ETV Bharat / state

ಮೂರು ವಿಧೇಯಕಗಳಿಗೆ ಅಂಗೀಕಾರ ನೀಡಿದ ವಿಧಾನ ಪರಿಷತ್... ಯಾವುವು ಆ ವಿಧೇಯಕಗಳು?

ಮೂರು ಪ್ರಮುಖ ವಿಧೇಯಕಗಳಿಗೆ ವಿಧಾನ ಪರಿಷತ್ ಅಂಗೀಕಾರ ನೀಡಿದೆ.

Legislature council passes three bills
ಮೂರು ವಿಧೇಯಕಕ್ಕೆ ವಿಧಾನ ಪರಿಷತ್ ಅಂಗೀಕಾರ
author img

By

Published : Jul 18, 2023, 5:27 PM IST

Updated : Jul 18, 2023, 7:17 PM IST

ಸಚಿವ ಹೆಚ್.ಕೆ ಪಾಟೀಲ್

ಬೆಂಗಳೂರು: ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ)ವಿಧೇಯಕ 2023, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ 2023 ಮತ್ತು ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ)(ತಿದ್ದುಪಡಿ) ವಿಧೇಯಕ 2023 ಕ್ಕೆ ವಿಧಾನ ಪರಿಷತ್ ಅಂಗೀಕಾರ ನೀಡಿತು.

ವಿಧಾನ ಪರಿಷತ್ ವಿತ್ತೀಯ ಕಲಾಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ್, ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ವಿಧೇಯಕ 2023 ಮಂಡಿಸಿದರು.

ಮುಂಬೈನಿಂದ, ದೆಹಲಿಯಿಂದ ಗುತ್ತಿಗೆದಾರರು ಬರುತ್ತಾರೆ. ಆದರೆ ಸ್ಥಳೀಯವಾಗಿಯೇ ಗುತ್ತಿಗೆದಾರರು ಬರಬೇಕು ಎನ್ನುವುದು ನಮ್ಮ ಆಶಯ. ಎಸ್ಸಿ ಕೋಟಾದ ಕಾಮಗಾರಿಗಳನ್ನು ಎಸ್ಸಿ ಗುತ್ತಿಗೆದಾರರು ಗುತ್ತಿಗೆ ಪಡೆದು ಬೇರೆಯವರಿಗೆ ಸಬ್ ಕಾಂಟ್ರ್ಯಾಕ್ಟ್ ಕೊಡುತ್ತಾರೆ. ಅವರು ಸರಿಯಾಗಿ ಕೆಲಸ ಮಾಡದಿದ್ದರೆ, ಎಸ್ಸಿ ಗುತ್ತಿಗೆದಾರರಿಗೆ ಕೆಟ್ಟ ಹೆಸರು ಬರಲಿದೆ. ಹಾಗಾಗದಂತೆ ನೋಡಿಕೊಳ್ಳಬೇಕಿದೆ. ಎಸ್ಸಿ ಗುತ್ತಿಗೆದಾರರು ಪಡೆದ ಗುತ್ತಿಗೆ ಕೆಲಸವನ್ನು ಎಸ್ಸಿ ಗುತ್ತಿಗೆದಾರರೇ ಮಾಡಬೇಕು. ಇಲ್ಲದಿದ್ದರೆ ಆಶಯ ಈಡೇರುವುದಿಲ್ಲ. ಅಲ್ಲದೇ ಹೊಸದಾಗಿ ಬರುವ ಎಸ್ಸಿ ಗುತ್ತಿಗೆದಾರರಿಗೆ ಹೂಡಿಕೆಯ ಸರಿಯಾದ ಮಾಹಿತಿ ಇರುವುದಿಲ್ಲ. ಇದರಿಂದ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಹಾಗಾಗಿ ನೂತನ ಗುತ್ತಿಗೆದಾರರಿಗೆ ತರಬೇತಿ ಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿ ವಿಧೇಯಕಕ್ಕೆ ಅಂಗೀಕಾರ ನೀಡುವಂತೆ ಮನವಿ ಮಾಡಿದರು. ನಂತರ ಧ್ವನಿ ಮತದ ಮೂಲಕ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು.

ಜಿಎಸ್​​ಟಿ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ: ಎರಡನೇಯ ವಿಧೇಯಕವಾಗಿ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ(ತಿದ್ದುಪಡಿ) ವಿಧೇಯಕ 2023 ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಮಂಡಿಸಿದರು. ಜಿಎಸ್​ಟಿ ಕಾನೂನಿಗೆ 22 ತಿದ್ದುಪಡಿ ತಂದಿದ್ದು, 6 ತಿದ್ದುಪಡಿ ವರ್ತಕರ ಸ್ನೇಹಿ, 16 ಅಂಶ ಸುಗಮ ತೆರಿಗೆ ಸಂಗ್ರಹ ಮತ್ತು ಆಡಳಿತಕ್ಕೆ ಸಂಬಂಧಿಸಿದ ತಿದ್ದುಪಡಿಗಳಾಗಿವೆ. ವರ್ತಕರ ಸ್ನೇಹಿ ಮತ್ತು ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಬರುವುದಕ್ಕೆ ಪೂರಕವಾಗಿದೆ. ಹಾಗಾಗಿ ವಿಧೇಯಕಕ್ಕೆ ಅಂಗೀಕಾರ ನೀಡುವಂತೆ ಮನವಿ ಮಾಡಿದರು.

ತೆರಿಗೆ ವಿಚಾರದಲ್ಲಿ ಕರ್ನಾಟಕ ಸರಿದಾರಿಯಲ್ಲಿದೆ. ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ನಂತರ ಮತ್ತಷ್ಟು ಬಿಗಿ ಮಾಡಲಾಗುತ್ತಿದೆ. ಸೇವಾ ವಲಯದಿಂದ ಬಹಳ ದೊಡ್ಡ ಆದಾಯ ಬರುತ್ತಿದೆ. ಸಂಗ್ರಹವಾಗುವ ತೆರಿಗೆಯಲ್ಲಿ ಶೇ.56 ರಷ್ಟು ಪ್ರಮಾಣ ಸೇವಾ ವಲಯದಿಂದಲೇ ಬರುತ್ತಿದೆ. ಜಿಎಸ್​ಟಿ ಪಿತಾಮಹ ಮನಮೋಹನ್ ಸಿಂಗ್ ನಂತರ ವಾಜಪೇಯಿ ಸಹಕಾರ ನೀಡಿದರು ಎಂದು ಉಲ್ಲೇಖಿಸಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಬಿಜೆಪಿ ಸದಸ್ಯ ವೈ.ಎ ನಾರಾಯಣಸ್ವಾಮಿ, ಮನಮೋಹನ್ ಸಿಂಗ್, ವಾಜಪೇಯಿ ನಂತರದ ಹೆಸರನ್ನೂ ಮುಂದುವರೆಸಿ ಮೋದಿ ಹತ್ತಿರವೂ ಬನ್ನಿ. ನಿಮ್ಮ ಕೂಸನ್ನು ನಾವು ಸಾಕಿ ಬೆಳೆಸಿದ್ದೇವೆ ಎಂದರು. ಜೆಡಿಎಸ್ ಸದಸ್ಯ ಶರವಣ ಮಾತನಾಡಿ, ಗಬ್ಬರ್ ಸಿಂಗ್ ಟ್ಯಾಕ್ಸ್ ಅಂದವರು ಈಗ ಬೆನ್ನು ತಟ್ಟಿಕೊಳ್ಳುತ್ತಿದ್ದೀರಿ ಎಂದು ಕಾಂಗ್ರೆಸ್ ನಡೆಯನ್ನು ಟೀಕಿಸಿದರು. ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್, ಜಿಎಸ್​ಟಿಗೆ ವಿರೋಧಿಸಿದ್ದವರು ನೀವೇ ಅಲ್ಲವೇ, ಇತಿಹಾಸದಲ್ಲಿ ಎಲ್ಲವೂ ಇದೆ ಎಂದರು.

ನಂತರ ಮಾತು ಮುಂದುವರೆಸಿದ ಸಚಿವ ಹೆಚ್.ಕೆ ಪಾಟೀಲ್ - ವ್ಯಾಟ್ ಇದ್ದಾಗ 5.8 ಲಕ್ಷ ಇದ್ದ ತೆರಿಗೆದಾರರು‌ ಜಿಎಸ್​ಟಿ ಬಂದ ನಂತರ 10 ಲಕ್ಷ ಆಗಿದೆ. ಎಲೆಕ್ಟ್ರಿಸಿಟಿ, ಹಾಲ್ಕೋಹಾಲ್, ಐದು ಪೆಟ್ರೋಲಿಯಂ ಉತ್ಪನ್ನಗಳು ಜಿಎಸ್​ಟಿ ತೆರಿಗೆಯಿಂದ ಹೊರಗಿವೆ. ಅವನ್ನೂ ಜಿಎಸ್​ಟಿ ವ್ಯಾಪ್ತಿಗೆ ತರಲು ಇದು ಸಕಾಲವಾಗಿದೆ ಎಂದರು.

ರಿಯಲ್ ಎಸ್ಟೇಟ್​ನಲ್ಲಿ ತೆರಿಗೆ ಸೋರಿಕೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಅಡಕೆ, ಸಿಮೆಂಟ್, ಕ್ರಷರ್ ತೆರಿಗೆ ವಂಚಿಸಲಾಗುತ್ತಿದೆ ಎನ್ನುವ ಆರೋಪವನ್ನು ಸದಸ್ಯರು ಮಾಡಿದ್ದಾರೆ, ಇದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ, ಸಿದ್ದರಾಮಯ್ಯ ಉತ್ತಮ ಅರ್ಥಶಾಸ್ತ್ರಜ್ಞ, ಅರ್ಥ ವ್ಯವಸ್ಥೆ ಸರಿಯಾಗಿ ನಿಭಾಯಿಸಲಿದ್ದಾರೆ. ಆರ್ಥಿಕ ಶಿಸ್ತು ತರಲು ದೃಢ ಹೆಜ್ಜೆ ಇಡುತ್ತಿದ್ದೇವೆ, ತೆರಿಗೆ ಸಂಗ್ರಹದಲ್ಲಿ ಹೆಚ್ಚಿನ ಸುಧಾರಣೆ ತರಲಿದ್ದೇವೆ. ಹಾಗಾಗಿ ಈ ತಿದ್ದುಪಡಿ ಬಹಳಷ್ಟು ಸಹಕಾರಿಯಾಗಲಿದೆ ಅನುಮತಿ ನೀಡಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: Oppositions party's meet: ವಿಪಕ್ಷಗಳ ಮಹತ್ವದ ಸಭೆ ಮುಕ್ತಾಯ.. 26 ಪಕ್ಷಗಳ 40 ನಾಯಕರಿಂದ ಒಗ್ಗಟ್ಟು ಪ್ರದರ್ಶನ

ಪ್ರಮಾಣಿಕ ತೆರಿಗೆದಾರ ನಿಜವಾದ ದೇಶಭಕ್ತ, ಪ್ರಾಮಾಣಿಕ ತೆರಿಗೆದಾರರನ್ನು ಉತ್ತಮವಾಗಿ ನಡೆಸಿಕೊಳ್ಳಿ ಎಂದು ನಮ್ಮ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಿದ್ದೇವೆ. ಗೌರವ ಕೊಡುವಂತಾಗಬೇಕು. ಆ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತದೆ. ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ನಂತರ ಧ್ವನಿಮತದ ಮೂಲಕ ವಿಧೇಯಕಕ್ಕೆ ವಿಧಾನ ಪರಿಷತ್ ಅಂಗೀಕಾರ ನೀಡಿತು.

ಕರ್ನಾಟಕ ವಿಧಾನಮಂಡಲದ (ಅನರ್ಹತಾ ನಿವಾರಣಾ)(ತಿದ್ದುಪಡಿ) ವಿಧೇಯಕಕ್ಕೆ ಅಂಗೀಕಾರ: ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ವಿಧಾನಮಂಡಲ(ಅನರ್ಹತಾ ನಿವಾರಣಾ)(ತಿದ್ದುಪಡಿ) ವಿಧೇಯಕ 2023 ಅನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ್ ಮಂಡಿಸಿದರು. ಸದ್ಯದ ವ್ಯವಸ್ಥೆಯಲ್ಲಿ ಶಾಸಕ, ಪರಿಷತ್ ಸದಸ್ಯರು, ದೆಹಲಿ ವಿಶೇಷ ಪ್ರತಿನಿಧಿ, ಕಾನೂನು ಸಲಹೆಗಾರ ಸ್ಥಾನ ಲಾಭದಾಯಕ ಹುದ್ದೆಯಡಿ ಅನರ್ಹತೆ ಭೀತಿ ಇದೆ. ಹಾಗಾಗಿ ಸಿಎಂ ಕಾನೂನು ಸಲಹೆ, ದೆಹಲಿ ವಿಶೇಷ ಪ್ರತಿನಿಧಿ ಹುದ್ದೆಯನ್ನು ಅನರ್ಹತೆ ವ್ಯಾಪ್ತಿಯಿಂದ ಹೊರಗಿಡುವ ತಿದ್ದುಪಡಿ ಮಾಡಲಾಗಿದೆ. ಇದಕ್ಕೆ ಅಂಗೀಕಾರ ನೀಡುವಂತೆ ಮನವಿ ಮಾಡಿದರು. ನಂತರ ಚರ್ಚೆ ಇಲ್ಲದೇ ಸರ್ವಾನುಮತದಿಂದ ವಿಧೇಯಕಕ್ಕೆ ಧ್ವನಿ ಮತದ ಮೂಲಕ ಪರಿಷತ್ ಅಂಗೀಕಾರ ನೀಡಿತು.

Last Updated : Jul 18, 2023, 7:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.