ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಡೀಲ್ ಲಿಂಕ್ ಆರೋಪ ಪ್ರಕರಣ ಸಂಬಂಧ ಇಂದು ಸಿಸಿಬಿ ಪೊಲೀಸರು ಖ್ಯಾತ ನಟಿಯೋರ್ವರ ಆಪ್ತನನ್ನು ವಿಚಾರಣೆಗೆ ಒಳಪಡಿದ್ದಾರೆ. ಮುಂಜಾನೆಯಿಂದ ಚಾಮರಾಜಪೇಟೆ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಲೋಕೇಶ್ ಸಿಸಿಬಿ ವಿಚಾರಣೆಯಲ್ಲಿ ಭಾಗಿಯಾಗಿದ್ದರು.
ವಿಚಾರಣೆ ಬಳಿಕ ಮಾತನಾಡಿದ ಲೋಕೇಶ್, ಸಿಸಿಬಿ ನೋಟಿಸ್ ನೀಡಿದ್ದ ಹಿನ್ನೆಲೆ ಇಂದು ವಿಚಾರಣೆ ಹಾಜರಾಗಿದ್ದೆ. ಬಳಿಕ ಅಗತ್ಯವಿದ್ದಲ್ಲಿ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆಂದು ತಿಳಿಸಿದ್ದಾರೆ.
ನಶೆ ಲೋಕದಲ್ಲಿ ಭಾರಿ ಬೆಳವಣಿಗೆ ನಡೆಯುತ್ತಿರುವ ಕಾರಣ ಸಿಸಿಬಿ ಪೊಲೀಸರು ನಟಿ ಓರ್ವರ ಜೊತೆಗಿದ್ದ ಲೋಕೆಶ್ ವಿಚಾರಣೆ ಗೆ ಕರೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಸದ್ಯ ಮೊಬೈಲ್ ವಶಕ್ಕೆ ಪಡೆದು, ಮೊಬೈಲ್ ಕಾಲ್ ಡಿಟೇಲ್ಸ್ ಆಧಾರದ ಮೇರೆಗೆ ಮತ್ತೊಮ್ಮೆ ಡ್ರಗ್ ಮಾಫಿಯಾದ ವಿಚಾರಣೆ ನಡೆಸಲಿದ್ದಾರೆ. ಸಿಸಿಬಿ ಪೊಲೀಸರು ನಟಿ ಹೆಸರನ್ನ ಗೌಪ್ಯವಾಗಿ ಇಟ್ಟಿದ್ದು, ಆಪ್ತರ ವಿಚಾರಣೆ ಬಳಿಕ ಮತ್ತಷ್ಟು ಮಾಹಿತಿ ಪಡೆದು ಪ್ರತಿಷ್ಠಿತ ನಟಿಗೆ ನೋಟಿಸ್ ನೀಡಲಿದ್ದಾರೆ