ETV Bharat / state

ಬಿಜೆಪಿ ಸರ್ಕಾರವೇ ರಚನೆಯಾಗುತ್ತೆ, ಸಿಎಂ ಯಾರಾಗಬೇಕು ಅನ್ನೋದು ಶಾಸಕಾಂಗ ಸಭೆಯಲ್ಲಿ ನಿರ್ಧಾರ: ಬಿಎಸ್​ವೈ - ಎಕ್ಸಿಟ್ ಪೋಲ್

''ಯಾವುದೇ ಎಕ್ಸಿಟ್ ಪೋಲ್ ಏನೇ ಹೇಳಿದ್ದರೂ ಮತ ಎಣಿಕೆ ನಂತರ ಎಲ್ಲರಿಗೂ ಸತ್ಯ ಗೊತ್ತಾಗಲಿದೆ. ನಮಗೆ ಸ್ಪಷ್ಟವಾದ ಬಹುಮತ ಸಿಗಲಿದೆ. ಮ್ಯಾಜಿಕ್ ಸಂಖ್ಯೆ 113 ದಾಟುತ್ತೇವೆ. 115ಕ್ಕೂ ಹೆಚ್ಚು ಸೀಟ್ ನಮಗೆ ಸಿಗಲಿದೆ'' ಎಂದು ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

BS Yeddyurappa
ಬಿ.ಎಸ್.ಯಡಿಯೂರಪ್ಪ
author img

By

Published : May 11, 2023, 6:00 PM IST

ಬೆಂಗಳೂರು: ''ಮತದಾನೋತ್ತರ ಸಮೀಕ್ಷಾ ವರದಿಗಳು ಏನೇ ಬಂದರೂ ಮತ ಎಣಿಕೆ ನಂತರವೇ ಎಲ್ಲ ಚಿತ್ರಣ ಗೊತ್ತಾಗಲಿದೆ. ನಮಗೆ ಸ್ಪಷ್ಟ ಬಹುಮತ ಖಚಿತ. ಬಿಜೆಪಿ ಸರ್ಕಾರವೇ ರಚನೆಯಾಗಲಿದೆ. ಮುಖ್ಯಮಂತ್ರಿ ಯಾರು ಆಗಬೇಕು ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಗುತ್ತದೆ. ಹೈಕಮಾಂಡ್ ಎಲ್ಲ ನಿರ್ಧಾರ ಮಾಡಲಿದೆ'' ಎಂದು ಬಿಜೆಪಿ ಪಕ್ಷದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತೆ- ಬಿಎಸ್​ವೈ: ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು. ''ಯಾವುದೇ ಎಕ್ಸಿಟ್ ಪೋಲ್ ಏನೇ ಹೇಳಿದ್ದರೂ ಮತ ಎಣಿಕೆ ನಂತರ ಎಲ್ಲರಿಗೂ ಸತ್ಯ ಗೊತ್ತಾಗಲಿದೆ. ನಮಗೆ ಸ್ಪಷ್ಟವಾದ ಬಹುಮತ ಸಿಗಲಿದೆ. ಮ್ಯಾಜಿಕ್ ಸಂಖ್ಯೆ 113 ದಾಟುತ್ತೇವೆ. 115ಕ್ಕೂ ಹೆಚ್ಚು ಸೀಟ್ ನಮಗೆ ಸಿಗಲಿದೆ. ಯಾರದೇ ಬೆಂಬಲ ಇಲ್ಲದೇ ನಾವು ಸರ್ಕಾರ ರಚನೆ ಮಾಡುತ್ತೇವೆ. ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುತ್ತೇವೆ. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಬಂದಿದ್ದೇನೆ. ಈ ಆಧಾರದ ಮೇಲೆ ನಾನು ಈ ಮಾತು ಹೇಳುತ್ತಿದ್ದೇನೆ. ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ಮಾಡುತ್ತೇವೆ. ನಾವು ಹೇಳಿದ್ದಕ್ಕಿಂತ ಹೆಚ್ಚು ಸೀಟ್ ಗೆಲ್ಲುತ್ತೇವೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಹಿಂದಿನ ಎಕ್ಸಿಟ್ ಪೋಲ್​​ಗಳೆಲ್ಲ ಉಲ್ಟಾ ಹೊಡೆದಿದ್ದವು: ಬಿ ಎಲ್ ಸಂತೋಷ್ ಟಾಂಗ್

ಕಾಂಗ್ರೆಸ್ ಸರ್ಕಾರ ರಚನೆ ಮಾಡುತ್ತದೆ ಅನ್ನುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಬಿಎಸ್​ವೈ, ''ಕಾಂಗ್ರೆಸ್ ನಾಯಕರ ವಿಚಾರ ನಾನು ಇವತ್ತು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ನಮ್ಮ ಸರ್ಕಾರ ರಚನೆ ಮಾಡುತ್ತೇವೆ. ಕಾಂಗ್ರೆಸ್​ಗಿಂತ ಹೆಚ್ಚು ಸೀಟ್ ಗೆಲ್ಲುತ್ತೇವೆ'' ಎಂದರು.

ಇದನ್ನೂ ಓದಿ: ರಿಲಾಕ್ಸ್ ಮೂಡ್​ನಲ್ಲಿ ನಾಯಕರು, ಆಪ್ತರೊಂದಿಗೆ ಚಹಾಕೂಟ : 141 ಸ್ಥಾನ ಗೆಲ್ಲುತ್ತೇವೆ ಎಂದ ಡಿಕೆಶಿ

ಕಾಂಗ್ರೆಸ್​ಗಿಂತ ನಾವು ಹೆಚ್ಚು ಸೀಟ್ ತಗೊಳ್ಳೋದು ಸತ್ಯ-ಬಿಎಸ್​ವೈ: ಯಡಿಯೂರಪ್ಪ ಕಡೆಗಣಿಸಿದಕ್ಕೆ ಹಿನ್ನಡೆ ಆಯ್ತಾ? ಎನ್ನುವ ಕುರಿತು ಪ್ರತಿಕ್ರಿಯೆ ನೀಡಿದ ಬಿಎಸ್ವೈ, ''ಕಾಂಗ್ರೆಸ್​ಗಿಂತ ನಾವು ಹೆಚ್ಚು ಸೀಟ್ ತಗೊಳ್ಳೋದು ನೂರಕ್ಕೆ ನೂರು ಸತ್ಯ. ವೀರಶೈವ ಲಿಂಗಾಯತ ಮತಗಳ ವಿಭಜನೆ ಆಗಿಲ್ಲ. ನಾನೇ ಸ್ವಂತ ನಿರ್ಧಾರದಿಂದ ಸಿಎಂ ಸ್ಥಾನದಿಂದ ಕೆಳಗಿಳಿದೆ. ಇದನ್ನು ಸಮುದಾಯ ಅರ್ಥ ಮಾಡಿಕೊಂಡಿದೆ'' ಎಂದು ಅವರು ಹೇಳಿದರು.

ಸಿಎಂ ಯಾರಾಗ್ತಾರೆ ಅನ್ನೋದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಬಿಜೆಪಿ ಸರ್ಕಾರ ಬಂದರೆ, ಸಿಎಂ ಯಾರು ಆಗ್ತಾರೆ ಅನ್ನೋ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ''ಮುಂದಿನ ಸಿಎಂ‌ ಯಾರಾಗ್ತಾರೆ ಅಂತ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರ ಆಗುತ್ತದೆ, ಸಿಎಂ ಯಾರಾಗ್ತಾರೆ ಅನ್ನೋದು ಹೈಕಮಾಂಡ್​ಗೆ ಬಿಟ್ಟ ವಿಚಾರ'' ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಸವದತ್ತಿ ಯಲ್ಲಮ್ಮ ದೇವಿ ದರ್ಶ‌ನ ಪಡೆದ ಸಿಎಂ ಬೊಮ್ಮಾಯಿ ದಂಪತಿ

ಇದನ್ನೂ ಓದಿ: ಸಮೀಕ್ಷೆಗಳು ಏನೇ ಹೇಳಿದರೂ ಬಿಜೆಪಿಗೆ 115 ಸ್ಥಾನ ಬರುತ್ತೆ: ಬಿಎಸ್​ವೈ ವಿಶ್ವಾಸ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.