ETV Bharat / state

ಲೋಕ ಕಲ್ಯಾಣಕ್ಕಾಗಿ ಯಾಗಗಳು ನಿರಂತರವಾಗಿ ನಡೆಯಲಿ: ಬಸವರಾಜ ಬೊಮ್ಮಾಯಿ - ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ

ಕಾಲಕಾಲಕ್ಕೆ ಋಷಿ, ಮುನಿಗಳು ನಾಡಿನ ಶ್ರೇಯೋಭಿವೃದ್ಧಿಗಾಗಿ ಯಾಗ ಮಾಡುತ್ತಾ ಬಂದಿರುವುದು ನಮ್ಮ ಸಂಸ್ಕೃತಿಯಲ್ಲಿ ನಡೆಯುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
author img

By

Published : Aug 11, 2023, 9:22 PM IST

Updated : Aug 11, 2023, 10:58 PM IST

ಬೆಂಗಳೂರು : ಲೋಕಕಲ್ಯಾಣಕ್ಕಾಗಿ ಯಾಗಗಳು ನಿರಂತರವಾಗಿ ನಡೆಯಲಿ. ಚಾತುರ್ಮಾಸ್ಯ ಸಂದರ್ಭದಲ್ಲಿ ಲೋಕಕಲ್ಯಾಣಕ್ಕಾಗಿ ನಡೆಯುವ ಚಂಡಿಕಾ ಯಾಗದಿಂದ ಎಲ್ಲರಿಗೂ ಒಳಿತಾಗಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಹಾಲಕ್ಷ್ಮೀ ಲೇಔಟ್​ನಲ್ಲಿ ನಡೆಯುತ್ತಿರುವ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀ ನರಸಿಂಹ ಪೀಠಾಧೀಶ್ವರರಾದ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತ ಹಾಗೂ ಚಂಡಿಕಾ ಯಾಗದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೂರು ದಿನಗಳಿಗಿಂತಲೂ ಹೆಚ್ಚು ನಡೆಯುವ ಈ ಚಾತುರ್ಮಾಸ್ಯಕ್ಕೆ ಗೋಪಾಲಯ್ಯ ಕುಟುಂಬ ಸೇವಾಕಾರ್ಯ ಮಾಡುತ್ತಿದೆ. ಅವರಿಗೆ ಶ್ರೇಯಸ್ಸು ದೊರಕಲಿ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಕೆ. ಗೋಪಾಲಯ್ಯ, ಶಾಸಕ ಸಿ. ಕೆ ರಾಮಮೂರ್ತಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ. ಡಿ ಲಕ್ಷ್ಮೀ ನಾರಾಯಣ ಮತ್ತಿತರರು ಹಾಜರಿದ್ದರು.

ಅಘೋರಿಗಳಿಂದ ಅಕಾಲ ಮೃತ್ಯುಂಜಯ ಯಾಗ : ಇನ್ನೊಂದೆಡೆ, ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ ಕಾಲದಲ್ಲಿ ಜಗತ್ತಿಗೆ ಉಂಟಾಗಬಹುದಾದ ಅಪಾಯವನ್ನು ತಪ್ಪಿಸಲು ಉಡುಪಿಯಲ್ಲಿ ಅಘೋರಿಗಳು ಅಪರೂಪದ ಯಾಗ (ನವೆಂಬರ್ 13-2023) ನಡೆಸಿದ್ದರು. ಸಂಚಾರದಲ್ಲಿದ್ದ ಅಘೋರಿಗಳು ಇದ್ದಲ್ಲಿಯೇ ಯಾಗ ನಡೆಸಬೇಕು ಎಂಬ ಸಂಕಲ್ಪ ಕೈಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ ಸಮುದ್ರ ತಟದಲ್ಲಿ ಮಹಾಯಾಗ ನಡೆದಿತ್ತು.

ಹಿಮಾಲಯದಿಂದ ದಕ್ಷಿಣ ಭಾರತಕ್ಕೆ ಆಗಮಿಸಿ ಯಾಗ : ಸಮಸ್ತ ಲೋಕಕ್ಕೆ ಕಲ್ಯಾಣವಾಗಲಿ ಎಂದು ಪ್ರಾರ್ಥಿಸಿ ಉಡುಪಿಯ ತೊಟ್ಟಂನಲ್ಲಿ ಅಕಾಲ ಮೃತ್ಯುಂಜಯ ಯಾಗ ಒಂಬತ್ತು ದಿನಗಳ ಅಹೋರಾತ್ರಿ ನಡೆದಿತ್ತು. ಹಿಮಾಲಯದಿಂದ ದಕ್ಷಿಣ ಭಾರತಕ್ಕೆ ಆಗಮಿಸಿದ ಅಘೋರಿಗಳು ಈ ಯಾಗವನ್ನು ಕೈಗೊಂಡಿದ್ದರು. ಅಪಾರ ಪ್ರಮಾಣದ ಅಮೃತ ಬಳ್ಳಿ, ಗರಿಕೆ, ತುಪ್ಪ ಸೇರಿದಂತೆ ಹಲವು ಬಗೆಯ ಸಮಿದೆಯನ್ನು ಯಾಗಕ್ಕೆ ಹವಿಸ್ಸಾಗಿ ಬಳಸಲಾಗಿತ್ತು.

ಇದನ್ನೂ ಓದಿ: ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಬಿ.ವೈ.ವಿಜಯೇಂದ್ರ ಕುಟುಂಬದಿಂದ ಚಂಡಿಕಾ ಯಾಗ

ಲೋಕ ಸುಭಿಕ್ಷೆಯಿಂದ ಕೂಡಿರುವಂತೆ ಪ್ರಾರ್ಥನೆ: ಗ್ರಹಣಗಳ ಅಪಾಯ ತಪ್ಪಿಸಲು ಉಡುಪಿ ಸಮುದ್ರ ತಟದಲ್ಲಿ ಅಘೋರಿಗಳಿಂದ ಅಕಾಲ ಮೃತ್ಯುಂಜಯ ಯಾಗ, ಖಂಡ ಗ್ರಸ್ತ ಸೂರ್ಯ ಗ್ರಹಣ, ಚಂದ್ರ ಗ್ರಹಣದಿಂದ ಲೋಕಕ್ಕೆ ಅತಿವೃಷ್ಟಿ, ಅನಾವೃಷ್ಠಿ ವಿಪತ್ತು ಸಂಭವಿಸದೆ ಲೋಕ ಸುಭಿಕ್ಷೆಯಿಂದ ಕೂಡಿರುವಂತೆ ಪ್ರಾರ್ಥಿಸಿ, ಮಹಾರುದ್ರ ಯಾಗ ನಡೆಸಲಾಗಿತ್ತು. ದೇಶದ ನಾನಾ ಭಾಗಗಳಲ್ಲಿ ಇದೇ ರೀತಿಯ ಯಾಗಗಳನ್ನು ಅಘೋರಿಗಳು ನಡೆಸಿದ್ದರು. ಜನಸಂಪರ್ಕವಿಲ್ಲದೆ ಪ್ರತ್ಯೇಕವಾಗಿ ಉಳಿದು ಈ ಮಹಾಯಾಗ ನಡೆಸಿದ್ದರು.

ಶತಚಂಡಿಕಾ ಮಹಾಯಾಗ: ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯ ಕ್ಷೇತ್ರದಲ್ಲಿ ಏಳು ದಿನಗಳ ಕಾಲ ನಡೆದ ತಂತ್ರ ಭಾಗ - ಶತಚಂಡಿಕಾ ಮಹಾಯಾಗಕ್ಕೆ ಮಂಗಳವಾರ (ಜುಲೈ 11-2023) ಅದ್ಧೂರಿಯಾಗಿ ಚಾಲನೆ ನೀಡಲಾಗಿತ್ತು. ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶ್ವಶಾಂತಿ, ಲೋಕ ಕಲ್ಯಾಣ ಹಾಗೂ ಸಮಸ್ತ ಭಕ್ತರ ಸಕಲ ಸಂಕಷ್ಟ ನಿವಾರಣೆಯ ಉದ್ದೇಶದಿಂದ ಜುಲೈ 11ರಿಂದ 7 ದಿನಗಳ ಕಾಲ ಶ್ರೀ ಕ್ಷೇತ್ರದಲ್ಲಿ ಮಹಾಯಾಗ ಹಮ್ಮಿಕೊಳ್ಳಲಾಗಿತ್ತು. ಮಂಗಳವಾರ ಮೊದಲ ದಿನದ ಯಾಗ ಶ್ರದ್ಧಾಭಕ್ತಿಯಿಂದ ನೆರವೇರಿದೆ. ಯಾಗದ ಪ್ರಯುಕ್ತ ಕ್ಷೇತ್ರದ ಧರ್ಮದರ್ಶಿ ಡಾ‌.ಮಲ್ಲೇಶ್ ಗುರೂಜಿ ನೇತೃತ್ವದಲ್ಲಿ ಬೆಳಗಿನಿಂದ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದ್ದವು.

ಇದನ್ನೂ ಓದಿ: ಗ್ರಹಣಗಳ ಅಪಾಯ ತಪ್ಪಿಸಲು ಉಡುಪಿ ಸಮುದ್ರ ತಟದಲ್ಲಿ ಅಘೋರಿಗಳಿಂದ ಅಕಾಲ ಮೃತ್ಯುಂಜಯ ಯಾಗ

Last Updated : Aug 11, 2023, 10:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.