ಬೆಂಗಳೂರು: ಲೋಹಿಯಾ ತತ್ವಗಳನ್ನು 'ಇಂದಿಗೂ ಬೇಕಾದ ಲೋಹಿಯಾ' ಲೇಖಕರಾದ ನಬೀಲ್ ಹಾಗೂ ಎಚ್ ವಿ ಮಂಜುನಾಥ್ ವಿರಚಿತ ಪುಸ್ತಕವನ್ನು ನಗರದ ಗಾಂಧಿಭವನದಲ್ಲಿ ಬಿಡುಗಡೆ ಮಾಡಲಾಯಿತ
ರಾಮ್ ಮನೋಹರ್ ಲೋಹಿಯಾರವರ 109ನೆ ಜನ್ಮದಿನಾಚಾರಣೆ ದಿನಾಚರಣೆ ಅಂಗವಾಗಿ ಈ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು. ಬೆಂಗಳೂರಿನ ಡಾ ರಾಮಮನೋಹರ್ ಲೋಹಿಯಾ ಸಮತಾ ವಿದ್ಯಾಲಯ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರ ಸಹಬಾಗಿತ್ವದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮಾಜಿ ಸಿಎಂ ಸಿದ್ದರಾಮಯ್ಯ ಪುಸ್ತಕ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು, ಲೋಹಿಯಾ ಹಿಂದೆಯೂ, ಇಂದಿಗೂ, ಮುಂದೆಯೂ ಬೇಕಾದವರು. ಲೋಹಿಯಾ ಹಾಗೂ ಅಂಬೇಡ್ಕರ್ ಸಾಮಾಜಿಕ ಸಮಸ್ಯೆಗಳನ್ನು ಬಹಳ ಆಳವಾಗಿ ಯೋಚಿನೆ ಮಾಡಿ, ಸಲಹೆ ಹಾಗೂ ಮಾರ್ಗದರ್ಶನ ನೀಡಿದರು. ಲೋಹಿಯಾ ಕಾಂಗ್ರೆಸ್ನಲ್ಲಿ ಇದ್ದವರು ಹಾಗಾಗಿ ಕಾಂಗ್ರಸ್ ಸಮಾಜವಾದಿ ಆಲೋಚನೆ ಇರುವ ಪಕ್ಷ. ಕಡಿಮೆಕಾಲಾವಧಿ ಇದ್ದ ಲೋಹಿಯಾ ಅಪಾರ ಕೊಡುಗೆ ನೀಡಿದ್ದಾರೆ. ಲಿಂಗ ತಾರತಮ್ಯ ಈಗಲೂ ಸಮಾಜದಲ್ಲಿ ಇದೆ ಅದು ಹೋಗಬೇಕು ಎಂದು ಲೋಹಿಯಾ ರವರ ಚಿಂತನೆಗಳನ್ನು ಸ್ಮರಿಸಿದಿರು.