ETV Bharat / state

ಇಂಗ್ಲಿಷ್ ಕಲಿಕೆ ಬ್ರಿಟಿಷರ ಕಾಲದಿಂದಲೂ ಇದೆ, ಆದರೆ ಕನ್ನಡಕ್ಕಿದೆ ಹೆಚ್ಚಿನ ತಾಕತ್ತು: ಡಾ. ಚಂದ್ರಶೇಖರ ಕಂಬಾರ - ಸಂಗ್ಯಾ ಬಾಳ್ಯ ಎಂಬ ನಾಟಕ

ಬೆಳಗಾವಿ ಮೂಲದವರಾದ ಕಂಬಾರರು, ಈ ಪ್ರಶಸ್ತಿ ಕರ್ನಾಟಕಕ್ಕೆ ಹಾಗೂ ಕನ್ನಡಿಗರಿಗೆ ಸಿಕ್ಕ ಪ್ರಶಸ್ತಿ ಎಂದರು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಚಂದ್ರಶೇಖರ ಕಂಬಾರ ಅವರಿಗೆ ಸಾಹಿತ್ಯ ಹಾಗೂ ನಾಟಕ ಮಾಡುವ ಗೀಳು ಅಂಟಿಕೊಂಡ ಬಗೆ ನಿಜಕ್ಕೂ ಅಚ್ಚರಿ ಮೂಡಿಸುತ್ತೆ.

literature-chandra-shekar-kambara-talk-news
ಚಂದ್ರಶೇಖರ ಕಂಬಾರ
author img

By

Published : Feb 10, 2021, 6:15 PM IST

Updated : Feb 10, 2021, 9:38 PM IST

ಬೆಂಗಳೂರು: ಕವಿ, ಕಥೆಗಾರ, ಕಾದಂಬರಿಕಾರ, ನಾಟಕಕಾರ, ಜಾನಪದ ಸಾಹಿತಿಯಾಗಿ ಕನ್ನಡಿಗರ ಮನ ಗೆದ್ದಿರುವ ಖ್ಯಾತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರಿಗೆ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಗುರುತಿಸಿ ಇತ್ತೀಚೆಗೆ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿದೆ. ಈ ಬಗ್ಗೆ ಈಟಿವಿ ಭಾರತದ ಜೊತೆ ಹಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.

ಚಂದ್ರಶೇಖರ ಕಂಬಾರ

ಓದಿ: ಪದ್ಮಭೂಷಣ ಪ್ರಶಸ್ತಿಗೆ ಪಾತ್ರವಾದ ಸಾಹಿತಿ ಚಂದ್ರಶೇಖರ ಕಂಬಾರರನ್ನು ಸನ್ಮಾನಿಸಿದ ಸಿಎಂ

ಕಂಬಾರರ ಬಾಲ್ಯ:

ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ, ಉಪನ್ಯಾಸ, ಆಡಳಿತ ಹೀಗೆ ಬಹುಮುಖ ಪ್ರತಿಭೆಯಾದ ಚಂದ್ರಶೇಖರ ಕಂಬಾರರು ಜನಿಸಿದ್ದು 1937, ಜನವರಿ 2ರಂದು. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಘೋಡಗೇರಿಯಲ್ಲಿ ಬಸವಣ್ಣೆಪ್ಪ ಕಂಬಾರ ಹಾಗೂ ಚೆನ್ನಮ್ಮ ದಂಪತಿಯ ಪುತ್ರನಾಗಿ ಇವರು ಜನಿಸಿದರು.

ವಿದ್ಯಾಭ್ಯಾಸ:

ಗೋಕಾಕ್​ನ ಮುನ್ಸಿಪಲ್ ಪ್ರೌಢ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದ ಇವರು, ಬಳಿಕ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಬಿಎ ಪದವಿ, 1962ರಲ್ಲಿ 'ಕರ್ನಾಟಕ ವಿವಿ'ಯಿಂದ ಎಂಎ ಪದವಿ ಹಾಗೂ ಪಿಹೆಚ್​ಡಿ ಪದವಿ ಪಡೆದಿದ್ದಾರೆ.

ವೃತ್ತಿ ಜೀವನ:

ಕಂಬಾರರು ಚಿಗುರು ಮೀಸೆ ಹೊತ್ತ ಸಂದರ್ಭದಲ್ಲೇ ಧಾರವಾಡದ ಕವಿ ಸಮ್ಮೇಳನದಲ್ಲಿ ಕವಿತೆಯೊಂದನ್ನು ಓದಿದ್ದರಂತೆ. ಖ್ಯಾತ ಕವಿಗಳೊಬ್ಬರು ಕಂಬಾರರ ಕವಿತೆ ಅಲ್ಲಿ ಓದಿದ ಎಲ್ಲಾ ಕವಿಗಳಿಗಿಂತ ಭಿನ್ನವಾಗಿದ್ದದ್ದು ಎಲ್ಲರ ಗಮನಕ್ಕೆ ಬಂದಿದ್ದರೂ, ಅಧ್ಯಕ್ಷರು ಕಂಬಾರರ ಬಗ್ಗೆ ಕುಹಕದ ಮಾತು ಹೇಳಿದ್ದರಂತೆ.

"ಕಬ್ಬಿಣ ಕಾಸುವವರೂ ಈಗ ಕಾವ್ಯ ಬರೆಯುತ್ತಿದ್ದಾರೆ" ಎಂಬ ಅಧ್ಯಕ್ಷರ ಮಾತು ಕಂಬಾರರ ಸ್ವಾಭಿಮಾನವನ್ನೇ ಬಡಿದೆಬ್ಬಿಸಿತು. ಅಂದೇ ಕಂಬಾರ ಕಾವ್ಯವನ್ನು ಪಳಗಿಸಿಕೊಳ್ಳಲು ನಿರ್ಧರಿಸಿದರಂತೆ. ಜಾನಪದ ಸೊಗಡನ್ನು ತಮ್ಮ ಬರವಣಿಗೆಯಲ್ಲಿ ಮೈದಾಳಿಸಿಕೊಂಡು ಬಂದಿರುವ ಚಂದ್ರಶೇಖರ ಕಂಬಾರರು ಹಲವು ಪ್ರತಿಭೆಗಳ ಸಂಗಮ.

ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಪ್ರಾಧ್ಯಾಪಕ, ಜಾನಪದ ತಜ್ಞ, 2004-2010ರವರೆಗೆ ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್​ ಸದಸ್ಯರಾಗಿದ್ದರು. ಕೇವಲ ಸಾಹಿತ್ಯ ಮಾತ್ರವಲ್ಲ, ರಾಜಕೀಯ ಕ್ಷೇತ್ರದಲ್ಲೂ ಇವರು ತಮ್ಮ ಕಾರ್ಯನಿರ್ವಹಣೆ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಸಹಾಯಕ ಪ್ರಾಧ್ಯಾಪಕರಾಗಿ ಸೇವೆ:

ಕಂಬಾರರು ಸ್ನಾತಕೋತ್ತರ ಶಿಕ್ಷಣದ ನಂತರ ಸಾಗರದ ಲಾಲ್ ಬಹದ್ದೂರ್​​ ಕಲಾ, ವಿಜ್ಞಾನ ಮತ್ತು ಎಸ್​​ಬಿ ಸೊಲಬಣ್ಣ ಶೆಟ್ಟಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎರಡು ವರ್ಷಗಳ ಕಾಲ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. 2019ನೇ ಸಾಲಿನಲ್ಲಿ ಧಾರವಾಡದಲ್ಲಿ ನಡೆದ 84 ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯವಾಗಿ ಇವರು ಕವಿ - ನಾಟಕಕಾರರಾಗಿ ಜನಪ್ರಿಯರು.

ಬೆಳಗಾವಿ ಮೂಲದವರಾದ ಕಂಬಾರರು, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಸಾಹಿತ್ಯ ಹಾಗೂ ನಾಟಕ ಮಾಡುವ ಗೀಳು ಅಂಟಿಕೊಂಡ ಬಗೆ ನಿಜಕ್ಕೂ ಅಚ್ಚರಿ ಮೂಡಿಸುತ್ತೆ.

ಉಪನ್ಯಾಸಕ ವೃತ್ತಿಯಿಂದ ಕುಲಪತಿವರೆಗೆ:

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹಲವು ವರ್ಷಗಳ ಕಾಲ ಉಪನ್ಯಾಸಕ ವೃತ್ತಿಯಿಂದ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕುಲಪತಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಈಗ ಬೆಂಗಳೂರಿನ ಬನಶಂಕರಿಯಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಈ ನಡುವೆ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿಯೂ ಮೂರು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೇ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಚಿತ್ರಗಳಾದ ಕಾದಂಬರಿ: ಕಂಬಾರರು ತಾವೇ ಬರೆದ ಕಾದಂಬರಿಗಳನ್ನು ಚಲನಚಿತ್ರಗಳಾಗಿಸಿದರು. "ಕರಿಮಾಯಿ, ಸಂಗೀತಾ, ಕಾಡು ಕುದುರೆ, ಸಿಂಗಾರವ್ವ ಮತ್ತು ’’ಅರಮನೆ" ಇವುಗಳಲ್ಲಿ ಪ್ರಮುಖವಾದುವು. ಕಂಬಾರರು ತಮ್ಮ ಚಿತ್ರಗಳಿಗೆ ತಾವೇ ಸಂಗೀತ ನೀಡಿದ್ದಾರೆ. ಕಾಡು ಕುದುರೆಯ ಹಿನ್ನೆಲೆ ಸಂಗೀತದ ``ಕಾಡು ಕುದುರೆ ಓಡಿ ಬಂದಿತ್ತಾsss.." ಹಾಡಿಗೆ ಶಿವಮೊಗ್ಗ ಸುಬ್ಬಣ್ಣ ಅವರಿಗೆ ರಾಷ್ಟ್ರಪತಿಗಳ ಫಲಕ ಕೂಡ ಸಿಕ್ಕಿತು. `ಜೀಕೆ ಮಾಸ್ತರ ಪ್ರಣಯ ಪ್ರಸಂಗ' ಕಾದಂಬರಿಯನ್ನು ಕಿರುತೆರೆಗೂ ಅಳವಡಿಸಿದ್ದಾರೆ. ಹತ್ತಾರು ಸಾಕ್ಷ್ಯ ಚಿತ್ರಗಳನ್ನೂ ನಿರ್ಮಿಸಿರುವ ಕಂಬಾರರು ಉತ್ತಮ ನಾಟಕಕಾರರು. ಜೊತೆಗೆ ಜಾನಪದ ಶೈಲಿಯ ಹಾಡುಗಳಿಂದ ಜನಪ್ರಿಯರು. ಅವರು ತಾವೇ ಸ್ವತಃ ಹಾಡುಗಾರರೂ ಆಗಿದ್ದಾರೆ.

ಹಳೆ ನೆನಪುಗಳ ಮೆಲುಕು: ದನ ಕಾಯಲು ಹಾಕಿದ ತಂದೆ...

ಬಾಲ್ಯದಲ್ಲಿ ಕಮ್ಮಾರ ಕೆಲಸ ಬರಲಿಲ್ಲ ಎಂದು ತಂದೆ ಬಸವಣ್ಣೆ ಕಂಬಾರರು, ಚಂದ್ರಶೇಖರ ಅವರನ್ನು ದನ ಕಾಯುವುದಕ್ಕೆ ಹಾಕಿದರಂತೆ. ಆಗ ಕಂಬಾರರು ಕೆಲ‌ ಸ್ನೇಹಿತರ ಜೊತೆಗೂಡಿ ಬಯಲು ನಾಟಕಗಳನ್ನು ಆಡಲು ಪ್ರಾರಂಭಿಸಿದರು. ಇದನ್ನ ಗಮನಿಸಿದ ಚಂದ್ರಶೇಖರ ಕಂಬಾರರ ಸಹೋದರ, ಇವನನ್ನು ಹೀಗೆ ಬಿಟ್ಟರೆ ದನ ಕಾಯೋ ಕೆಲಸ ಮಾಡುತ್ತಾನೆ ಎಂದು ಶಾಲೆಗೆ ಸೇರಿಸಿದರಂತೆ‌. ಅಲ್ಲಿಂದಲೇ ಚಂದ್ರಶೇಖರ ಕಂಬಾರ ಅವರಿಗೆ ಬರವಣಿಗೆ ಹಾಗೂ ಸಾಹಿತ್ಯದ ಕಡೆ ಒಲವು ಹೆಚ್ಚಾಗುತ್ತದೆ‌.

ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದ ನಾಟಕ:

ಸಂಗ್ಯಾ ಬಾಳ್ಯ ಎಂಬ ನಾಟಕವನ್ನು ಚಂದ್ರಶೇಖರ ಕಂಬಾರ ಬರೆದ ಕಥೆ ಅಂತಾ ಸಾಕಷ್ಟು ಜನರು ತಿಳಿದುಕೊಂಡಿದ್ದಾರೆ. ಆದರೆ ಅದು ನಾನು ಬರೆದ ಕಥೆ ಅಲ್ಲ. 150 ವರ್ಷಗಳ ಹಿಂದೆ ಪತ್ತಾರು ಮಾಸ್ಟರ್ ಬರೆದಿದ್ದು. ಈ ನಾಟಕ ಸಾಕಷ್ಟು ಜನರಿಗೆ ತಲುಪಿ, ಮೆಚ್ಚುಗೆಗೆ ಪಾತ್ರವಾಗಿತ್ತು. ಹಾಗೇ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿತ್ತು. ಏಕೆಂದರೆ ಬ್ರಿಟಿಷ್ ಸರ್ಕಾರದ ಧೋರಣೆ ಬಗ್ಗೆ ಈ ನಾಟಕದಲ್ಲಿ ಸೇರಿಸಲಾಗಿತ್ತು ಎನ್ನುತ್ತಾರೆ ಕಂಬಾರರು.

ನಿರ್ದೇಶಕರಾಗಿ ಕಂಬಾರರು:

ಸಂಗ್ಯಾ ಬಾಳ್ಯ ನಾಟಕವನ್ನು ಚಂದ್ರಶೇಖರ ಕಂಬಾರರು ನಿರ್ದೇಶನ ಮಾಡಿದಾಗ ಮತ್ತಷ್ಟು ಜನಪ್ರಿಯತೆ ಪಡೆಯಿತು. ನಾಟಕದ ಡೈಲಾಗ್ ಪ್ರಖ್ಯಾತಿ ಹೊಂದಿತ್ತು. ಇದರಿಂದ ಈ ನಾಟಕವನ್ನು ಬ್ರಿಟಿಷ್ ಸರ್ಕಾರ ಬ್ಯಾನ್ ಮಾಡಿತಂತೆ.

ಕಂಬಾರರು ನಾಟಕ ನಿರ್ದೇಶಕರಾಗಿ ಖ್ಯಾತಿ ಹೊಂದಿದ್ದಾರೆ. ಲಂಕೇಶ್ ಮತ್ತು ಚಂದ್ರಶೇಖರ ಕಂಬಾರ ಹಾಗೂ ಬೆಂಗಳೂರು ವಿಶ್ವವಿದ್ಯಾಲಯ ಸೇರಿ ನಾಟಕೋತ್ಸವ ಮಾಡಿದ್ದರು. ಆ ಮೂರು ನಾಟಕಗಳು ತುಂಬಾ ಪ್ರಖ್ಯಾತಿ ಪಡೆದವು. ಇವತ್ತಿನ‌ ರಂಗಭೂಮಿ ನಾಟಕಗಳು ಅವನತಿ ಹಂಚಿನಲ್ಲಿರುವ ಬಗ್ಗೆ ಚಂದ್ರಶೇಖರ ಕಂಬಾರ ಪ್ರತಿಕ್ರಿಯಿಸಿ, ರಂಗಭೂಮಿ ನಾಟಕಗಳು ಬದುಕಬೇಕಾದರೆ ಸರ್ಕಾರದ ಅನುದಾನ ಪಡೆಯಬಾರದು ಎಂದರು.

ಸಿನಿಮಾಗೆ ಸ್ಪಂದಿಸುವಂತೆ ರಂಗಭೂಮಿಗೆ ಜನರು ಸ್ಪಂದನೆ ನೀಡಬೇಕು. ಇದು ಸಾಧ್ಯವಾದಾಗ ಮಾತ್ರ ರಂಗಭೂಮಿ ಮಾಯವಾಗುವುದಿಲ್ಲ. ಇನ್ನು ಕೇಂದ್ರ ಸರ್ಕಾರದ ತ್ರಿಭಾಷ ನೀತಿ ಬಗ್ಗೆ ಚಂದ್ರಶೇಖರ ಕಂಬಾರ ಬಹಳ ಕಠೋರವಾಗಿ ಪ್ರತಿಕ್ರಿಯಿಸಿದರು.

ಸಾಹಿತ್ಯ, ನಾಟಕಕಾರರಾಗಿರುವ ಚಂದ್ರಶೇಖರ ಕಂಬಾರರು, ಸಿನಿಮಾ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದಾರೆ. ಇದರ ಬಗ್ಗೆ ಮಾತನಾಡಿದ ಕಂಬಾರ, ಸಿನಿಮಾದಲ್ಲಿ ಜಾಸ್ತಿ ಸುಳ್ಳನ್ನು ತೋರಿಸುತ್ತಾರೆ. ಅದನ್ನು ಎಲ್ಲರು ನಂಬುತ್ತಾರೆ ಅಂತಾ ಮಾತಲ್ಲೇ ಚಾಟಿ ಬೀಸಿದರು. ಈಗಾಗಲೇ ಜ್ಞಾನಪೀಠ ಪ್ರಶಸ್ತಿ ಹಾಗೂ ಪದ್ಮ ಭೂಷಣ ಪ್ರಶಸ್ತಿ ಪಡೆದಿರುವ ಚಂದ್ರಶೇಖರ ಕಂಬಾರರು, ಜ್ಞಾನಪೀಠ ಪ್ರಶಸ್ತಿ ಬಗ್ಗೆ ಧ್ವನಿ ಎತ್ತಿದರು. ನನ್ನ ಪ್ರಕಾರ ಭೈರಪ್ಪ, ಗೋಪಾಲಕೃಷ್ಣ ಅಡಿಗ ಅವರಿಗೆ ಜ್ಞಾನಪೀಠ ಪ್ರಶಸ್ತಿ ಕೊಡಬೇಕು ಎಂದು ಒತ್ತಾಯಿಸಿದರು.

ಇಂಗ್ಲಿಷ್ ಕರಣ ಆಗಬಾರದು:

ವಿಶ್ವವಿದ್ಯಾಲಯಗಳಲ್ಲಿ ಕನ್ನಡಿಗರಿಗೆ ಅವಶ್ಯಕತೆ ಇರುವ ವಿಷಯಗಳ ಬಗ್ಗೆ ಬೋಧನೆ ಮಾಡಬೇಕೇ ಹೊರತು ಇಂಗ್ಲಿಷ್ ಕರಣ ಆಗಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲಾ ಭಾಷೆಗಳ ಮೇಲೆ ಇಂಗ್ಲಿಷ್ ಹೇರಿಕೆ ಜಾಸ್ತಿ ಆಗಿದೆ. ಇಂಗ್ಲಿಷ್ ಕಲಿಕೆ ಬ್ರಿಟಿಷರ ಕಾಲದಿಂದಲೂ ಇದೆ.

ಇಂಗ್ಲಿಷ್ ಕಲಿಯುವ ಮಗು ಒಂದು ಕಥೆಯನ್ನು ಯಥಾವತ್ತಾಗಿ ಹತ್ತು ಜನರಿಗೆ ಹೇಳುತ್ತೆ. ಆದರೆ ಕನ್ನಡ ಕಲಿಯುವ ಮಗು ಒಂದು ಕಥೆಯನ್ನು ವಿಭಿನ್ನವಾಗಿ ಹೇಳುವ ತಾಕತ್ತು ಬರುತ್ತದೆ ಎಂದು ಚಂದ್ರಶೇಖರ ಕಂಬಾರರು ಹೇಳಿದರು.

Last Updated : Feb 10, 2021, 9:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.