ETV Bharat / state

ಲಾಕ್ ಡೌನ್ ಎಫೆಕ್ಟ್: ಚಿಕಿತ್ಸೆಗೆ ಹಣವಿಲ್ಲದೆ ಹೆತ್ತ ಮಗುವನ್ನೇ ಮಾರಾಟ ಮಾಡಿದ ತಾಯಿ!

ಚಿಕಿತ್ಸೆಗೆ ಹಣವಿಲ್ಲದೆ 10 ಸಾವಿರ ರೂಪಾಯಿಗೆ ಮಗುವನ್ನೇ ಮಾರಾಟ ಮಾಡಿದ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

author img

By

Published : Apr 6, 2020, 7:55 AM IST

ಚಿಕಿತ್ಸೆಗೆ ಹಣವಿಲ್ಲದೆ ಹೆತ್ತ ಮಗುವನ್ನೇ ಮಾರಾಟ ಮಾಡಿದ ತಾಯಿ

ಬೆಂಗಳೂರು: ಚಿಕಿತ್ಸೆಗೆ ಹಣವಿಲ್ಲದೆ ಹೆತ್ತ ತಾಯಿಯೇ ಮಗುವನ್ನು ಮಾರಾಟ ಮಾಡಿರುವ ಅಮಾನವೀಯ ಘಟನೆ ರಾಜಧಾನಿಯಲ್ಲಿ ನಡೆದಿದೆ.

ಚಾಮರಾಜನಗರದ ಕೊಳ್ಳೆಗಾಲದ ಬಸಮಣಿ ಮಗು ಮಾರಾಟ ಮಾಡಿದ ತಾಯಿ. 27 ವರ್ಷದ ಈಕೆ ಸುದೀರ್ ಎಂಬುವವನೊಂದಿಗೆ ಮೂರು ವರ್ಷದ ಹಿಂದೆ‌ ಮದುವೆ ಮಾಡಿಕೊಂಡಿದ್ದರು. ಸುದೀರ್​ಗೆ ಬಸಮಣಿ ಎರಡನೇ ಪತ್ನಿಯಾಗಿದ್ದಳು. ಗಂಡ-ಹೆಂಡತಿ ಬಸವೇಶ್ವರ ನಗರದ ಶಿವನಹಳ್ಳಿಯಲ್ಲಿ ಹೋಟೆಲ್​ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ದಂಪತಿಗೆ ಮೂರು ತಿಂಗಳ ಹಿಂದೆ ಮುದ್ದಾದ ಗಂಡು ಮಗುವಾಗಿತ್ತು.

ಹೀಗಿರಬೇಕಾದರೆ ಕೊರೊನಾ ಭೀತಿಯಿಂದ ಲಾಕ್ ಡೌನ್ ಘೋಷಿಸುತ್ತಿದ್ದಂತೆ ಬಸಮಣಿಯನ್ನು ತೊರೆದು ಗಂಡ ಎಸ್ಕೇಪ್ ಆಗಿದ್ದಾನೆ. ಏಕಾಂಗಿಯಾಗಿದ್ದ ಮಹಿಳೆಗೆ ಮಗು ಸಾಕಲು ಹಣದ ಅಭಾವ ಎದುರಾಗಿತ್ತು. ಸಾಲದೆಂಬಂತೆ ಮಗು ಉಸಿರಾಟ ಸಮಸ್ಯೆ‌ ಎದುರಾಗಿದ್ದರಿಂದ ಹೆರಿಗೆ ಮಾಡಿದ್ದ ವೈದ್ಯರು ವಾಣಿವಿಲಾಸ್ ಆಸ್ಪತ್ರೆ ‌ಕರೆದೊಯ್ಯವಂತೆ ಶಿಫಾರಸು ಮಾಡಿದ್ದರು.

ಗಂಡಿನಿಲ್ಲದೆ ಬಾಡಿಗೆ ಮ‌ನೆಯಲ್ಲಿದ್ದ ಬಸಮಣಿಗೆ ಹಣವಿಲ್ಲದೆ ಸಂಕಷ್ಟದಲ್ಲಿದ್ದಾಗ ಮನೆ ಮಾಲೀಕ 200 ರೂ.ಹಣ ನೀಡಿ ವಾಣಿವಿಲಾಸ್ ಆಸ್ಪತ್ರೆ ಕಳುಹಿಸಿದ್ದರು. ಲಾಕ್ ಡೌನ್ ಇದ್ದರೂ ಹೇಗೂ ಕಳೆದ ಗುರುವಾರ ಆಸ್ಪತ್ರೆಗೆ ಬಂದಿದ್ದಾಳೆ.‌ ನಂತರ ಆಕೆಯ ಬಳಿಯಿದ್ದ ಹಣ ಯಾರೋ ಕದ್ದಿದ್ದಾರೆ ಎನ್ನಲಾಗಿದ್ದು ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲದೆ ಬೇರೆಯವರಿಗೆ 10 ಸಾವಿರ ರೂ.ಗೆ ಮಾರಾಟ ಮಾಡಿದ್ದಾಳೆ.

ಮಗು ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಮಗು ಖರೀದಿಸಿದವರು ಮತ್ತೆ ಮಗುವನ್ನು ಹೆತ್ತತಾಯಿಗೆ ವಾಪಸ್ ನೀಡಿದ್ದಾರೆ.. ಕಳೆದ ಎರಡು ದಿನ ಬಳಿಕ ಮತ್ತೆ ಆಸ್ಪತ್ರೆ ಬಂದಿದ್ದ ಬಸಮಣಿ ಹಣ ಹೊಂದಿಸಿಕೊಂಡು ಬರುವುದಾಗಿ ಹೇಳಿ ಮಗುವನ್ನು ಸ್ವಲ್ಪ ನೋಡಿಕೊಳ್ಳಿ ಎಂದು ಸೆಕ್ಯೂರಿಟಿ ಗಾರ್ಡ್​ಗೆ ಮಗು ಕೊಟ್ಟು ಅಲ್ಲಿಂದ ನಿರ್ಗಮಿಸಿದ್ದಾಳೆ.. ಮಾಲೀಕನಿಂದ ಹಣ ಪಡೆದುಕೊಂಡು ಮಗುವನ್ನು ಒಂದು ದಿನದ ಬಳಿಕ ಮತ್ತೆ ಆಸ್ಪತ್ರೆ ಹೋಗಿ ವಿಚಾರಿಸಿದಾಗ ಮಗು ನಾಪತ್ತೆಯಾಗಿತ್ತು.

ಬಳಿಕ ಪೊಲೀಸರಿಗೆ ದೂರು ನೀಡಿದ್ದರಿಂದ, ಪೊಲೀಸರು‌ ಮಗುನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಮಗು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.