ಬೆಂಗಳೂರು: ಬಿಜೆಪಿ ಶಾಸಕರ ದುರ್ವರ್ತನೆಯಿಂದ ಅನೇಕ ಸಾವುಗಳು ಆಗುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಪ್ರದೀಪ್ ಆತ್ಮಹತ್ಯೆ ವಿಚಾರ ಮಾತನಾಡಿದ ಅವರು,ಇದನ್ನ ಕೊನೆ ಮಾಡಬೇಕು. ಇದಕ್ಕಾಗಿ ಜನರ ದ್ವನಿ, ಭಾವನೆ ತಿಳಿಸಬೇಕಾಗಿದೆ. ಕಾನೂನು ಬದ್ಧವಾಗಿ ಹೋರಾಟ ಮಾಡಬೇಕಿದೆ. ಕಾನೂನಿನ ಶಿಕ್ಷೆಗೆ ಒಳಗಾಗಲೇಬೇಕಿದೆ. ಲಿಂಬಾವಳಿ ಬೇರೆ ಅಲ್ಲ.. ಡಿಕೆಶಿ ಬೇರೆ ಅಲ್ಲ. ಈ ಸರ್ಕಾರ ಎಲ್ಲರನ್ನೂ ರಕ್ಷಣೆ ಮಾಡ್ಕೊಂಡು ಬಂದಿದೆ ಎಂದು ಹೇಳಿದರು.
ಸರ್ಕಾರ ಲಂಚಕ್ಕೆ, ಮಂಚಕ್ಕೆ, ಇಂತಹ ಸಾವಿಗೆ ರಕ್ಷಣೆ ಮಾಡಿಕೊಂಡು ಬಂದಿದೆ. ಇನ್ನೊಂದು 60 ದಿನ ತಡೆದುಕೊಳ್ಳಿ. ‘‘ಅವರ ಹುಡ್ಗ ಅವನು.. ನಾವೇನಾದರೂ ಬರೆಸಿದ್ದೀವಾ? ನಾವೇನಾದರೂ ಷಡ್ಯಂತ್ರದಲ್ಲಿ ಭಾಗಿಯಾಗಿದ್ದರೆ ಅಂತಾ ಹೇಳಲಿ. ಕಾಂಗ್ರೆನ್ನ ಸಿದ್ದರಾಮಯ್ಯ, ಡಿಕೆಶಿವಕುಮಾರ್ ಯಾರಾದರೂ ಇದ್ದರೆ ಹೇಳಲಿ. ನೋ ಪ್ರಾಬ್ಲಂ. ನಾವ್ಯಾರು ಇದರಲ್ಲಿ ಭಾಗಿಯಾಗಿಲ್ಲ. ಅವನು ಕಾಗದ ಬರೆದಿದ್ದಾನೆ ಎರಡು ಮೂರು ಪೇಜ್. ಎಲ್ಲರಿಗೂ ಏನು ಕಾನೂನು ಇದೆ ಅದರಂತೆ ತನಿಖೆಗೊಳಗಾಗಬೇಕು, ಶಿಕ್ಷೆ ಗೊಳಗಾಬೇಕು’’ ಎಂದು ಹೇಳಿದರು.
ಸಿದ್ದೇಶ್ವವರ ಶ್ರೀಗಳ ಅಂತಿಮ ದರ್ಶನ: ನಡೆದಾಡುವ ದೇವರು, ಜ್ಞಾನ ಯೋಗಿ ಎಂದೇ ಖ್ಯಾತರಾಗಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಅಂತಿಮ ದರ್ಶನಕ್ಕೆ ಕಾಂಗ್ರೆಸ್ ಪಕ್ಷದ ಪರವಾಗಿ ನಾನು ಭಾಗಿಯಾಗುತ್ತಿದ್ದೇನೆ ಎಂದು ತಿಳಿಸಿದರು.
ಶಾ ಬಗ್ಗೆ ತಲೆಕೆಡಿಸಿಕೊಳ್ಳಲ್ಲ: ಅಮಿತ್ ಶಾ ಅವರ ಮಾತಿಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ಅಮಿತ್ ಶಾ ಅವರು ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಇಲ್ಲ ಎಂದು ಒಪ್ಪಿಕೊಂಡಿರುವುದನ್ನು ನಾನು ಅಭಿನಂದಿಸುತ್ತೇನೆ. ಈ ಕಾರಣಕ್ಕೆ ರಾಜ್ಯಕ್ಕೆ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಅವರು ಆಗಮಿಸುತ್ತಿದ್ದು, ಇದರರ್ಥ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಅರ್ಥ. ಹೀಗಾಗಿ ರಾಜ್ಯದ ಚುನಾವಣೆಗೆ ರಾಷ್ಟ್ರೀಯ ನಾಯಕತ್ವವನ್ನು ಬಳಸಿಕೊಳ್ಳಲಾಗುತ್ತಿದೆ. ಕರ್ನಾಟಕದ ವಿಚಾರಗಳೇ ಬೇರೆ. ರಾಜ್ಯದ ಆಡಳಿತ, ಅಭಿವೃದ್ಧಿಯ ವಿಚಾರ ಗಣನೆಗೆ ಬರುತ್ತದೆ. ಇಡೀ ವಿಶ್ವ ಕರ್ನಾಟಕದ ಮೂಲಕ ಭಾರತವನ್ನು ನೋಡುತ್ತಿದೆ ಎಂದರು.
ಬಿಜೆಪಿ ತನ್ನ ಅಂತ್ಯ ಕಾಲದಲ್ಲಿದೆ: ನಾವು ಜನವರಿ 11ರಿಂದ ರಾಜ್ಯ ಪ್ರವಾಸ ಆರಂಭಿಸುತ್ತಿದ್ದು, ರಾಜ್ಯದ ಮೂಲೆ ಮೂಲೆಗಳನ್ನು ತಲುಪಿ, ಎಲ್ಲ ವರ್ಗದ ಜನರನ್ನು ಭೇಟಿ ಮಾಡಲಾಗುವುದು. ಬಿಜೆಪಿ ಸರ್ಕಾರ ತನ್ನ ಕೊನೆಯ ದಿನಗಳಲ್ಲಿದ್ದು, ಈ ಸರ್ಕಾರ ಮಾಡಿರುವ ಅನ್ಯಾಯವನ್ನು ಜನರಿಗೆ ತಿಳಿಸುತ್ತೇವೆ. ಬಿಜೆಪಿ ಸರ್ಕಾರ ಅಂತ್ಯಗೊಂಡು ಕಾಂಗ್ರೆಸ್ ಸರ್ಕಾರ ಬರಲಿದೆ ಎಂದು ಹೇಳಿದರು.
ಇದನ್ನೂ ಓದಿ: ಪ್ರದೀಪ್ ಸಾವು ಆತ್ಮಹತ್ಯೆ ಅಲ್ಲ, ಅದೊಂದು ಕೊಲೆ: ಸುರ್ಜೇವಾಲಾ ಆರೋಪ