ಬೆಂಗಳೂರು: ಖಾತೆ ಮಾಡಿಕೊಡಲು ದೂರುದಾರರಿಂದ ಮಧ್ಯವರ್ತಿ ಮೂಲಕ 5 ಲಕ್ಷ ರೂ ಹಣ ಪಡೆಯುವಾಗ ಕೆಎಎಸ್ ಮಹಿಳಾ ಅಧಿಕಾರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.
ವರ್ಷಾ ಒಡೆಯರ್ ಲೊಕಾಯುಕ್ತ ಬಲೆಗೆ ಬಿದ್ದ ಕೆಎಎಸ್ ಅಧಿಕಾರಿ. 2014ನೇ ಬ್ಯಾಚ್ ಅಧಿಕಾರಿಯಾಗಿರುವ ಇವರು ಬೆಂಗಳೂರು ನಗರ ಉತ್ತರ ವಿಭಾಗದ ವಿಶೇಷ ತಹಶೀಲ್ದಾರ್ ಆಗಿ ಕಂದಾಯ ಭವನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಖಾತೆ ಮಾಡಿಸಿ ಕೊಡಲು ದೂರುದಾರರಿಗೆ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಮಾತುಕತೆ ಮಧ್ಯವರ್ತಿ ಮೂಲಕ 5 ಲಕ್ಷ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಮಹಿಳಾ ಕೆಎಎಸ್ ಅಧಿಕಾರಿ ಹಾಗೂ ಮಧ್ಯವರ್ತಿಯನ್ನು ವಶಕ್ಕೆ ಪಡೆದುಕೊಂಡ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
(ಓದಿ: ಲಂಚದ ಹಣ ಬಲವಂತವಾಗಿ ಜೇಬಿಗೆ ತುರುಕಿದರು ಎಂದು ಹೈಕೋರ್ಟ್‌ಗೆ ತಿಳಿಸಿದ ಅಧಿಕಾರಿ.. ಮುಂದೇನಾಯ್ತು?)