ETV Bharat / state

ಲಾಕ್​ಡೌನ್​​​ ಎಫೆಕ್ಟ್​​​: ರಾಜ್ಯ ಸರ್ಕಾರದ ಬಜೆಟ್​​ ಪರಿಷ್ಕರಣೆಯ ಕಠಿಣ ಹೆಜ್ಜೆ ಹೇಗಿದೆ ನೋಡಿ! - ಲಾಕ್​ಡೌನ್​​​

ಲಾಕ್‌ಡೌನ್ ಹಿನ್ನೆಲೆ ಈಗಾಗಲೇ ರಾಜ್ಯ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ‌. ಸಂಪನ್ಮೂಲ ಸಂಗ್ರಹ ಬರಿದಾಗಿರುವ ಕಾರಣ ರಾಜ್ಯ ಸರ್ಕಾರ ಬಹುವಾಗಿ ಕೇಂದ್ರ ಸರ್ಕಾರದತ್ತ ಮುಖ‌ ಮಾಡಿದೆ.

Lockdown: State Government Budget Revision
ರಾಜ್ಯ ಸರ್ಕಾರ
author img

By

Published : May 7, 2020, 9:46 PM IST

ಬೆಂಗಳೂರು: ಈಗಾಗಲೇ ಕೊರೊನಾ ಲಾಕ್‌ಡೌನ್ ಹಿನ್ನೆಲೆ ರಾಜ್ಯದ ಬೊಕ್ಕಸ ಖಾಲಿಯಾಗಿದೆ. ಇದರ ಪರಿಣಾಮವಾಗಿ ಈ ವರ್ಷದ ರಾಜ್ಯ ಬಜೆಟ್ ದೊಡ್ಡ ಪ್ರಮಾಣದಲ್ಲಿ ಪರಿಷ್ಕರಣೆಯಾಗಲಿದೆ.

ಲಾಕ್‌ಡೌನ್ ಹಿನ್ನೆಲೆ ಈಗಾಗಲೇ ರಾಜ್ಯ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ‌. ಸಂಪನ್ಮೂಲ ಸಂಗ್ರಹ ಬರಿದಾಗಿರುವ ಕಾರಣ ರಾಜ್ಯ ಸರ್ಕಾರ ಬಹುವಾಗಿ ಕೇಂದ್ರ ಸರ್ಕಾರದತ್ತ ಮುಖ‌ ಮಾಡಿದೆ. ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದ್ದರೂ ಆರ್ಥಿಕ ವ್ಯವಸ್ಥೆ ಹಳಿಗೆ ಬರಲು ಸಾಕಷ್ಟು ಸಮಯ ತೆಗೆದುಕೊಳ್ಳಲಿದೆ.

ತೀವ್ರ ಆರ್ಥಿಕ ಸಂಕಷ್ಟದ ಹಿನ್ನೆಲೆ 2.37 ಲಕ್ಷ ಕೋಟಿ ರೂ. ಮೊತ್ತದ ಆಯವ್ಯಯ ಅನುಷ್ಠಾನ ಅಸಾಧ್ಯವಾಗಿದೆ. ಹೀಗಾಗಿ ರಾಜ್ಯ ಬಜೆಟ್​ನಲ್ಲಿ ಪರಿಷ್ಕರಣೆ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಆರ್ಥಿಕ ಇಲಾಖೆ ಈಗಾಗಲೇ ಕೆಲ ಹೆಜ್ಜೆಗಳನ್ನು ಇಡುತ್ತಿದ್ದು, ಬಜೆಟ್​ನ ಹೊಸ ಯೋಜನೆಗಳಿಗೆ ಬ್ರೇಕ್ ಹಾಕಿದೆ.

Lockdown: State Government Budget Revision
ರಾಜ್ಯ ಸರ್ಕಾರದ ಬಜೆಟ್ ಪರಿಷ್ಕರಣೆ

ರಾಜ್ಯ ಬಜೆಟ್ ಪರಿಷ್ಕರಣೆ ಹೇಗಿರಲಿದೆ?:

ಆರ್ಥಿಕ ಇಲಾಖೆ ಆಗಲೇ ರಾಜ್ಯದ ಪ್ರಮುಖ ವೆಚ್ಚಗಳನ್ನು ಹೊರತುಪಡಿಸಿ ಬೇರೆ ಯಾವುದಕ್ಕೂ ಹಣ ಬಿಡುಗಡೆ ಮಾಡದಂತೆ ನಿರ್ಬಂಧ ಹೇರಿದೆ.

ಕೊರೊನಾ ನಿಯಂತ್ರಣಕ್ಕಾಗಿ ಅನುದಾನ ಬಿಡುಗಡೆ ಸದ್ಯದ ತುರ್ತು ಆದ್ಯತೆ ಎಂದು ಆರ್ಥಿಕ ಇಲಾಖೆ ಸ್ಪಷ್ಟಪಡಿಸಿದೆ. ಹೀಗಾಗಿ ಬಜೆಟ್ ಅನುದಾನದಲ್ಲಿ ಬಹುಪಾಲನ್ನು ಆರೋಗ್ಯ ಭದ್ರತೆ, ಸಾಮಾಜಿಕ ಭದ್ರತೆ, ಆಹಾರ ಭದ್ರತೆ, ಕುಡಿಯುವ ನೀರು, ಪ್ರಮುಖ ಆಡಳಿತ ವೆಚ್ಚ, ವೇತನ, ಪಿಂಚಣಿಗೆ ಮೀಸಲಿರಿಸಲು ನಿರ್ಧರಿಸಲಾಗಿದೆ.

ಆರ್ಥಿಕ ಇಲಾಖೆ ಹೊರಡಿಸಿರುವ ನಿರ್ದೇಶನಗಳ ಪ್ರಕಾರ ಮುಂದುವರಿದ ಯೋಜನೆ, ಹೊಸ ಯೋಜನೆ ಅನುಷ್ಠಾನ ಮಾಡುವ ಹಾಗಿಲ್ಲ. ಒಂದು ವೇಳೆ ಯೋಜನೆಗಳ ಜಾರಿಗೆ ಅನುಮತಿ ನೀಡಿದ್ದರೆ ಅವುಗಳನ್ನು ವಾಪಸ್​ ಪಡೆಯುವಂತೆ ಎಲ್ಲಾ ಇಲಾಖೆಗಳಿಗೆ ನಿರ್ದೇಶನ ನೀಡಿದೆ. ಹೊಸ ಯೋಜನೆಗಳು ಅತ್ಯಂತ ಅಗತ್ಯವೆಂದಾದರೆ ಆರ್ಥಿಕ ಇಲಾಖೆಯ ಪೂರ್ವಾನುಮತಿ ಕಡ್ಡಾಯ. ಟೆಂಡರ್ ಕರೆದಿರುವ ಕಾಮಗರಿಗಳು, ಕಾರ್ಯಾದೇಶ ಆಗಿದ್ದು ಇನ್ನೂ ಕಾಮಗಾರಿ ಕಾರ್ಯಾರಂಭವಾಗಿಲ್ಲವಾಗಿದ್ದರೆ ಅವುಗಳ ಆರಂಭಕ್ಕೆ ಆರ್ಥಿಕ ಇಲಾಖೆಯ ಅನುಮತಿ ಪಡೆಯುವಂತೆ ತಿಳಿಸಲಾಗಿದೆ.

ಆರ್ಥಿಕ ವರ್ಷದ ಆರಂಭದ ನಷ್ಟ ಕಷ್ಟಗಳೇನು?:

ಆರ್ಥಿಕ ವರ್ಷ 2020-21ರ ಆರಂಭದ ಏಪ್ರಿಲ್ ತಿಂಗಳಲ್ಲಿ ಲಾಕ್‌ಡೌನ್ ಹಿನ್ನೆಲೆ ರಾಜ್ಯದ ಸಂಪನ್ಮೂಲ ಸಂಗ್ರಹ ಬಹುತೇಕ ಬರಿದಾಗಿದೆ. ವೇತನ, ಪಿಂಚಣಿ, ಬಡ್ಡಿ ಸೇರಿದಂತೆ ರಾಜ್ಯದ ಬಾಧ್ಯತಾ ವೆಚ್ಚ ಸುಮಾರು 81,000 ಕೋಟಿ ರೂ. ಆಗಿದೆ.

ಈ ಪೈಕಿ ಮಾಸಿಕ ವೇತನ ಹಾಗೂ ಪಿಂಚಣಿ ವೆಚ್ಚ ಸುಮಾರು 5,000 ಕೋಟಿ ರೂ. ಅಂದಾಜಿಸಲಾಗಿದೆ. ಇನ್ನು ವಾರ್ಷಿಕ ಬಡ್ಡಿ ಪಾವತಿ ವೆಚ್ಚ ಸುಮಾರು 22,200 ಕೋಟಿ ರೂ. ಇದೆ.

ಸರಾಸರಿ ಮಾಸಿಕ 7,000 ಕೋಟಿ ರೂ. ಜಿಎಸ್​ಟಿ ತೆರಿಗೆ ಸಂಗ್ರಹವಾಗಬೇಕಾಗಿದ್ದು, ಏಪ್ರಿಲ್ ತಿಂಗಳಲ್ಲಿ ಸುಮಾರು 4,000 ಕೋಟಿ ರೂ. ನಷ್ಟ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಕಳೆದ 35 ದಿನಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ವಿಧಿಸುವ ರಾಜ್ಯ ಮಾರಾಟ ತೆರಿಗೆ ಸಂಗ್ರಹದಲ್ಲಿ ಸುಮಾರು 1,200 ಕೋಟಿ ರೂ. ನಷ್ಟ ಆಗಿದೆ.

ಮದ್ಯ ಮಾರಾಟ ಸಂಪೂರ್ಣ ಸ್ಥಗಿತವಾಗಿದ್ದರಿಂದ ಕಳೆದ ಏಪ್ರಿಲ್ ತಿಂಗಳಲ್ಲಿ ಸುಮಾರು 2,400 ಕೋಟಿ ರೂ. ಅಬಕಾರಿ ತೆರಿಗೆ ನಷ್ಟವಾಗಿದೆ ಎನ್ನಲಾಗಿದೆ. ಇನ್ನು ಮುದ್ರಾಂಕ ಹಾಗೂ ನೋಂದಣಿ ತೆರಿಗೆ ರೂಪದಲ್ಲಿ ಸರ್ಕಾರ ಏಪ್ರಿಲ್ ತಿಂಗಳಲ್ಲಿ ಅಂದಾಜು ಸುಮಾರು 1,000 ಕೋಟಿ ರೂ. ನಷ್ಟ ಅನುಭವಿಸಿದೆ.

ಮೋಟಾರು ತೆರಿಗೆ ರೂಪದಲ್ಲಿ ಕಳೆದ ಒಂದು ತಿಂಗಳಲ್ಲಿ ಅಂದಾಜು 480 ಕೋಟಿ ರೂ. ನಷ್ಟ ಅನುಭವಿಸಿದೆ. ಈ ನಷ್ಟದ ಲೆಕ್ಕಾಚಾರ ಸರಿದೂಗಲು ಇನ್ನೂ ಹಲವು ತಿಂಗಳುಗಳೇ ಬೇಕಾಗಿರುವುದರಿಂದ ಸರ್ಕಾರ ತನ್ನ ಬಜೆಟ್ ಖರ್ಚು ವೆಚ್ಚಗಳಲ್ಲಿ ಭಾರೀ ಮಾರ್ಪಾಡು ಮಾಡುತ್ತಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.