ಬೆಂಗಳೂರು: ಸಾಲ ತೀರಿಸಲಾಗದೇ ಕಿತ್ತಾಡಿಕೊಂಡಿದ್ದ ನಾಲ್ಕು ಜನ ಸ್ನೇಹಿತರು, ಎಣ್ಣೆ ಏಟಿನಲ್ಲಿ ಜೊತೆಗಿದ್ದ ಸ್ನೇಹಿತರನ್ನೇ ಕೊಂದು ಮುಗಿಸಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೆಸರು ಸಂತೋಷ್ ಅಲಿಯಾಸ್ ಪಿಳ್ಳೈ ಹಾಗೂ ಸುಬ್ರಮಣಿ, ಮೂಲತಃ ತಮಿಳುನಾಡಿನವರು. ಕಳೆದ ನಾಲ್ಕೈದು ವರ್ಷಗಳಿಂದ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ಭುವನೇಶ್ವರಿನಗರದಲ್ಲಿ ಗಾರೆ ಕೆಲಸ ಮಾಡಿಕೊಂಡು ವಾಸವಿದ್ರು. ಇನ್ನೂ ಈ ಇಬ್ಬರಿಗೆ ಮಹಾವೀರ್, ರವೀಶ್ ಎಂಬ ಮತ್ತಿಬ್ಬರು ಸ್ನೇಹಿತರಿದ್ರು.
ವಿಪರೀತ ಕುಡುಕರಾಗಿದ್ದ ನಾಲ್ಕು ಜನ ಕತ್ತಲಾದ್ರೆ ಸಾಕು ಎಣ್ಣೆ ಪಾರ್ಟಿ ಮಾಡ್ಕೊಂಡು ಮಜಾ ಮಾಡ್ತಿದ್ರು. ಇನ್ನೂ ಕೈಯಲ್ಲಿ ಕಾಸಿಲ್ಲಂದ್ರೆ ಸಾಲ ಮಾಡಿ ಪಾರ್ಟಿ ಮಾಡ್ತಿದ್ರು. ಕಳೆದ ಕೆಲವು ದಿನಗಳಿಂದ ಸರಿಯಾದ ಕೆಲಸ ಇಲ್ಲದೆ ಜೋಬಲ್ಲಿ ಕಾಸು ಇಲ್ಲದೆ, ಕುಡಿಯಲು ಎಣ್ಣೆಯಿಲ್ಲದೆ ನಾಲ್ಕು ಜನ ಪರದಾಡಿದ್ರು. ನಂತರ ಸುಬ್ರಮಣಿ ಹೆಸರಿನಲ್ಲಿ ಫೈನಾಸ್ಸಿಯರ್ ಒಬ್ಬರ ಬಳಿ 25 ಸಾವಿರ ಹಣವನ್ನ ಸಾಲವಾಗಿ ಪಡೆದಿದ್ರು.
ಸಾಲದ ದುಡ್ಡಲ್ಲಿ ಕುಡಿದು ಕುಪ್ಪಳಿಸಿದ್ದ ನಾಲ್ಕು ಜನ. ನಿನ್ನೆ ರಾತ್ರಿ ಸಾಲದ ಹಣವನ್ನ ಕಟ್ಟೋ ವಿಚಾರವಾಗಿ ತಮ್ಮ ತಮ್ಮಲ್ಲೆ ಜಗಳ ಮಾಡಿಕೊಂಡಿದ್ರು. ಈ ಜಗಳ ತಾರಕಕ್ಕೇರಿ ಸುಬ್ರಮಣಿ ಎಂಬಾತ ಸಂತೋಷ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದಿದ್ದಾನೆ. ಇದನ್ನ ಕಣ್ಣಾರೆ ಕಂಡಿದ್ದ ಮಹಾವೀರ್ ಹಾಗೂ ರವೀಶ್, ಕುಪಿತಗೊಂಡು ಸುಬ್ರಮಣಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ತಲಘಟ್ಟಪುರ ಪೊಲೀಸರು ಆರೋಪಿಯಾದ ಮಹಾವೀರ್ನನ್ನ ಬಂಧಿಸಿದ್ದು ಮತ್ತೊಬ್ಬ ಆರೋಪಿ ರವೀಶ್ಗಾಗಿ ಬಲೆಬೀಸಿದ್ದಾರೆ.