ETV Bharat / state

2022.. ಬಿಜೆಪಿ ಸರ್ಕಾರದ ಕೊರಳಿಗೆ ಸಿಲುಕಿಕೊಂಡ ಪ್ರಮುಖ ಹಗರಣಗಳಿವು.. - ಪೇ ಸಿಎಂ ಅಭಿಯಾನ

ಪಿಎಸ್ಐ ನೇಮಕಾತಿ ಹಗರಣ, ವಕ್ಫ್ ಹಗರಣ, ಮತದಾರರ ಪಟ್ಟಿ ಹಗರಣ, ಪೇ ಸಿಎಂ ಅಭಿಯಾನ ರಾಜ್ಯ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಪ್ರತಿಪಕ್ಷಗಳಿಗೆ ಆಹಾರವಾಗುವಂತೆ ಮಾಡಿತು. ಈ ಎಲ್ಲ ಹಗರಣಗಳ ಕುರಿತ ಸಮಗ್ರ ವಿವರದ ಕುರಿತ ಪಕ್ಷಿನೋಟ ಇಲ್ಲಿದೆ.

ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
author img

By

Published : Dec 15, 2022, 5:33 PM IST

ಬೆಂಗಳೂರು: 2022ಕ್ಕೆ ವಿದಾಯ ಹೇಳಿ 2023ಕ್ಕೆ ಕಾಲಿಡುವ ಸಮಯಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಪ್ರಸಕ್ತ ಸಾಲಿನಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಹಗರಣಗಳು, ಭ್ರಷ್ಟಾಚಾರ ಆರೋಪದ ಬಿಸಿ ತಟ್ಟಿದ್ದು, ಕಾಂಗ್ರೆಸ್​ನ ಪೇ ಸಿಎಂ ಅಭಿಯಾನ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ತೀವ್ರ ಮುಜುಗರವನ್ನುಂಟು ಮಾಡಿತ್ತು. ಈ ವರ್ಷದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕೇಳಿ ಬಂದ ಪ್ರಮುಖ ಆರೋಪ, ಹಗರಣಗಳ ಕುರಿತ ವರದಿ ಇಲ್ಲಿದೆ.

ಗುತ್ತಿಗೆದಾರರೊಬ್ಬರ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಸ್ಥಾನಕ್ಕೆ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ ರಾಜೀನಾಮೆ ನೀಡಿದ್ದು, ಗುತ್ತಿಗೆದಾರರಿಂದ ಶೇ.40ರಷ್ಟು ಕಮೀಷನ್ ಕೇಳುತ್ತಿರುವ ದೂರಿನ ವಿಚಾರದಲ್ಲಿ ಪಿಎಂ ಕಚೇರಿ ಎಂಟ್ರಿ, ಪಿಎಸ್ಐ ನೇಮಕಾತಿ ಹಗರಣ, ವಕ್ಫ್ ಹಗರಣ, ಮತದಾರರ ಪಟ್ಟಿ ಹಗರಣ, ಪೇ ಸಿಎಂ ಅಭಿಯಾನ ರಾಜ್ಯ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಪ್ರತಿಪಕ್ಷಗಳಿಗೆ ಆಹಾರವಾಗುವಂತೆ ಮಾಡಿತು.

ಈಶ್ವರಪ್ಪ ರಾಜೀನಾಮೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್ ಈಶ್ವರಪ್ಪ ತಮ್ಮ ಬಳಿ ಶೇ. 40ರಷ್ಟು ಕಮೀಷನ್ ಕೇಳಿದ್ದಾರೆ ಎಂದು ಆರೋಪಿಸಿ ಬೆಳಗಾವಿ ಮೂಲಕ ಗುತ್ತಿಗೆದಾರ ಸಂತೋಷ್ ಡೆತ್ ನೋಟ್ ಬರೆದಿಟ್ಟು ಉಡುಪಿಯಲ್ಲಿ 2022ರ ಏ.12ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಈಶ್ವರಪ್ಪ ಅವರೇ ತಮ್ಮ ಸಾವಿಗೆ ಕಾರಣ ಎಂದು ಡೆತ್ ನೋಟ್ ನಲ್ಲಿ ಸ್ಪಷ್ಟವಾಗಿ ಬರೆದಿದ್ದ ಹಿನ್ನೆಲೆಯಲ್ಲಿ ಈಶ್ವರಪ್ಪ ತಲೆದಂಡವಾಯಿತು.

ಪ್ರತಿಪಕ್ಷದ ಒತ್ತಡ, ಹೋರಾಟಕ್ಕೆ ಮಣಿದು ಏಪ್ರಿಲ್.14ರಂದು ಈಶ್ವರಪ್ಪ ಸಚಿವರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದು ರಾಜ್ಯ ಬಿಜೆಪಿ ಸರ್ಕಾರಕ್ಕೆ ತೀವ್ರ ಮುಖಭಂಗವಾಗುವಂತೆ ಮಾಡಿತ್ತು. ಹಿರಿಯ ಸಚಿವರೊಬ್ಬರು ಕಮೀಷನ್ ಆರೋಪಕ್ಕೆ ರಾಜೀನಾಮೆ ನೀಡಿದ್ದು, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುವಂತೆ ಮಾಡಿತ್ತು. ಇದು ರಾಜ್ಯ ಬಿಜೆಪಿಗೂ ತೀವ್ರ ಇರುಸು ಮುರುಸು ತಂದಿತ್ತು.

ಕಮೀಷನ್ ಆರೋಪದಲ್ಲಿ ಪಿಎಂ ಕಚೇರಿ ಎಂಟ್ರಿ: ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2021ರ ಜು. 6ಕ್ಕೆ ಪತ್ರ ಬರೆದಿದ್ದರು. ರಾಜ್ಯದಲ್ಲಿ ಕಾಮಗಾರಿಗಳಿಗೆ ಶೇ. 40ರಷ್ಟು ಕಮೀಷನ್ ಕೇಳಲಾಗುತ್ತಿದೆ. ಸರ್ಕಾರದ ಈ ಬೇಡಿಕೆಯಿಂದ ಗುಣಮಟ್ಟದ ಕೆಲಸ ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಮನವಿ ಮಾಡಿದ್ದರು.

ರಾಜ್ಯ ಸರ್ಕಾರ ಈ ಆರೋಪವನ್ನು ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೂಚನೆಯಂತೆ ಪಿಎಂ ಕಚೇರಿ ಮಧ್ಯಪ್ರವೇಶ ಮಾಡಿದ್ದು, 2022 ಜೂನ್ 28 ರಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣಗೆ ಪ್ರಧಾನಿ ಕಾರ್ಯಾಲಯದಿಂದ ಕರೆ ಬಂದಿದ್ದು, ಪ್ರಕರಣದ ಸಂಪೂರ್ಣ ಮಾಹಿತಿಯನ್ನು ದಾಖಲೆ ಸಮೇತ ಒದಗಿಸುವಂತೆ ಸೂಚಿಸಿತ್ತು. ಇದು ರಾಜ್ಯ ಬಿಜೆಪಿ ಸರ್ಕಾರವನ್ನು ಮತ್ತೊಮ್ಮೆ ಮುಜುಗರಕ್ಕೆ ಸಿಲುಕುವಂತೆ ಮಾಡಿತ್ತು.

ಪಿಎಸ್ಐ ನೇಮಕಾತಿ ಹಗರಣ: ಪಿಎಸ್ಐ ನೇಮಕದಲ್ಲಿ ನಡೆದ ಅಕ್ರಮ ಪ್ರಕರಣ ರಾಜ್ಯ ಬಿಜೆಪಿ ಸರ್ಕಾರದ ಪಾಲಿಗೆ ಅತ್ಯಂತ ದೊಡ್ಡ ಮುಜುಗರ ತರಿಸಿದ ಘಟನೆಯಾಗಿದೆ. ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಕಲಬುರಗಿ ಬಿಜೆಪಿ ನಾಯಕಿಯಾಗಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಅವರನ್ನು ಮಹಾರಾಷ್ಟ್ರದ ಪುಣೆಯಲ್ಲಿ ಸಿಐಡಿ ಪೊಲೀಸರು ಬಂಧಿಸಿದ್ದರು.

ಇದು ಬಿಜೆಪಿ ವಿರುದ್ಧದ ಆರೋಪಕ್ಕೆ ಪುಷ್ಟಿ ನೀಡಿತ್ತು. ಈ ಅಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ ಎಂದು ಆರೋಪ ಇಡೀ ಸರ್ಕಾರವನ್ನೇ ತಲ್ಲಣಗೊಳಿಸಿತ್ತು. ಹೈಕಮಾಂಡ್​​​ನ ಕೆಂಗಣ್ಣಿಗೂ ಗುರಿಯಾಗಬೇಕಾಯಿತು. ಪ್ರತಿಪಕ್ಷಗಳಿಂದ ಟೀಕೆಗೂ ಗುರಿಯಾಗಿ ಅಂತಿಮವಾಗಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತು. ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪಾಲ್, ಡಿವೈಎಸ್ಪಿ ಶಾಂತಕುಮಾರ್, ಮಲ್ಲಿಕಾರ್ಜುನ ಸಾಲಿ, ಸಿಪಿಐ ಆನಂದ್ ಮೇತ್ರೆ ಸೇರಿದಂತೆ ಹಲವರ ಬಂಧನವಾಗಿದೆ. ಆದರೆ ಸರ್ಕಾರಕ್ಕೆ ಈ ಪ್ರಕರಣ ಕಪ್ಪುಚುಕ್ಕೆಯಾಗಿದೆ.

ವಕ್ಫ್ ಹಗರಣ: ಕಳೆದ 10 ವರ್ಷಗಳಿಂದ ಮೂಲೆ ಸೇರಿದ್ದ ವಕ್ಫ್ ಆಸ್ತಿ ಕಬಳಿಕೆ ಕುರಿತ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಬಿಜೆಪಿ ವಿಧಾನ ಪರಿಷತ್​ನಲ್ಲಿ ಮಂಡಿಸಿ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿತು. ಸದನದಲ್ಲಿ ಗದ್ದಲದ ವಾತಾವರಣವಿದ್ದಾಗ ವರದಿ ಪ್ರತಿಯನ್ನು ನೀಡದೇ, ಮಾಹಿತಿಯನ್ನೂ ಕೊಡದೇ ಏಕಾಏಕಿ ವರದಿ ಮಂಡಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರತಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದವು. ನಂತರ ಇದು ವಿಧಾನಸಭೆಗೂ ವ್ಯಾಪಿಸಿ ಅಲ್ಲಿಯೂ ಗದ್ದಲ ಸೃಷ್ಟಿಗೆ ಕಾರಣವಾಯಿತು. ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದು ವಾಗ್ದಾಳಿ ನಡೆಸಿದವು.

ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದ ಸರ್ಕಾರ ಉನ್ನತ ಮಟ್ಟದ ತನಿಖೆಗೆ ವಹಿಸುವ ಕುರಿತು ಹೇಳಿಕೆ ನೀಡಿತ್ತು. ಆದರೆ, ಪ್ರತಿಪಕ್ಷಗಳ ವಾಗ್ದಾಳಿ ನಂತರ ಮುಖ್ಯಮಂತ್ರಿಗಳು ನೀಡಿದ್ದ ಹೇಳಿಕೆ ಸ್ವತಃ ವರದಿ ನೀಡಿದ್ದ ಅನ್ವರ್ ಮಾಣಿಪ್ಪಾಡಿ ಅವರನ್ನೇ ಕೆರಳಿಸಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಬಹಿರಂಗವಾಗಿಯೇ ಸ್ವಪಕ್ಷೀಯ ಮುಖಂಡ ಮಾಣಿಪ್ಪಾಡಿ ಅಸಮಾಧಾನ ಹೊರಹಾಕಿ ಭ್ರಷ್ಟರ ರಕ್ಷಣೆಗೆ ಯತ್ನಿಸುತ್ತಿರುವ ಗಂಭೀರ ಆರೋಪ ಮಾಡಿದ್ದರು.

ವಕ್ಫ್ ಆಸ್ತಿ ಹಗರಣದ ಅಪರಾಧಿಗಳನ್ನು ರಕ್ಷಿಸಲು ಸಿಎಂ ಯತ್ನಿಸುತ್ತಿದ್ದಾರೆ. ಕೊಳ್ಳೆ ಹೊಡೆದಿದ್ದಾರೆ ಎನ್ನಲಾದ 2200 ಕೋಟಿ ರೂಪಾಯಿ ಆಸ್ತಿಗೆ ಸಂಬಂಧಿಸಿದ ಹೋರಾಟದಲ್ಲಿ ವಕ್ಫ್ ಮಂಡಳಿಯನ್ನು ಬೆಂಬಲಿಸುವುದಾಗಿ ಸಿಎಂ ನೀಡಿದ್ದ ಹೇಳಿಕೆ ಸರಿಯಲ್ಲ. ವಕ್ಫ್ ಹಗರಣದಲ್ಲಿ ನಡೆದಿರುವುದು 2,30,000 ಕೋಟಿ ರೂಪಾಯಿ ಮೊತ್ತದ ಹಗರಣವಾಗಿದ್ದು, ಇದರ ಬದಲಾಗಿ ಸಿಎಂ, 2,200 ಕೋಟಿ ಹಗರಣವನ್ನು ಕೈಗೆತ್ತಿಕೊಳ್ಳುವುದಾಗಿ ಹೇಳುತ್ತಿದ್ದಾರೆ ಎಂದು ಸಿಎಂ ವಿರುದ್ಧವೇ ಗಂಭೀರ ಆರೋಪ ಮಾಡಿದ್ದರು.

ಇದರಿಂದ ಪಕ್ಷ ಮತ್ತು ಸರ್ಕಾರ ಮುಜುಗರಕ್ಕೆ ಸಿಲುಕಬೇಕಾಯಿತು. ನಂತರ ಪಕ್ಷದ ಮುಖಂಡರು ಮಾಣಿಪ್ಪಾಡಿಯನ್ನೇ ಮೌನವಾಗಿಸಿ ಹಗರಣದ ಬಿಸಿಯನ್ನು ತಣಿಯುವಂತೆ ಮಾಡಿದ್ದಾರೆ.

ಮತದಾರರ ಪಟ್ಟಿ ಹಗರಣ: ಉದ್ದೇಶಪೂರ್ವಕವಾಗಿಯೇ ನಿರ್ದಿಷ್ಟ ಸಮುದಾಯ ಗುರಿಯಾಗಿಟ್ಟುಕೊಂಡು ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ ಎಂಬ ಆರೋಪ ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬಂದಿದೆ. ಕರ್ನಾಟಕ ರಾಜ್ಯಾದ್ಯಂತ 27 ಲಕ್ಷಕ್ಕೂ ಅಧಿಕ ಮತದಾರರನ್ನು ಪಟ್ಟಿಯಿಂದ ಸದ್ದಿಲ್ಲದೇ ಕೈಬಿಡಲಾಗಿದೆ. ಬೆಂಗಳೂರು ನಗರವೊಂದರಲ್ಲಿಯೇ 6. 69 ಲಕ್ಷ ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ. ಬಿಜೆಪಿ ಮತದಾರರಲ್ಲದವರನ್ನು ಪಟ್ಟಿಯನ್ನು ಕೈಬಿಡಲಾಗಿದೆ ಎನ್ನುವ ಆರೋಪ ಬಿಜೆಪಿ ವಿರುದ್ಧ ಕೇಳಿ ಬಂದಿದೆ.

ಚುನಾವಣಾ ಆಯೋಗ ನಡೆಸಬೇಕಾದ ಮತದಾರರ ಪಟ್ಟಿ ಪರಿಷ್ಕರಣೆಯನ್ನು ರಾಜ್ಯ ಸರ್ಕಾರ, ಬಿಬಿಎಂಪಿ ಮತ್ತು ಸ್ಥಳೀಯ ಚುನಾವಣಾಧಿಕಾರಿಗಳ ಅಭಯ ಹಸ್ತ ಪಡೆದು ಬಿಜೆಪಿಯ ಸಚಿವರ, ಶಾಸಕರ ರಾಜಕೀಯ ಬೆಂಬಲವಿದೆ ಎನ್ನಲಾಗುತ್ತಿರುವ ಚಿಲುಮೆ ಸಂಸ್ಥೆ ಅಕ್ರಮವಾಗಿ ನಡೆಸಿಬಿಟ್ಟಿದೆ ಎನ್ನುವ ಆರೋಪ ಕೇಳಿಬಂದಿದೆ.

ಸಮೀಕ್ಷೆಯನ್ನು ಸಹ ನಡೆಸಿದೆ: ಮತದಾರರ ಜಾಗೃತಿ ನಡೆಸುವುದಕ್ಕಾಗಿ ಮಾತ್ರ ಅನುಮತಿ ಪಡೆದು ಅದು ಕೆಲ ಚುನಾವಣಾ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಎಂಬ ನಕಲಿ ಗುರುತಿನ ಚೀಟಿಗಳನ್ನು ಸೃಷ್ಟಿಸಿಕೊಂಡು ಬೆಂಗಳೂರಿನ 243 ವಾರ್ಡ್‌ಗಳ ಮತದಾರರ ಸಂಪೂರ್ಣ ಡೇಟಾ ಸಂಗ್ರಹಿಸಿದೆ. ಅದರಲ್ಲಿ ಹೆಸರು, ಮೊಬೈಲ್ ಸಂಖ್ಯೆ, ಜಾತಿ, ಧರ್ಮ, ರೀತಿಯ ಎಲ್ಲ ಮಾಹಿತಿ ಪಡೆದುದ್ದಲ್ಲದೇ ಸರ್ಕಾರ ಬಗೆಗಿನ ನಿಮ್ಮ ಅಭಿಪ್ರಾಯವೇನು, ಮುಂದಿನ ಚುನಾವಣೆಯಲ್ಲಿ ಯಾರನ್ನು ಬೆಂಬಲಿಸುತ್ತೀರಿ ಎಂಬ ಸಮೀಕ್ಷೆಯನ್ನು ಸಹ ನಡೆಸಿದೆ.

ಆ ಮೂಲಕ ಯಾರು ಸರ್ಕಾರದ ಪರವಾಗಿದ್ದಾರೆ? ಯಾರು ವಿರುದ್ಧವಾಗಿದ್ದಾರೆ ಎಂಬ ಅಮೂಲ್ಯ ಮಾಹಿತಿಯನ್ನು ಕದ್ದಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದು, ನೇರವಾಗಿ ಬಿಜೆಪಿಯೇ ಇದರಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿವೆ. ಚುನಾವಣೆ ಸನಿಹದಲ್ಲಿರುವಾಗ ಆಡಳಿತಾರೂಢ ಬಿಜೆಪಿ ವಿರುದ್ಧ ಕೇಳಿಬಂದ ಮತದಾರರ ಪಟ್ಟಿ ಹಗರಣ ಆರೋಪ ಬಿಜೆಪಿಗೆ ಹೊಸ ಸಂಕಷ್ಟ ತಂದಿದೆ. ಆಪರೇಷನ್ ಕಮಲದ ಆರೋಪದಂತೆ ಆಪರೇಷನ್ ವೋಟರ್ ಐಸಿ ಆರೋಪ ಬಿಜೆಪಿ ವಿರುದ್ಧ ಸುತ್ತಿಕೊಳ್ಳುತ್ತಿದೆ.

ಪೇ ಸಿಎಂ ಅಭಿಯಾನ: ಶೇ 40ರಷ್ಟು ಕಮಿಷನ್ ಆರೋಪ ಮುಂದಿಟ್ಟುಕೊಂಡು ಪೇ ಸಿಎಂ ಎಂದು ಪೇಟಿಎಂ ಮಾದರಿಯಲ್ಲಿ ರಚಿಸಲಾಗಿರುವ ಪೋಸ್ಟರ್ ರಾಜ್ಯ ಬಿಜೆಪಿ ಸರ್ಕಾರವನ್ನು ರಾಷ್ಟ್ರಮಟ್ಟದಲ್ಲಿ ತಲೆ ತಗ್ಗಿಸುವಂತೆ ಮಾಡಿತ್ತು. ಬೆಂಗಳೂರು ನಗರದ ವಿವಿಧೆಡೆ ಮುಖ್ಯಮಂತ್ರಿ ಚಿತ್ರ ಸಹಿತ ಪೇಸಿಎಂ ಕ್ಯೂಆರ್ ಕೋಡ್ ಇರುವ ಭಿತ್ತಿಪತ್ರಗಳನ್ನು ಅಂಟಿಸಲಾಗಿತ್ತು.

ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ರಾಜ್ಯ ಸರ್ಕಾರದ ವಿರುದ್ಧದ ದೂರುಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಘಟಕ ಇತ್ತೀಚೆಗೆ ಬಿಡುಗಡೆ ಮಾಡಿದ 'ಶೇ 40 ಕಮಿಷನ್ ಸರ್ಕಾರ' ವೆಬ್ ಸೈಟ್ ತೆರೆದುಕೊಳ್ಳುತ್ತಿತ್ತು. ನಗರದ ಜಯಮಹಲ್‌ ರಸ್ತೆ, ಇಂಡಿಯನ್ ಎಕ್ಷ್‌ಪ್ರೆಸ್‌ ಬಳಿ ಗೋಡೆಗೆ ಪೇ ಸಿಎಂ ಎಂದು ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರವಿರುವ ಪೋಸ್ಟರ್‌ ಅಂಟಿಸುವ ಮೂಲಕ ಭ್ರಷ್ಟ ಸರ್ಕಾರ ಎಂದು ಅಣಕಿಸಲಾಗಿತ್ತು.

ಶೇ 40ರಷ್ಟು ಕಮೀಷನ್​ ಇಲ್ಲಿ ಸ್ವೀಕರಿಸಲಾಗುತ್ತದೆ ಎಂದು ಪೋಸ್ಟರ್‌ನಲ್ಲಿ ಒಕ್ಕಣೆ ಬರೆಯಲಾಗಿತ್ತು. ಪೇಟಿಎಂ ಮಾದರಿಯಲ್ಲಿ ಪೇ ಸಿಎಂ ಎಂದು ಕ್ಯೂಆರ್ ಕೋಡ್ ಮೇಲೆ ಸಿಎಂ ಬಸವರಾಜ ಬೊಮ್ಮಾಯಿ‌ ಫೋಟೋ ಹಾಕಲಾಗಿತ್ತು. ಇದು ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿ ಹೈಕಮಾಂಡ್ ನಿಂದಲೂ ಬೊಮ್ಮಾಯಿ ಸರ್ಕಾರ ತಿವಿಸಿಕೊಳ್ಳಬೇಕಾಯಿತು. ಪೇ ಸಿಎಂ ಅಭಿಯಾನವನ್ನು ತಡೆಯಲು ಬೊಮ್ಮಾಯಿಯ ಇಡೀ ಸಂಪುಟ, ಬಿಜೆಪಿ ನಾಯಕರು ಟೊಂಕ ಕಟ್ಟಿ ನಿಂತರೂ ಆಗದೆ ಹೈರಾಣಾಗಿದ್ದರು.

ಓದಿ: ಕುಕ್ಕರ್ ಬ್ಲಾಸ್ಟ್ ಮೂಲಕ ಬಿಜೆಪಿಯಿಂದ ಮತದಾರರ ಮಾಹಿತಿ ಕಳ್ಳತನ ವಿಷಯ ಡೈವರ್ಟ್: ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.