ಬೆಂಗಳೂರು: ಹೈಪರ್ ಟೆನ್ಷನ್ ವಿದ್ಯುತ್ ಸಂಪರ್ಕಗಳನ್ನು ಭೂಗತವಾಗಿ ಅಳವಡಿಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸಲು ಇಂದು ಪ್ರಮುಖ ಪ್ರದೇಶಗಳಲ್ಲಿ ದಿನಪೂರ್ತಿ ವಿದ್ಯುತ್ ಕಡಿತಗೊಳ್ಳಲಿದೆ.
ಎಲ್ಲೆಲ್ಲಿ ವಿದ್ಯುತ್ ಸ್ಥಗಿತ?
- ರಾಜಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಗ್ಗೆ 11-30 ರಿಂದ 5-30 ರವರೆಗೆ ವಿದ್ಯುತ್ ಸ್ಥಗಿತಗೊಳ್ಳಲಿದೆ. ಕೆಲವೆಡೆ 10-30 ರಿಂದ 5-30 ವರೆಗೆ ವಿದ್ಯುತ್ ಇರಲ್ಲ.
- ಆರ್ ಆರ್ ನಗರದ ಟಿಂಬರ್ ಯಾರ್ಡ್ ಪ್ರದೇಶ ಹಾಗೂ ಗಣಪತಿ ನಗರದಲ್ಲಿ ಬೆಳಗ್ಗೆ 10 ರಿಂದ 6 ರವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ.
- ಕೆಂಗೇರಿಯ ಹಲವು ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ 5 ರ ವರೆಗೆ ವಿದ್ಯುತ್ ಸ್ಥಗಿತ.
- ಜಯನಗರ, ಕೋರಮಂಗಲ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ 5-30 ರವರೆಗೆ ವಿದ್ಯುತ್ ಸ್ಥಗಿತಗೊಳ್ಳಲಿದೆ.
- ವಿಧಾನಸೌಧದ ಸುತ್ತಮುತ್ತಲು ಮಧ್ಯಾಹ್ನದವರೆಗೆ ಹಾಗೂ ಶಿವಾಜಿ ನಗರದಲ್ಲಿ ದಿನಪೂರ್ತಿ ವಿದ್ಯುತ್ ಸ್ಥಗಿತ.
ಪ್ರಮುಖವಾಗಿ ವರ್ಕ್ ಫ್ರಂ ಹೋಂ ಮಾಡುತ್ತಿರುವ ಉದ್ಯೋಗಿಗಳಿಗೆ ಪವರ್ ಕಟ್ ಸಮಸ್ಯೆ ತಲೆನೋವಾಗಿ ಪರಿಣಮಿಸಲಿದೆ. ಹಾಗಾಗಿ ಪೂರ್ವನಿಯೋಜಿತವಾಗಿ ಬೆಸ್ಕಾಂ ಮಾಹಿತಿ ನೀಡುತ್ತಿದ್ದು, ಅನಿವಾರ್ಯ ಕಾರಣಗಳಿಂದಾಗಿ ಅಡಚಣೆಗಳಾಗುತ್ತಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.