ETV Bharat / state

ಕಮಿಷನ್​ಗಾಗಿ ವಿದ್ಯುತ್ ಕೊರತೆ ಸೃಷ್ಟಿಸಿರುವ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಲಿ: ಡಿಕೆಶಿ ತಿರುಗೇಟು

ಹೆಚ್​ಡಿ ಕುಮಾರಸ್ವಾಮಿ ಅವರ ಕೃತಕ ವಿದ್ಯುತ್ ಕೊರತೆ ಹೇಳಿಕೆಗೆ ಡಿಸಿಎಂ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.

ಡಿಕೆಶಿ ತಿರುಗೇಟು
ಡಿಕೆಶಿ ತಿರುಗೇಟು
author img

By ETV Bharat Karnataka Team

Published : Oct 21, 2023, 3:45 PM IST

Updated : Oct 21, 2023, 3:54 PM IST

ಡಿಸಿಎಂ ಡಿಕೆ ಶಿವಕುಮಾರ್​ ಪ್ರತಿಕ್ರಿಯೆ

ಬೆಂಗಳೂರು: ಕಮಿಷನ್​ಗಾಗಿ ರಾಜ್ಯದಲ್ಲಿ ಕೃತಕ ವಿದ್ಯುತ್ ಕೊರತೆ ಸೃಷ್ಟಿಸಲಾಗುತ್ತಿರುವ ಆರೋಪ ಸಂಬಂಧ ಕೇಂದ್ರ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಸಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ. ಬೆಂಗಳೂರಿನ ಗಾಂಧಿ ಭವನದಲ್ಲಿ ಮಾತನಾಡಿದ ಅವರು,‌ ರಾಜ್ಯದಲ್ಲಿ ಕೃತಕ ವಿದ್ಯುತ್ ಅಭಾವ ಸೃಷ್ಟಿಸಲಾಗಿದೆ. ಕಮಿಷನ್​ಗಾಗಿ ಹೊರ ರಾಜ್ಯಗಳಿಂದ‌ ವಿದ್ಯುತ್ ಖರೀದಿ ಮಾಡಲಾಗುತ್ತಿದೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾಡಿರುವ ಗಂಭೀರ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ, ರಾಜ್ಯದಲ್ಲಿ ಕೃತಕ ವಿದ್ಯುತ್ ಅಭಾವ ಸೃಷ್ಟಿಸುತ್ತಿಲ್ಲ.‌ ದುಡ್ಡು‌ ಹೊಡೆಯಲು ಹೊರಗಿನಿಂದ ವಿದ್ಯುತ್ ಖರೀದಿಗೆ ಹೋಗಿಲ್ಲ. ಮೇಲೆ ಇದ್ದಾರಲ್ಲ ಈ ಬಗ್ಗೆ ತನಿಖೆ ಮಾಡಿಸಲಿ ಎಂದರು.

ವಿದ್ಯುತ್ ಖರೀದಿ ಬಗ್ಗೆ ಸರ್ಕಾರ ಶ್ವೇತ ಪತ್ರ ಹೊರಡಿಸುವ ಆಗ್ರಹಕ್ಕೆ ಡಿಕೆಶಿ ಪ್ರತಿಕ್ರಿಯೆ ನೀಡಿ,‌ ಇವರು ಹೇಳಿದ್ದೆಲ್ಲಾ ಕೇಳಕ್ಕಾಗಲ್ಲ ಎಂದು‌ ತಿರುಗೇಟು ನೀಡಿದರು. ಬರಗಾಲದ ಸಂದರ್ಭದಲ್ಲಿ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಮ್ಯಾಚ್ ನೋಡಲು ಹೋಗಿದ್ದರು ಎಂಬ ಹೆಚ್​ಡಿಕೆ ಟೀಕೆಗೆ ಪ್ರತಿಕ್ರಿಯೆ ನೀಡಿ, ‌ಕುಮಾರಸ್ವಾಮಿಗೆ ಈ ದೇಶದ ಆಸ್ತಿ ಏನು ಅನ್ನೋದು ಅವರಿಗೆ ಅರಿವಿಲ್ಲ. ಜನರ ಬದುಕು ನಮ್ಮ ಸಂಸ್ಕೃತಿಯಲ್ಲಿ ಏನೆಲ್ಲಾ ಇದೆ. ದೇವಾಲಯ, ಚರ್ಚು, ಚಿತ್ರಕಲೆ , ಬೇರೆ ಬೇರೆ ಕ್ಷೇತ್ರ ಇದೆ.‌ ಅವರು ತಯಾರು ಮಾಡುವ ಸಿನಿಮಾ,‌ ಮಗ ಆ್ಯಕ್ಟ್ ಮಾಡುವ ಸಿನಿಮಾ ಇದೆ. ಎಲ್ಲದಕ್ಕೂ ಪ್ರೋತ್ಸಾಹ ನೀಡಬೇಕಲ್ಲ ಎಂದರು.

ಇಡಿ ಪ್ರಪಂಚ ಕ್ರೀಡೆಗೆ ಎಷ್ಟು ಹೋರಾಟ ಮಾಡುತ್ತಿದೆ. ನಮಗೆ ಆ ರುಚಿ ಗೊತ್ತಿದೆ. ಅವರಿಗೆ ಆ ರುಚಿ ಗೊತ್ತಿಲ್ಲದೇ ಇರಬಹುದು. ಎಷ್ಟು ರಾಜಕಾರಣಿಗಳು, ಸಿಎಂಗಳು ಕ್ರೀಡಾ ಸಂಸ್ಥೆಗಳ ಮುಖ್ಯಸ್ಥರಾಗಿಲ್ಲಾ ಎಂದು ಪ್ರಶ್ನಿಸಿದರು. ಯಾವ ಶಾಸಕರೂ ಕೂಡಾ ಪಕ್ಷದ ವಿಚಾರವಾಗಿ ಮಾಧ್ಯಮಗಳ ಮುಂದೆ ಮಾತನಾಡಬಾರದು. ಯಾವ ವಿಚಾರವನ್ನೂ ಮಾತನಾಡಬಾರದು. 136+1 ಶಾಸಕರು ಇದ್ದೇವೆ. ಯಾವ ಶಾಸಕರು ಪಾರ್ಟಿ ವಿಚಾರ ಬಹಿರಂಗವಾಗಿ ಮಾತನಾಡಬಾರದು ಎಂದು ಸೂಚನೆ ನೀಡುತ್ತೇನೆ ಎಂದರು.

ಹೆಚ್​ಡಿಕೆ ಹೇಳಿಕೆಯೇನು?: ಬೆಂಗಳೂರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ಸಂದರ್ಭದಲ್ಲಿ ಹೆಚ್​ಡಿ ಕುಮಾರಸ್ವಾಮಿ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಇದೆ ಎಂದು ಕಮಿಷನ್ ಆಸೆಗಾಗಿ ರಾಜ್ಯ ಸರ್ಕಾರ ಕೃತಕ ಅಭಾವ ಸೃಷ್ಟಿ ಮಾಡುತ್ತಿದೆ ಎಂದು ಆರೋಪಿಸಿದರು. ಅಲ್ಲದೇ ಕಾಂಗ್ರೆಸ್ ಮುಖಂಡರಾದ ಕೆ.ಸಿ. ವೇಣುಗೋಪಾಲ ಮತ್ತು ಸುರ್ಜೇವಾಲಾಗೆ ಕಮಿಷನ್ ಕಳಿಸುವುದಕ್ಕಾಗಿ ಕೃತಕ ಅಭಾವ ಸೃಷ್ಟಿ ಮಾಡಿ ವಿದ್ಯುತ್ ಖರೀದಿ ಹೆಸರಿನಲ್ಲಿ ಕಮಿಷನ್ ಕಬಳಿಸಲು ಮುಂದಾಗಿದೆ. ಗ್ಯಾರಂಟಿ ಕಡೆ ಗಮನ ಕೊಟ್ಟ ಕಾಂಗ್ರೆಸ್​ನವರು ವಿದ್ಯುತ್ ಉತ್ಪಾದನೆ ಬಗ್ಗೆ ಮರೆತಿದ್ದಾರೆ. ಈಗ ಕಮಿಷನ್​ಗಾಗಿ ಕೃತಕ ಅಭಾವ ಸೃಷ್ಟಿ ಮಾಡ್ತಿದ್ದಾರಾ? ನನ್ನ ಕಾಲದಲ್ಲಿ ಎರಡು ಅವಧಿಯಲ್ಲೂ ಒಂದು ರೂಪಾಯಿ ಅವ್ಯವಹಾರ ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಕಮಿಷನ್​ಗಾಗಿ ರಾಜ್ಯ ಸರ್ಕಾರದಿಂದ ವಿದ್ಯುತ್​ ಕೃತಕ ಅಭಾವ ಎಂದ ಹೆಚ್​​ಡಿಕೆ... ಪಾಕಿಸ್ತಾನ ಬೆಂಬಲಿಸಲು ಮ್ಯಾಚ್​​ ನೋಡಲು ಹೋಗಿದ್ದಾ ಎಂದು ಪ್ರಶ್ನೆ!

Last Updated : Oct 21, 2023, 3:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.