ETV Bharat / state

ಬೆಂಗಳೂರಲ್ಲಿ ಲೋಕಾಯುಕ್ತ ದಾಳಿ: ಲಂಚ ಪಡೆಯುತ್ತಿದ್ದ ಕಂದಾಯ ಇಲಾಖೆ ಅಧಿಕಾರಿ ಬಲೆಗೆ - ಲಂಚ ಪಡೆಯುತ್ತಿದ್ದ ವಿಶೇಷ ಶಿರಸ್ತೇದಾರ್

ಬೆಂಗಳೂರು ಕಂದಾಯ ಭವನ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ವಿಶೇಷ ಶಿರಸ್ತೇದಾರ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ​ ಬಲೆಗೆ ಬಿದ್ದಿದ್ದಾರೆ.

lokayukta-raid-on-bengaluru-revenue-office
ಬೆಂಗಳೂರಲ್ಲಿ ಲೋಕಾಯುಕ್ತ ದಾಳಿ: ಲಂಚ ಪಡೆಯುತ್ತಿದ್ದ ಕಂದಾಯ ಇಲಾಖೆ ಅಧಿಕಾರಿ ಬಲೆಗೆ
author img

By

Published : Sep 15, 2022, 3:58 PM IST

ಬೆಂಗಳೂರು: ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಸಮರ ಮುಂದುವರೆಸಿದ್ದಾರೆ. ಬೆಂಗಳೂರು ಕಂದಾಯ ಭವನ ಕಚೇರಿಯಲ್ಲಿ ಲಂಚ ಪಡೆದುಕೊಳ್ಳುವಾಗ ವಿಶೇಷ ಶಿರಸ್ತೇದಾರ್ ರೆಡ್ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ.

ಕಂದಾಯ ಭವನ ಕಚೇರಿಯಲ್ಲಿ ವಿಶೇಷ ಶಿರಸ್ತೇದಾರ್ ಆಗಿರುವ ಶ್ರೀಕಾಂತ್ ಲೋಕಾಯುಕ್ತ ಬಲೆಗೆ ಬಿದ್ದವರು. ದೂರುದಾರದಿಂದ 45 ಸಾವಿರ ಲಂಚದ ಹಣ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿದೆ.

ಬಿಡಿಎಗೆ ಸಲ್ಲಿಸಲು ನೈಜತಾ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯಿಂದ ಶಿರಸ್ತೇದಾರ್ 13 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದರು. ಇಂದು 45 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಮರುಸ್ಥಾಪನೆ ಬೆನ್ನಲ್ಲೇ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ: ಲಂಚ ಪಡೆಯುತ್ತಿದ್ದ ಬಿಬಿಎಂಪಿ ಜಂಟಿ ಆಯುಕ್ತ ಅರೆಸ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.