ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನಲೆ ಅಲ್ಪಸಂಖ್ಯಾತರ ಬೃಹತ್ ಸಮಾವೇಶ ನಡೆಸಲಾಗಿದೆ. ನಮ್ಮು ಮುಸ್ಲಿಂ ಮತಗಳೆಲ್ಲ ಕಾಂಗ್ರೆಸ್ಗೆ ಬೀಳಬೇಕು ಸಚಿವ ಜಮೀರ್ ಅಹ್ಮನ್ ಖಾನ್ ಕರೆ ಕೊಟ್ಟರು.
ನಗರದ ಅರಮನೆ ಮೈದಾನದಲ್ಲಿ ನಡೆದ ಅಲ್ಪಸಂಖ್ಯಾತ ಸಮಾವೇಶ ಉದ್ನದೇಶಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಏನೇನೋ ಆಶ್ವಾಸನೆ ಕೊಟ್ಟಿದ್ದರು, ಆದ್ರೆ ಕಾಳಧನ ಕಂಟ್ರೋಲ್ ಮಾಡ್ತೇವೆ ಅಂದಿದ್ದರು. ಆದ್ರೆ ಎಲ್ಲಿ ಆಯ್ತು? 2 ಕೋಟಿ ಉದ್ಯೋಗ ಕೊಡ್ತೇವೆ ಅಂದ್ರು ಕೊಟ್ಟರಾ? ಎಂದು ಪ್ರಶ್ನಿಸಿದರು.
ಅಲ್ಲದೆ ಪ್ರಧಾನಿ ಬರೀ ಸುಳ್ಳು ಹೇಳೋದ್ರಲ್ಲಿ ಕಾಲ ಕಳೆಯುತ್ತಾರೆ. ಮನ್ ಕೀ ಬಾತ್ ಬಿಟ್ರೆ ಅವರಿಗೆ ಬೇರೆ ಗೊತ್ತಿಲ್ಲ. ಅವರಿಗೆ ಮುಸ್ಲೀಮರು, ಕ್ರಿಶ್ಚಿಯನ್ನರು ಬೇಕಿಲ್ಲವಂತೆ. ನಮ್ಮ ಮತಗಳು ಅವರಿಗೆ ಬೇಕಿಲ್ಲವಂತೆ. ಅವರಿಗೆ ಕೇವಲ ಹಿಂದೂಸ್ತಾನ್ ಮಾತ್ರ ಬೇಕಿದೆ. ಆದ್ರೆ ಕಾಂಗ್ರೆಸ್ಗೆ ಎಲ್ಲರೂ ಒಂದೇ ಎಂದು ಜಮೀರ್ ಅಹ್ಮದ್ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರು, ದಲಿತರು, ಎಲ್ಲರಿಗೂ ಅವಕಾಶ ನೀಡಿದೆ. ಹೀಗಾಗಿ ನೀವೆಲ್ಲರೂ ಕಾಂಗ್ರೆಸ್ ಬೆಂಬಲಿಸಬೇಕು. ನಮ್ಮನ್ನ ವಿರೋಧಿಸುವ ಬಿಜೆಪಿಗೆ ತಕ್ಕ ಉತ್ತರ ನೀಡಬೇಕು. ಲೋಕಸಭಾ ಚುನಾವಣೆಯಲ್ಲಿ ನಮಗೆ ಹೆಚ್ಚಿನ ಅವಕಾಶ ನೀಡಬೇಕು. ಹಾವೇರಿ, ಬೆಂಗಳೂರು ಕೇಂದ್ರದಲ್ಲಿ ಅವಕಾಶ ನೀಡಬೇಕು. ಸಿದ್ದರಾಮಯ್ಯನವರು ಈ ದಿಸೆಯಲ್ಲಿ ಪ್ರಯತ್ನ ಮಾಡ್ತಾರೆ. ಶೇ.50 ರಷ್ಟು ಮತ ಅಲ್ಲ ನೂರಕ್ಕೆ ನೂರು ಮತಗಳನ್ನು ಕಾಂಗ್ರೆಸ್ಗೇ ಹಾಕಬೇಕು ಎಂದು ಮುಸ್ಲಿಂ ಸಮುದಾಯಕ್ಕೆ ಸಚಿವ ಜಮೀರ್ ಅಹ್ಮದ್ ಕರೆಕೊಟ್ಟರು.
ಸಮಾವೇಶದಲ್ಲಿ ಸಚಿವರಾದ ಯು.ಟಿ. ಖಾದರ್, ರಹೀಂಖಾನ್, ಮಾಜಿ ಸಚಿವ ರೋಷನ್ ಬೇಗ್, ನಾಸೀರ್ ಹುಸೇನ್, ಎನ್.ಎ. ಹ್ಯಾರೀಸ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.