುತ್ತವೆ.

long-que-for-cremation-of-bodies-in-bangalore
ಕೋವಿಡ್​​ನಿಂದ ಮೃತಪಟ್ಟವರ ದಹನಕ್ಕೂ ಸರದಿ ಸಾಲು.
author img

By

Published : Apr 22, 2021, 7:36 PM IST

ಬೆಂಗಳೂರು: ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದ್ದು, ಇತ್ತ ಚಿತಾಗಾರದ ಬಳಿ ಆ್ಯಂಬುಲೆನ್ಸ್​ಗಳು ಸಾಲುಗಟ್ಟಿ ನಿಲ್ಲುತ್ತಿವೆ. ನಗರದ ಸುಮನಹಳ್ಳಿ ಚಿತಾಗಾರದೊಳಗೆ ಕೋವಿಡ್​​​ನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಸರದಿಯಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ.

ಕೋವಿಡ್​​ನಿಂದ ಮೃತಪಟ್ಟವವರ ಶವ ತಂದಿರುವ 7 ಆ್ಯಂಬುಲೆನ್ಸ್​ಗಳು ನಿಂತಿರುವುದು ಕಂಡುಬರುತ್ತಿದೆ. ನಿನ್ನೆ ಮಧ್ಯರಾತ್ರಿಯಿಂದ ಅಂತ್ಯಕ್ರಿಯೆ ನಡೆಸುತ್ತಿರುವ ಚಿತಾಗಾರದ ಸಿಬ್ಬಂದಿ ಒಟ್ಟು 40 ಮೃತದೇಹಗಳ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಕೋವಿಡ್​​ನಿಂದ ಮೃತಪಟ್ಟವರ ದಹನಕ್ಕೂ ಸರದಿ ಸಾಲು

ಬೆಳಗ್ಗೆ 7ಕ್ಕೆ ಮೃತದೇಹಗಳ ಅಂತ್ಯಕ್ರಿಯೆ ಆರಂಭಗೊಳ್ಳುತ್ತಿದ್ದು, ಕತ್ತಲಾದರೂ ಅಂತ್ಯಕ್ರಿಯೆ ನೆರವೇರುತ್ತಲೇ ಇದೆ. ನಗರದ ಹಲವು ಚಿತಾಗಾರದ ಬಳಿ ಆ್ಯಂಬುಲೆನ್ಸ್​ಗಳು ಸಾಲುಗಟ್ಟಿ ನಿಂತಿವೆ.

ಈ ಸಂಬಂಧ ಒತ್ತಡ ತಗ್ಗಿಸಲು ನಿರ್ವಹಣೆಯಲ್ಲಿರುವ 13 ರಲ್ಲಿ 12 ಚಿತಾಗಾರಗಳನ್ನು ಇಂದಿನಿಂದ ಕೋವಿಡ್​​ನಿಂದ ಮೃತಪಟ್ಟವರಿಗಾಗಿ ತೆರೆದಿರುವುದಾಗಿ ಬಿಬಿಎಂಪಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.