ETV Bharat / state

ಎರಡನೆ ಅಭ್ಯರ್ಥಿ ಪಟ್ಟಿಯಲ್ಲೂ ಕೆಲ ಹಾಲಿ ಶಾಸಕರ ಹೆಸರು ಘೋಷಣೆ ಮಾಡದ ಕಾಂಗ್ರೆಸ್​!! - ಈಟಿವಿ ಭಾರತ ಕನ್ನಡ

ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯ ಬಿಡುಗಡೆ ಮಾಡಿದ್ದು, ಕೆಲವು ಹಾಲಿ ಶಾಸಕರ ಹೆಸರನ್ನು ಘೋಷಣೆ ಮಾಡಿಲ್ಲ.

ಘೋಷಣೆ ಮಾಡದ ಕಾಂಗ್ರೆಸ್​ ಹಾಲಿ ಶಾಸಕರು
ಘೋಷಣೆ ಮಾಡದ ಕಾಂಗ್ರೆಸ್​ ಹಾಲಿ ಶಾಸಕರು
author img

By

Published : Apr 6, 2023, 1:51 PM IST

ಬೆಂಗಳೂರು: ಕಾಂಗ್ರೆಸ್​ ಈಗಾಗಲೇ ಅಭ್ಯರ್ಥಿಗಳ ಎರಡೂ ಪಟ್ಟಿಗಳನ್ನು ಬಿಡುಗಡೆ ಮಾಡಿದ್ದು, ಮೊದಲು ಮತ್ತು ಎರಡನೇ ಪಟ್ಟಿಯಲ್ಲಿ ಕೆಲವು ಹಾಲಿ ಶಾಸಕರ ಹೆಸರನ್ನು ಘೋಷಣೆ ಮಾಡದೇ ಇದ್ದಿದ್ದು ಕುತೂಹಲ ಮೂಡಿಸಿದೆ. ಇವರಲ್ಲಿ ಪ್ರಮುಖ ಎಂದರೆ ಪಾವಗಡ ಶಾಸಕ ವೆಂಕಟರಮಣಪ್ಪ, ಶಿಡ್ಲಘಟ್ಟ ಶಾಸಕ ವಿ. ಮುನಿಯಪ್ಪ, ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ, ಹರಿಹರ ಶಾಸಕ ರಾಮಪ್ಪ, ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ, ಸಿದ್ದರಾಮಯ್ಯಗೆ ಟಿಕೆಟ್​ ನೀಡಿದ್ದರಿಂದ ವರುಣಾದಿಂದ ಟಿಕೆಟ್​ ಕೈ ತಪ್ಪಿದ್ದ ಡಾ.ಯತೀಂದ್ರ ಸಿದ್ದರಾಮಯ್ಯಗೂ ಟಿಕೆಟ್ ಘೋಷಣೆ ಮಾಡಲಾಗಿಲ್ಲ.

ಟಿಕೆಟ್ ಪಡೆದವರಲ್ಲಿ ಅಪ್ಜಲ್​ಪುರ ಶಾಸಕ ಎಂ.ವೈ.ಪಾಟೀಲ್ ಪ್ರಮುಖರು. ತಮಗೆ ವಯಸ್ಸಾಗಿದ್ದು ತಮ್ಮ ಪುತ್ರನಿಗೆ ಇಲ್ಲವೇ ಯುವಕರಿಗೆ ಅಥವಾ ಬೇರೆಯವರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಆದ್ದರಿಂದ ಮೊದಲ ಪಟ್ಟಿಯಲ್ಲಿ ಅವರ ಹೆಸರನ್ನು ಪೆಂಡಿಂಗ್ ಇಡಲಾಗಿತ್ತು. ಆದರೆ, ಎರಡನೇ ಪಟ್ಟಿಯಲ್ಲಿ ಅವರ ಹೆಸರನ್ನು ಕಾಂಗ್ರೆಸ್ ಪ್ರಕಟಿಸಿದೆ. ಕಾಂಗ್ರೆಸ್​ 124 ಅಭ್ಯರ್ಥಿಗಳನ್ನೊಳಗೊಂಡ ತನ್ನ ಮೊದಲ ಪಟ್ಟಿಯನ್ನು, ಮಾ.25ರಂದು ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಬಿಡುಗಡೆ ಮಾಡಿದ್ದರು.

ಕಾಂಗ್ರೆಸ್​ ಮೊದಲ ಪಟ್ಟಿಯ ಪ್ರಮುಖ ಅಭ್ಯರ್ಥಿಗಳು : ಕಾಗವಾಡಕ್ಕೆ ಭರಮಗೌಡ ಆಲಗೌಡ ಕಾಗೆ, ಚಿಕ್ಕೋಡಿ- ಸದಲಗಾ ವಿಧಾನಸಭಾ ಕ್ಷೇತ್ರಕ್ಕೆ ಗಣೇಶ್ ಹುಕ್ಕೇರಿ, ಹುಕ್ಕೇರಿಗೆ ಎಬಿ ಪಾಟೀಲ್, ಕುಡಚಿ ಎಸ್‌ಸಿ ಕ್ಷೇತ್ರಕ್ಕೆ ಮಹೇಂದ್ರ ತಮ್ಮಣ್ಣನವರ್, ಬೆಳಗಾವಿ ಗ್ರಾಮಾಂತರಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್, ಯಮಕನಮರಡಿ ಎಸ್​ಟಿ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ, ಬೈಲಹೊಂಗಲಕ್ಕೆ ಮಹಾಂತೇಶ ಶಿವಾನಂದ ಕೌಜಲಗಿ, ಖಾನಾಪುರಕ್ಕೆ ಅಂಜಲಿ ನಿಂಬಾಳ್ಕರ್, ಜಮಖಂಡಿಗೆ ಆನಂದ ಸಿದ್ದು ನ್ಯಾಮಗೌಡ, ರಾಮದುರ್ಗದಿಂದ ಅಶೋಕ್ ಎಂ ಪಟ್ಟಣ್, ಮುದ್ದೇಬಿಹಾಳದಿಂದ ಅಪ್ಪಾಜಿ ಅಲಿಯಾಸ್ ಸಿ.ಎಸ್. ನಾಡಗೌಡ, ಹುನಗುಂದದಿಂದ ವಿಜಯಾನಂದ ಎಸ್ ಕಾಶಪ್ಪನವರ್, ಬಸವನ ಬಾಗೇವಾಡಿಯಿಂದ ಶಿವಾನಂದ ಪಾಟೀಲ್.

ಇಂಡಿಯಿಂದ ಯಶವಂತರಾಯ ಗೌಡ ವಿ ಪಾಟೀಲ್, ಬಬಲೇಶ್ವರದಿಂದ ಎಂಬಿ ಪಾಟೀಲ್, ಸುರಪುರದಿಂದ ರಾಜ ವೆಂಕಟಪ್ಪ ನಾಯಕ್, ಜೇವರ್ಗಿಯಿಂದ ಡಾ. ಅಜಯ್ ಸಿಂಗ್, ಶಹಾಪುರದಿಂದ ಶರಣಬಸಪ್ಪ ಗೌಡ, ಸೇಡಂನಿಂದ ಡಾ ಶರಣಪ್ರಕಾಶ್ ಪಾಟೀಲ್, ಚಿತ್ತಾಪುರ ಎಸ್​ಟಿ ಕ್ಷೇತ್ರದಿಂದ ಪ್ರಿಯಾಂಕ ಖರ್ಗೆ, ಕಲಬುರ್ಗಿ ಉತ್ತರ ಕ್ಷೇತ್ರಕ್ಕೆ ಖನಿಜ ಫಾತಿಮಾ, ಚಿಂಚೋಳಿ ಎಸ್​ಸಿ ಕ್ಷೇತ್ರಕ್ಕೆ ಸುಭಾಷ್ ವಿ ರಾಥೋಡ್, ಆಳಂದ ಕ್ಷೇತ್ರದಿಂದ ಬಿಆರ್ ಪಾಟೀಲ್, ಬೀದರ್ ದಕ್ಷಿಣದಿಂದ ಅಶೋಕ್ ಖೇಣಿ, ಹುಮ್ನಾಬಾದ್​ನಿಂದ ರಾಜಶೇಖರ್ ವಿ ಪಾಟೀಲ್, ಭಾಲ್ಕಿಯಿಂದ ಈಶ್ವರ್ ಖಂಡ್ರೆ, ಬೀದರ್​ನಿಂದ ರಹೀಮ್ ಖಾನ್, ರಾಯಚೂರು ಗ್ರಾಮಾಂತರ ಎಸ್​ಟಿ ಕ್ಷೇತ್ರಕ್ಕೆ ಬಸವನಗೌಡ ದದ್ದಲ್.

ಮಸ್ಕಿ ಎಸ್‌ಟಿ ಕ್ಷೇತ್ರಕ್ಕೆ ಬಸವನಗೌಡ ತುರುವಿಹಾಳ, ಕನಕಗಿರಿ ಎಸ್​ಸಿ ವಿಧಾನಸಭೆ ಕ್ಷೇತ್ರದಿಂದ ಶಿವರಾಜ್ ಸಂಗಪ್ಪ ತಂಗಡಗಿ, ಕುಷ್ಟಗಿ ವಿಧಾನಸಭೆ ಕ್ಷೇತ್ರದಿಂದ ಅಮರೇಗೌಡ ಪಾಟೀಲ್ ಬಯ್ಯಾಪುರ, ಕೊಪ್ಪಳದಿಂದ ಕೆ ರಾಘವೇಂದ್ರ, ಯಲಬುರ್ಗಾದಿಂದ ಬಸವರಾಜ್ ರಾಯರೆಡ್ಡಿ, ರೋಣದಿಂದ ಬಿಎಸ್ ಪಾಟೀಲ್, ಗದಗ ವಿಧಾನಸಭೆ ಕ್ಷೇತ್ರಕ್ಕೆ ಹೆಚ್ ಕೆ ಪಾಟೀಲ್, ಹುಬ್ಬಳ್ಳಿ ಧಾರವಾಡ ಪೂರ್ವದಿಂದ ಪ್ರಸಾದ್ ಅಬ್ಬಯ್ಯ, ಹಳಿಯಾಳ ಕ್ಷೇತ್ರಕ್ಕೆ ಆರ್ ವಿ ದೇಶಪಾಂಡೆ, ಕಾರವಾರ ಸತೀಶ್ ಸೈಲ್, ಸೇರಿದಂತೆ ಇನ್ನು ಹಲವು ಪ್ರಮುಖರು ಮೊದಲ ಪಟ್ಟಿಯಲ್ಲಿದ್ದಾರೆ.

ಇದನ್ನೂ ಓದಿ: ಅಳೆದು ತೂಗಿ ಪ್ರಕಟವಾಯ್ತು ಕಾಂಗ್ರೆಸ್ ಎರಡನೇ ಪಟ್ಟಿ..! ಹೀಗಿದೆ ಟಿಕೆಟ್​ ಹಂಚಿಕೆ ಹಿಂದಿನ ಲೆಕ್ಕಾಚಾರ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.