ETV Bharat / state

21 ದಿನದ ಲಾಕ್​ಡೌನ್‌ನಿಂದ ಕೆಎಸ್ಆರ್​ಟಿಸಿಗೆ ಬರೋಬ್ಬರಿ ₹250 ಕೋಟಿ ನಷ್ಟ..

author img

By

Published : Apr 6, 2020, 12:14 PM IST

ಸಂಸ್ಥೆ ಈಗಾಗಲೇ ಬಸ್ ಸಂಚಾರ ರದ್ಧತಿ, ಸಿಬ್ಬಂದಿ ವೇತನ, ಇತರೆ ನಷ್ಟ, ನಿಲ್ದಾಣ ನಿರ್ವಹಣೆ ಸೇರಿ ಒಟ್ಟು ನಿನ್ನೆಗೆ 152 ಕೋಟಿ ರೂ. ಮೊತ್ತದ ನಷ್ಟ ಅನುಭವಿಸಿದೆ. ಇಂದು ಮತ್ತೆ 9 ರಿಂದ 11 ಕೋಟಿ ರೂ. ಸೇರ್ಪಡೆಯಾಗಲಿದೆ. ಒಟ್ಟು 21 ದಿನದ ಲಾಕ್‌ಡೌನ್ ಅಂತ್ಯದ ಹೊತ್ತಿಗೆ ಸಂಸ್ಥೆಗೆ ಆಗುವ ನಷ್ಟ 220 ರಿಂದ 250 ಕೋಟಿ ರೂಪಾಯಿವರೆಗೂ ತಲುಪುವ ನಿರೀಕ್ಷೆ ಇದೆ.

ಬೆಂಗಳೂರು : ರಾಜ್ಯದ ಸಾರಿಗೆ ಸಂಸಾಚರ ವ್ಯವಸ್ಥೆಯ ಬೆನ್ನೆಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಲಾಕ್​ಡೌನ್​ನಿಂದಾಗಿ ನಿತ್ಯ ₹ 9.64 ಕೋಟಿ ನಷ್ಟ ಅನುಭವಿಸ್ತಿದೆ. ಇದೇ ಸಂಸ್ಥೆಯ ಭಾಗವಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಕಲಬುರುಗಿಯ ಈಶಾನ್ಯ ಹಾಗೂ ಹುಬ್ಬಳ್ಳಿಯ ವಾಯವ್ಯ ಸಾರಿ ಸಂಸ್ಥೆಗಳು ಅನುಭವಿಸುತ್ತಿರುವ ನಷ್ಟದ ಬಾಬ್ತು ಬೇರೆಯೇ ಇದೆ.

ಎರಡು ವಿಭಾಗ: ಕೆಎಸ್ಆರ್​ಟಿಸಿ ವತಿಯಿಂದ ಪ್ರತಿ ದಿನ ಪ್ರೀಮಿಯಂ ಹಾಗೂ ಪ್ರೀಮಿಯಂಯೇತರ ವಿಭಾಗವಾರು ಬಸ್ ಸಂಚಾರ ಆಗುತ್ತದೆ. ಪ್ರೀಮಿಯಂ ವಿಭಾಗದಲ್ಲಿ ಗಮನಿಸುವುದಾದರೆ ನಿತ್ಯ 760 ಬಸ್ ರಾಜ್ಯದ ವಿವಿಧ ಭಾಗಗಳಿಗೆ ಸಂಚರಿಸುತ್ತವೆ. ಪ್ರೀಮಿಯಂಯೇತರ ವಿಭಾಗದಲ್ಲಿ 7366 ಬಸ್​ಗಳು ಓಡುತ್ತವೆ. ಅಲ್ಲಿಗೆ ಒಟ್ಟಾರೆ 8,126 ಬಸ್​ಗಳು ಕೆಎಸ್ಆರ್​ಟಿಸಿ ಅಡಿ ಸಂಚರಿಸುತ್ತವೆ. ಪ್ರತಿ ದಿನ ಪ್ರೀಮಿಯಂ ವಿಭಾಗದ ಬಸ್​ಗಳು 3,62,259 ಕಿ.ಮೀ. ಸಂಚರಿಸುತ್ತವೆ. ಪ್ರೀಮಿಯಂಯೇತರ ಬಸ್​ಗಳು 26,63,755 ಕಿ.ಮೀ. ಓಡುತ್ತವೆ. ಅಲ್ಲಿಗೆ ಒಟ್ಟು 30,26,014 ಕಿ.ಮೀ. ಬಸ್​ಗಳ ಸಂಚಾರ ಇರುತ್ತದೆ.

ನಿತ್ಯದ ನಷ್ಟದ ಮಾಹಿತಿ ಗಮನಿಸುವುದಾದರೆ ಪ್ರೀಮಿಯಂ ವಿಭಾಗದಲ್ಲಿ 1,71,85,908 ನಷ್ಟವಾದರೆ ಪ್ರೀಮಿಯಂ ಏತರ ವಿಭಾಗದಲ್ಲಿ 7,93,03,637 ಕೋಟಿ ರೂ. ನಷ್ಟವಾಗಲಿದೆ. ಅಲ್ಲಿಗೆ ಒಟ್ಟು ನಷ್ಟ ಲೆಕ್ಕ ಹಾಕಿದರೆ 9,64,89,545 ರೂ. ಆಗಿದೆ. ಇದರ ಹೊರತು ಬಸ್ ನಿಲ್ದಾಣದ ನಿರ್ವಹಣೆ, ಘಟಕ, ಬಸ್​ಗಳ ಮೇಲ್ವಿಚಾರಣೆ, ಅಧಿಕಾರಿಗಳ ಓಡಾಟ ಇತರೆ ವೆಚ್ಚಗಳು ಇನ್ನಷ್ಟು ಹೆಚ್ಚಿವೆ. ಲಾಕ್​​ಡೌನ್​ ಮಾ.24ರ ಮಧ್ಯರಾತ್ರಿಯಿಂದ ಜಾರಿಯಾಗಿದೆ. ಇಂದು 13ನೇ ದಿನಕ್ಕೆ ಮುಂದುವರಿದಿದೆ. ಇನ್ನೂ ಸರಿಯಾಗಿ 8 ದಿನ ಲಾಕ್​ಡೌನ್​ ಮುಂದುವರಿಯಲಿದೆ. ಸಂಸ್ಥೆ ಈಗಾಗಲೇ ಬಸ್ ಸಂಚಾರ ರದ್ಧತಿ, ಸಿಬ್ಬಂದಿ ವೇತನ, ಇತರೆ ನಷ್ಟ, ನಿಲ್ದಾಣ ನಿರ್ವಹಣೆ ಸೇರಿ ಒಟ್ಟು ನಿನ್ನೆಗೆ 152 ಕೋಟಿ ರೂ. ಮೊತ್ತದ ನಷ್ಟ ಅನುಭವಿಸಿದೆ. ಇಂದು ಮತ್ತೆ 9 ರಿಂದ 11 ಕೋಟಿ ರೂ. ಸೇರ್ಪಡೆಯಾಗಲಿದೆ. ಒಟ್ಟು 21 ದಿನದ ಲಾಕ್‌ಡೌನ್ ಅಂತ್ಯದ ಹೊತ್ತಿಗೆ ಸಂಸ್ಥೆಗೆ ಆಗುವ ನಷ್ಟ 220 ರಿಂದ 250 ಕೋಟಿ ರೂಪಾಯಿವರೆಗೂ ತಲುಪುವ ನಿರೀಕ್ಷೆ ಇದೆ.

ಅಧಿಕಾರಿಗಳ ಮಾತು : ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸದ್ಯ ಸಾಕಷ್ಟು ನಷ್ಟದಲ್ಲಿದೆ. ಕೆಎಸ್ಆರ್​ಟಿಸಿ, ಬಿಎಂಟಿಸಿ ಎರಡು ಸಂಸ್ಥೆಗಳು ಕೆಲ ವರ್ಷ ಕೊಂಚ ಲಾಭದಲ್ಲಿದ್ದವು. ಆದರೆ, ವೋಲ್ವೊ ಬಸ್ ಖರೀದಿ, ಟಿಟಿಎಂಸಿಗಳ ನಿರ್ಮಾಣದಿಂದಾಗಿ ಆದ ಖರ್ಚಿನಿಂದಾಗಿ ಇವೂ ನಷ್ಟದಲ್ಲಿವೆ. ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ, ಎನ್ಇಕೆಆರ್​ಟಿಸಿ ಮೊದಲಿನಿಂದಲೂ ನಷ್ಟದಲ್ಲೇ ಮುಂದುವರಿದಿವೆ. ಇದರಿಂದ ಸಾರಿಗೆ ಕ್ಷೇತ್ರಕ್ಕೆ ಉಂಟಾಗುವ ಈ ಲಾಕ್​ಡೌನ್​ ನಷ್ಟದಿಂದ ಮತ್ತೆ ಲಾಭಕ್ಕೆ ಬರಲು ವರ್ಷಗಳೇ ಕಳೆಯಬಹುದು.

ಇಂತಹ ದೊಡ್ಡ ಮಟ್ಟದ ನಷ್ಟ ಈವರೆಗೂ ಆಗಿರಲಿಲ್ಲ. ಇಡೀ ದೇಶವೇ ಕೊರೊನಾ ಮಹಾಮಾರಿಯನ್ನು ದೇಶದಿಂದ ಹೊಡೆದೋಡಿಸಲು ಕಂಕಣಬದ್ಧವಾಗಿದೆ. ನಾವು ಕೂಡ ಕೈ ಜೋಡಿಸಿದ್ದೇವೆ. ಲಾಕ್​ಡೌನ್​ 21 ದಿನಕ್ಕೆ ಮುಗಿದರೆ ಸಂಚಾರ ಆರಂಭಿಸುತ್ತೇವೆ. ಮುಕ್ತಾಯ ಇಲ್ಲವೇ ಮುಂದುವರಿಕೆ ಬಗ್ಗೆ ನಮಗೆ ಈವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಕೆಎಸ್ಆರ್​ಟಿಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.