ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಇದನ್ನ ನಿಯಂತ್ರಿಸಲು ಸರ್ಕಾರ ಹರಸಾಹಸ ಪಡುತ್ತಿದ್ದು, ಇತ್ತ ಮೇ 24ರವರೆಗೆ ಲಾಕ್ಡೌನ್ ಮುಂದುವರೆಸಿದೆ. ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರು ಬಿಟ್ಟಿರುವ ಜನರು, ಮತ್ತೆ ಲಾಕ್ಡೌನ್ ಮುಂದುವರೆದ ಕಾರಣ ಮತ್ತೊಂದಿಷ್ಟು ಜನರು ತಮ್ಮ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದ್ದಾರೆ.
ಕಳೆದ ವರ್ಷದ ಲಾಕ್ಡೌನ್ ಸಮಯದಲ್ಲಿ ಸಾಕಷ್ಟು ಸಂಕಷ್ಟ ಎದುರಿಸಿದ್ದು ಜನರು ಇದೀಗ ಮತ್ತೊಮ್ಮೆ ಕಷ್ಟದ ಪರಿಸ್ಥಿತಿಗೆ ಸಿಲುಕುವ ಭೀತಿಗೆ ಊರು ಬಿಡುತ್ತಿದ್ದಾರೆ. ಮೆಜೆಸ್ಟಿಕ್ನ ಸಂಗೊಳ್ಳಿ ರೈಲ್ವೆ ನಿಲ್ದಾಣದಲ್ಲಿ ಬೆಳಗಿನ ಜಾವವೇ ಸಾಕಷ್ಟು ಜನರು ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ನಗರದಲ್ಲಿ ನೆಲೆಸಿದ್ದ ಯುಪಿ, ಬಿಹಾರ ಸೇರಿದಂತೆ ಹಲವು ರಾಜ್ಯದ ಕಾರ್ಮಿಕರು ತಮ್ಮ ಊರಿಗೆ ಹೊರಡಲು ಮುಂದಾಗಿದ್ದಾರೆ.
ಮೇ ಅಂತ್ಯದವರೆಗೆ ವಿವಿಧ ರಾಜ್ಯಗಳ ರೈಲು ಸೇವೆ ಸ್ಥಗಿತ:
ಒಂದು ಕಡೆ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಪ್ರಯಾಣಿಸುತ್ತಿದ್ದರೆ, ಇತ್ತ ಪ್ರಯಾಣಿಕರ ಸಂಖ್ಯೆಯಲ್ಲಿ ವಿರಳವಾಗಿರುವ ಭಾಗಗಳಿಗೆ ರೈಲು ಸಂಚಾರ ರದ್ದುಗೊಳ್ಳಿಸಲಾಗಿದೆ. ಇಂದಿನಿಂದ 5 ರೈಲುಗಳನ್ನ ಮೇ ಅಂತ್ಯದವರೆಗೆ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ.
ಓದಿ : ನೈರುತ್ಯ ರೈಲ್ವೆ ವಿಭಾಗದಿಂದ ಇ-ಬುಕ್ಕಿಂಗ್ ಕೌಂಟರ್ ಬಂದ್
- 06075/06076 ಚೆನ್ನೈ -ಕೆಎಸ್ಆರ್ ಬೆಂಗಳೂರು. ಚೆನ್ನೈ ಎಸಿ ಡಬಲ್ ಡೆಕ್ಕರ್ ಎಕ್ಸ್‌ಪ್ರೆಸ್ ರೈಲು ಮೇ 8ರಿಂದ ಮೇ 31ರವರೆಗೆ ಸಂಚಾರ ಬಂದ್.
- 06079/06080 ಚೆನ್ನೈ ಟು ಕೆಎಸ್ಆರ್ ಬೆಂಗಳೂರು - ಚೆನ್ನೈ ಸೂಪರ್ ಎಕ್ಸ್‌ಪ್ರೆಸ್ ರೈಲು ಮೇ 8ರಿಂದ ಮೇ 31ರವರೆಗೆ ಸಂಚಾರ ಬಂದ್.
- ರೈಲು ನಂ 02677 ಕೆಎಸ್ಆರ್ ಬೆಂಗಳೂರು ಟೂ ಎರ್ನಾಕುಲಂ ಎಕ್ಸ್‌ಪ್ರೆಸ್ ಸ್ಪೇಷಲ್ ಮೇ 9ರಿಂದ ಜೂನ್ 2ರವರೆಗೆ ಸಂಚಾರ ಬಂದ್.
- ರೈಲು ನಂ- 02678 ಎರ್ನಾಕುಲಂ ಟೂ ಕೆಎಸ್ಆರ್ ಬೆಂಗಳೂರು - ಬೆಂಗಳೂರು ಎಕ್ಸ್‌ಪ್ರೆಸ್ ಸ್ಪೆಷಲ್ ಟ್ರೈನ್ ಮೇ 8ರಿಂದ ಮೇ 31ರವರೆಗೆ ಸಂಚಾರ ರದ್ದು.
- ರೈಲು ನಂ- 06161 ಎರ್ನಾಕುಲಂ ಟೂ ಬಾಣಸವಾಡಿ ಎಕ್ಸ್‌ಪ್ರೆಸ್ ಸ್ಪೆಷಲ್ ಮೇ 9ರಿಂದ ಮೇ 30ರವರೆಗೆ ರದ್ದು
- ರೈಲು ನಂ- 06162 ಬಾಣಸವಾಡಿ ಟೂ ಎರ್ನಾಕುಲಂ ಎಕ್ಸ್‌ಪ್ರೆಸ್ ಸ್ಪೆಷಲ್ ಮೇ 10ರಿಂದ ಮೇ 31ರವರೆಗೆ ಸಂಚಾರ ರದ್ದುಗೊಳಿಸಿ ಆದೇಶಿಸಲಾಗಿದೆ.