ದೇವನಹಳ್ಳಿ: ಖಾಸಗಿ ಫ್ಯಾಕ್ಟರಿಯೊಂದರಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ತರಬನಹಳ್ಳಿ ಬಳಿ ನಡೆದಿದೆ. ಇಲ್ಲಿನ ಐಟಿಸಿ ಫ್ಯಾಕ್ಟರಿಯಲ್ಲಿ ಕಳೆದ ಎರಡು ದಿನಗಳಿಂದಲೂ ಅರಣ್ಯ ಪ್ರದೇಶದಲ್ಲಿ ಚಿರತೆ ಸಂಚಾರ ಮಾಡಿದೆ. ಚಿರತೆ ಹಿಡಿಯಲು ಫಾರೆಸ್ಟ್ ಡಿಪಾರ್ಟ್ಮೆಂಟ್ನಿಂದ ಬೋನ್ ಅಳವಡಿಕೆ ಮಾಡಲಾಗಿದೆ.
ಒಟ್ಟು ಐದು ಜನ ಅರಣ್ಯ ಸಿಬ್ಬಂದಿಯಿಂದ ಚಿರತೆ ಪತ್ತೆಗಾಗಿ ಶೋಧ ನಡೆಸಲಾಗ್ತಿದೆ. ಸುತ್ತಮುತ್ತ ದಟ್ಟವಾದ ಕಾಡು ಪ್ರದೇಶ ಇರುವುದರಿಂದ ಚಿರತೆ ಬಂದಿರುವ ಸಾಧ್ಯತೆ ಇದೆ. ಇನ್ನು ಚಿರತೆ ಪ್ರತ್ಯಕ್ಷವಾದಾಗಿನಿಂದ ಐಟಿಸಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಆತಂಕ ಶುರುವಾಗಿದೆ.
ಓದಿ: ಕೊಯಿರಾ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ