ETV Bharat / state

ಹೆಂಡತಿ ಸಹಿ ಫೋರ್ಜರಿ ಮಾಡಿ ಸಾಲ ಮಾಡಿದ ಗಂಡ : ನ್ಯಾಯಕ್ಕಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ಪತ್ನಿ

2017ರಲ್ಲಿ ಮತ್ತೆ ಸಾಲ ಕೊಡಿಸುವಂತೆ ರಾಜೀವ್ ಪತ್ನಿಯನ್ನು ಪೀಡಿಸಲು ಆರಂಭಿಸಿದ್ದ. ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳ ನಡೆದು ಇಬ್ಬರೂ ವಿಚ್ಛೇದನ ಪಡೆಯಲು ತೀರ್ಮಾನಿಸಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. 2017ರಲ್ಲಿ ಪತ್ನಿಗೆ ತಿಳಿಯದಂತೆ ಆಕೆಯ ಪೋರ್ಜರಿ ಸಹಿ ಮಾಡಿ ಆಕೆಯ ಹೆಸರಿನಲ್ಲಿದ್ದ ಮನೆಯ ಮೇಲೆ ರಾಜೀವ್ 5 ಲಕ್ಷ ರೂ. ಸಾಲ ಪಡೆದಿದ್ದ..

dsd
ಪೋರ್ಜರಿ ಸಹಿ ಹೆಂಡತಿ ಹೆಸರಿನಲ್ಲಿ ಗಂಡನಿಂದ ಸಾಲ
author img

By

Published : Jan 31, 2021, 10:59 PM IST

ಬೆಂಗಳೂರು : ತನ್ನ ಫೋರ್ಜರಿ ಸಹಿ ಮಾಡಿ ವಿವಿಧ ಬ್ಯಾಂಕ್‌ಗಳಿಂದ ಸಾಲ ಪಡೆಯುತ್ತಿದ್ದ ಪತಿಯ ವಿರುದ್ಧ ಶಂಕರಪುರ ಪೊಲೀಸ್ ಠಾಣೆಯಲ್ಲಿ ಪತ್ನಿಯೇ ದೂರು ದಾಖಲಿಸಿರುವ ಪ್ರಸಂಗ ಬೆಳಕಿಗೆ ಬಂದಿದೆ.

ವಿವಿಪುರದ ನಿವಾಸಿ ರಾಜೀವ್ ಬಲ್ಸಾಲಿ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದ್ದು,ದೂರುದಾರ ಮಹಿಳೆ ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. 2000ದಲ್ಲಿ ರಾಜೀವ್ ಬನ್ಸಾಲಿಯನ್ನು ವಿವಾಹವಾಗಿದ್ದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಪತಿ ಕೆಲಸಕ್ಕೆ ತೆರಳದೇ ನಿತ್ಯ ಕುಡಿದು ಬಂದು ಪತ್ನಿ ಜತೆ ಜಗಳ ಮಾಡುತ್ತಿದ್ದ. 2014ರಲ್ಲಿ ವ್ಯವಹಾರ ನಡೆಸಲು 4 ಲಕ್ಷ ರೂ. ಸಾಲ ಕೊಡಿಸಿದ್ರೆ ಇಎಂಐ ಕಟ್ಟುವುದಾಗಿ ಪತ್ನಿಯನ್ನು ನಂಬಿಸಿ ಯಾಮಾರಿಸಿದ್ದ.

2017ರಲ್ಲಿ ಮತ್ತೆ ಸಾಲ ಕೊಡಿಸುವಂತೆ ರಾಜೀವ್ ಪತ್ನಿಯನ್ನು ಪೀಡಿಸಲು ಆರಂಭಿಸಿದ್ದ. ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳ ನಡೆದು ಇಬ್ಬರೂ ವಿಚ್ಛೇದನ ಪಡೆಯಲು ತೀರ್ಮಾನಿಸಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. 2017ರಲ್ಲಿ ಪತ್ನಿಗೆ ತಿಳಿಯದಂತೆ ಆಕೆಯ ಪೋರ್ಜರಿ ಸಹಿ ಮಾಡಿ ಆಕೆಯ ಹೆಸರಿನಲ್ಲಿದ್ದ ಮನೆಯ ಮೇಲೆ ರಾಜೀವ್ 5 ಲಕ್ಷ ರೂ. ಸಾಲ ಪಡೆದಿದ್ದ.

ಇದಾದ ಬಳಿಕ ಇಎಂಐ ಪಾವತಿಸಿದ ಕಾರಣ ಫೈನಾನ್ಸ್ ಕಂಪನಿಯವರು ಪತ್ನಿಗೆ ನೋಟಿಸ್ ಕಳುಹಿಸಿದ್ದರು. ಯಾವುದೇ ಸಾಲ ಪಡೆಯದಿದ್ದರೂ ಏಕೆ ನೋಟಿಸ್ ಕಳಿಸಿದ್ದಾರೆ ಎಂದು ಅನುಮಾನಗೊಂಡ ಮಹಿಳೆ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದಾಗ ಪತಿ ರಾಜೀವ್ ಪತ್ನಿಯ ನಕಲಿ ಸಹಿ ಮಾಡಿ ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.