ETV Bharat / state

ಹ್ಯಾರಿಸ್​ ನಲಪಾಡ್​ರವರ ಲೆಟ್ಸ್ ಟೇಕ್ ಚಾರ್ಜ್ ಅಭಿಯಾನಕ್ಕೆ ಉತ್ತಮ ಸ್ಪಂದನೆ - Good response from young people

ಲೆಟ್ಸ್ ಟೇಕ್ ಚಾರ್ಜ್ ಅಭಿಯಾನವನ್ನು ಯಶಸ್ವಿಗೊಳಿಸಿದ ಕರ್ನಾಟಕದ ಯುವಜನತೆಗೆ ಅಭಿನಂದನೆ ಸಲ್ಲಿಸಿರುವ ಮೊಹ್ಮದ್ ಹ್ಯಾರೀಸ್ ನಲಪಾಡ್, “ದಾಖಲಿಸಲಾದ ಪರಿಹಾರೋಪಾಯಗಳನ್ನು ಕಾರ್ಯರೂಪಕ್ಕೆ ತರುವ ಸಾಧ್ಯತೆಗಳ ಕುರಿತು ತಜ್ಞರ ತಂಡದೊಂದಿಗೆ ಚರ್ಚಿಸಲಾಗುವುದು” ಎಂದು ತಿಳಿಸಿದ್ದಾರೆ.

Let's Take Charge Campaign; Good response from young people
ಮೊಹ್ಮದ್ ಹ್ಯಾರೀಸ್ ನಲಪಾಡ್
author img

By

Published : Nov 2, 2020, 11:18 PM IST

ಬೆಂಗಳೂರು: ಮಹಾನಗರ ಯುವ ಕಾಂಗ್ರೆಸ್​ನ ಅಧ್ಯಕ್ಷರಾದ ಮೊಹ್ಮದ್ ಹ್ಯಾರೀಸ್ ನಲಪಾಡ್ ಅವರು ಆರಂಭಿಸಿರುವ ‘ಲೆಟ್ಸ್ ಟೇಕ್ ಚಾರ್ಜ್’ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲನೇ ದಿನವೇ 10 ಸಾವಿರಕ್ಕೂ ಅಧಿಕ ಪರಿಹಾರೋಪಾಯಗಳನ್ನು ಯುವಜನರು ದಾಖಲಿಸಿದ್ದಾರೆ.

ಕನ್ನಡ ರಾಜ್ಯೋತ್ಸವದ ದಿನದಂದು ಮೊಹ್ಮದ್ ಹ್ಯಾರೀಸ್ ನಲಪಾಡ್ ಅವರು ಪ್ರವಾಹದಿಂದ ಉಂಟಾದ ಸಮಸ್ಯೆಗಳಿಗೆ ಪರಿಹಾರೋಪಾಯವನ್ನು ಕಂಡುಕೊಳ್ಳುವ ‘ಲೆಟ್ಸ್ ಟೇಕ್ ಚಾರ್ಜ್’ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಹೆಚ್ಚಿನ ಉತ್ತರಗಳು ಬೆಂಗಳೂರು ನಗರ ಜಿಲ್ಲೆಯಿಂದ ಬಂದಿದ್ದು, ಮೈಸೂರು ಜಿಲ್ಲೆ ಹಾಗೂ ಶಿವಮೊಗ್ಗ ಜಿಲ್ಲೆಗಳು ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.

500ಕ್ಕೂ ಹೆಚ್ಚಿನ ಸ್ಪರ್ಧಾಳುಗಳು ತುಮಕೂರು, ಧಾವಾಡ, ಹಾವೇರಿ, ಉತ್ತರ ಕನ್ನಡ, ಬೆಂಗಳೂರು ಗ್ರಾಮೀಣ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ನೋಂದಾಯಿಸಿಕೊಂಡಿದ್ದರೆ. ಕೊಪ್ಪಳ, ಬೀದರ್, ರಾಯಚೂರು ಮತ್ತು ಉಡುಪಿಯ ಯುವಕರಿಂದ 300ಕ್ಕೂ ಹೆಚ್ಚಿನ ಪ್ರತಿಕ್ರಿಯೆಗಳು ಬಂದಿವೆ. ರಾಜ್ಯಾದ್ಯಂತದಿಂದ ಯುವಜನತೆ ಅಭಿಯಾನದಲ್ಲಿ ಭಾಗವಹಿಸುತ್ತಿದೆ ಎನ್ನುವುದುದನ್ನು ಈ ಅಂಕಿ ಅಂಶಗಳು ತಿಳಿಸುತ್ತವೆ ಎಂದು ಐಟಿ ತಂಡ ತಿಳಿಸಿದೆ.

ಈ ಕುರಿತು ತಮ್ಮ ಸಂತಸವನ್ನು ಹಂಚಿಕೊಂಡ ನಲಪಾಡ್ ಅವರು, ‘ಲೆಟ್ಸ್ ಟೇಕ್ ಚಾರ್ಜ್’ ಅಭಿಯಾನವನ್ನು ಯಶಸ್ವಿಗೊಳಿಸಿದ ಕರ್ನಾಟಕದ ಯುವಜನತೆಗೆ ಅಭಿನಂದನೆ ಸಲ್ಲಿಸಿ “ದಾಖಲಿಸಲಾದ ಪರಿಹಾರೋಪಾಯಗಳನ್ನು ಕಾರ್ಯರೂಪಕ್ಕೆ ತರುವ ಸಾಧ್ಯತೆಗಳ ಕುರಿತು ತಜ್ಞರ ತಂಡದೊಂದಿಗೆ ಚರ್ಚಿಸಲಾಗುವುದು” ಎಂದು ತಿಳಿಸಿದರು.

ಅಭಿಯಾನದ ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯುತ್ತಮ ಪರಿಹಾರೋಪಾಯವನ್ನು ಸೂಚಿಸಿ ವಿಜೇತರಾದವರು ಐಫೋನ್ 12 ಸೇರಿದಂತೆ ಸ್ಯಾಮ್‍ಸಂಗ್ ಗ್ಯಾಲಾಕ್ಸಿ ಎ51, ಸ್ಯಾಮ್‍ಸಂಗ್ ಗ್ಯಾಲಾಕ್ಸಿ ಎ21 ಮತ್ತು ಸ್ಯಾಮ್‍ಸಂಗ್ ಗ್ಯಾಲಾಕ್ಸಿ ಟ್ಯಾಬ್ ಎ ಅನ್ನು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಚತುರ್ಥ ಬಹುಮಾನವಾಗಿ ಪಡೆಯಲಿದ್ದಾರೆ.

ಕರ್ನಾಟಕದಲ್ಲಿ ವಾಸಿಸುವ 18ರಿಂದ 35 ವರ್ಷದೊಳಗಿನವರು ‘ಲೆಟ್ಸ್ ಟೇಕ್ ಚಾರ್ಜ್’ ಅಭಿಯಾನದಲ್ಲಿ ಭಾಗವಹಿಸಬಹುದು ಎಂದು ಸ್ಪರ್ಧೆಯ ಕುರಿತು ವಿವರಿಸಿದರು. ಅಭಿಯಾನಕ್ಕೆ ಸಂಬಂಧಿಸಿದಂತೆ ಈಗಾಗಲೇ 9999835988 ವಾಟ್ಸಪ್​ ನಂಬರ್ ಅನ್ನು ಬಿಡುಗಡೆ ಮಾಡಲಾಗಿದ್ದು, ‘ಲೆಟ್ಸ್ ಟೇಕ್ ಚಾರ್ಜ್’ ಅಭಿಯಾನದ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.

ಸ್ಪರ್ಧಾಳುಗಳು ಗೂಗಲ್ ಫಾರ್ಮ್ ಮೂಲಕ ತಮ್ಮ ಸಲಹೆ-ಸೂಚನೆಗಳನ್ನು ಸಲ್ಲಿಸಬಹುದಾಗಿದ್ದು, ಗೂಗಲ್ ಫಾರ್ಮ್ ಲಿಂಕ್ ಅನ್ನು ಮೊಹ್ಮದ್ ಹ್ಯಾರೀಸ್ ನಲಪಾಡ್ ಅವರ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ಹಂಚಿಕೊಳ್ಳಲಾಗಿದೆ. ಒಬ್ಬ ಸ್ಪರ್ಧಾಳುವಿಗೆ ಒಂದು ಎಂಟ್ರಿಗೆ ಮಾತ್ರ ಅವಕಾಶ. ಕನ್ನಡ, ಇಂಗ್ಲೀಶ್ ಹಾಗೂ ಹಿಂದಿ ಭಾಷೆಯಲ್ಲಿ ಗೂಗಲ್ ಫಾರ್ಮ್ ಭರ್ತಿ ಮಾಡಬಹುದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.