ETV Bharat / state

S T Somashekhar: ಎಲ್ಲವನ್ನೂ ಸರಿಪಡಿಸುವುದಾಗಿ ನಾಯಕರು ತಿಳಿಸಿದ್ದಾರೆ, ವಿಶ್ವಾಸವಿಡುವಂತೆ ಬೆಂಬಲಿಗರಿಗೆ ಸೂಚಿಸಿದ್ದೇನೆ- ಎಸ್.ಟಿ.ಸೋಮಶೇಖರ್ - ಗೃಹ ಸಚಿವ ಡಾ ಜಿ ಪರಮೇಶ್ವರ್

BJP MLA S T Somashekhar: ನಾನು ಬಿಜೆಪಿ ಬಿಡುವ ಪ್ರಮೇಯವಿಲ್ಲ. ನಾಯಕರು ಎಲ್ಲವನ್ನೂ ಸರಿಮಾಡ್ತೀವಿ ಎಂದು ಭರವಸೆ ನೀಡಿದ್ದಾರೆ ಎಂದು ಬಿಜೆಪಿ ಶಾಸಕ ಎಸ್​.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಎಸ್ ಟಿ ಸೋಮಶೇಖರ್
ಎಸ್ ಟಿ ಸೋಮಶೇಖರ್
author img

By

Published : Aug 17, 2023, 6:10 PM IST

ಬೆಂಗಳೂರು : ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್​ಗೆ ಹೋಗುವ ಪ್ರಮೇಯವೂ ಇಲ್ಲ. ಸಮಸ್ಯೆಗಳ ಬಗ್ಗೆ ರಾಜ್ಯ ನಾಯಕರ ಜೊತೆ ಮಾತನಾಡಿದ್ದು, ನಮ್ಮ ನಾಯಕರು ಎಲ್ಲವನ್ನೂ ಸರಿ ಮಾಡುತ್ತಾರೆ. ವಿಶ್ವಾಸ ಇಡಿ ಎಂದು ಬೆಂಬಲಿಗರಿಗೆ ಮನವಿ ಮಾಡಿರುವುದಾಗಿ ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದರು.

ಹೇರೋಹಳ್ಳಿಯಲ್ಲಿ ಇಂದು ಬೆಂಬಲಿಗರ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕರೆ ಮಾಡಿದ್ದರು. ಇದೆಲ್ಲ ಏಕೆ ನಡೆಯುತ್ತಿವೆ ಎಂದು ಕೇಳಿದರು?. ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ, ಬಂದು ಭೇಟಿ ಮಾಡಿ ಅಂದರು. ಆಯ್ತು ಬರ್ತೀನಿ ಅಂದಿದೀನಿ. ಸದ್ಯ ಕ್ಷೇತ್ರದಲ್ಲಿ ಏನೆಲ್ಲಾ ಬೆಳವಣಿಗೆಗಳು ಆಗುತ್ತಿದೆಯೋ ಇದೆಲ್ಲದರ ಬಗ್ಗೆ ಮಾಹಿತಿಯನ್ನು ಪಕ್ಷದ ನಾಯಕರಿಗೆ ನೀಡಿದ್ದೇನೆ. ಬೆಂಬಲಿಗರಿಗೂ ಇವತ್ತು ಮನವಿ ಮಾಡಿದ್ದೇನೆ ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್ ನಮ್ಮ ಕ್ಷೇತ್ರದಲ್ಲಿ ಬಂದ ಬಳಿಕ ಏನೇನು ಬೆಳವಣಿಗೆ ಆಗಿದೆ ಅಂತಾ ಸಭೆಯಲ್ಲಿ ಬೆಂಬಲಿಗರಿಗೆ ಮಾಹಿತಿ ಕೊಟ್ಟಿದ್ದೇನೆ. ಆಗಿರುವ ಸಮಸ್ಯೆಗಳನ್ನು ಸರಿಪಡಿಸುವ ಬಗ್ಗೆ ವರಿಷ್ಠರು ಭರವಸೆ ಕೊಟ್ಟಿದ್ದಾರೆ. ಕಾಯೋಣ ಎಂದು ಹೇಳಿದ್ದೇನೆ. ಚುನಾವಣೆಗೆ ಮುನ್ನ ನನ್ನ ವಿರುದ್ಧ ಮಾತಾಡಿದ್ದು, ಹಣ ಹಂಚಿದ್ದು ಎಲ್ಲವೂ ಇದೆ. ಇದು ಯಾವುದಕ್ಕೂ ಕ್ರಮ ಆಗಿಲ್ಲ. ಯಡಿಯೂರಪ್ಪ ನೇತೃತ್ವದಲ್ಲಿ ಒಂದು ಸಭೆ ಆಗಿದ್ದಾಗ ಕೂಡಾ ಇದರ ಬಗ್ಗೆ ನಾನು ಪ್ರಸ್ತಾಪ ಮಾಡಿದ್ದೆ. ಆದರೂ ಕ್ರಮ ಆಗಿಲ್ಲ ಎಂದು ತಿಳಿಸಿದರು.

ಚುನಾವಣೆಯಲ್ಲಿ ನನ್ನ ಸೋಲಿಸಬೇಕು ಅಂತಾ ಹಣ ಹಂಚಿದವರೇ ಹತ್ತು ದಿನದ ಕೆಳಗೆ ಅವರ ಹುಟ್ಟುಹಬ್ಬಕ್ಕೆ ನನ್ನ ಫೋಟೋ ಹಾಕಿಕೊಂಡು ಪೋಸ್ಟರ್ ಹಾಕಿದ್ದಾರೆ. ನನ್ನ ಫೋಟೋ ಬಳಸಿ ಅವರ ಹುಟ್ಟುಹಬ್ಬ ಮಾಡಿದ್ದಾರೆ. ನನ್ನನ್ನು ಸೋಲಿಸಲು ಹೊರಟವರೇ ಈಗ ನನ್ನ ಫೋಟೋ ಹಾಕಿಕೊಂಡು ಅವರ ಹುಟ್ಟುಹಬ್ಬ ಯಾಕೆ ಮಾಡಬೇಕು?. ಇದನ್ನು ನಮ್ಮ ಬೆಂಬಲಿಗರು ಪ್ರಶ್ನೆ ಮಾಡಿದ್ದಕ್ಕೆ ಇಷ್ಟೆಲ್ಲಾ ಅವಾಂತರ ಆಗಿದೆ. ಈ ವಾತಾವರಣದಲ್ಲಿ ನಾನು ಪಕ್ಷದ ಸಂಘಟನೆ ಹೇಗೆ ಮಾಡಲಿ?. ಈಗ ಅವರು ಯಾವುದೇ ಪದಾಧಿಕಾರಿ ಅಲ್ಲ. ಅವರಿಗೆ ಎಚ್ಚರಿಕೆ ಕೊಡಿ ಎಂಬುದು ಅಷ್ಟೇ ನನ್ನ ಬೇಡಿಕೆ ಎಂದರು.

ನನಗೂ ಸೋಮಣ್ಣ ಫೋನ್ ಮಾಡಿದ್ದರು. ನಾನು ದೂರು ಕೊಟ್ಟಿದ್ದೇನೆ. ನೀನು ಕೂಡಾ ಲಿಖಿತ ದೂರು ಕೊಡು ಅಂತಾ ಹೇಳಿದ್ದರು. ಎಲ್ಲವನ್ನೂ ಸರಿಪಡಿಸುತ್ತೇನೆ ಅಂತಾ ಕಟೀಲ್ ಹೇಳಿದ್ದಾರೆ. ಅಲ್ಲಿಯವರೆಗೂ ಯಾವುದೇ ನಿರ್ಧಾರ ಮಾಡಬೇಡಿ ಎಂದು ಸಭೆಯಲ್ಲಿ ಹೇಳಿದ್ದೇನೆ ಎಂದು ಸೋಮಶೇಖರ್ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಶಾಸಕ ಶ್ರೀನಿವಾಸ್ ನನ್ನ ಕ್ಷೇತ್ರದವರು. ಅವರ ಚಿಕ್ಕನಳ್ಳಿ ಗ್ರಾಮ ಪಂಚಾಯತ್ ಸಮಸ್ಯೆ ಬಗ್ಗೆ ಮಾತಾಡಲು ಬಂದಿದ್ದರು. ಅವರು ಬಂದಿದ್ದು, ಇಂದು ನಮ್ಮ ಬೆಂಬಲಿಗರು ಬಂದಿದ್ದು ಕಾಕತಾಳೀಯ. ಅವರು ಬಂದಿದ್ದರಿಂದ ನಾನು ಕಾಂಗ್ರೆಸ್ ಕಡೆ ಮುಖ ಮಾಡಿದ್ದೇನೆ ಎನ್ನುವುದು ಸರಿಯಲ್ಲ ಎಂದರು.

ಒಂದು ರೂಪಾಯಿ ಅನುದಾನ ಬಂದಿಲ್ಲ: ಎಲ್ಲರ ಮೇಲೆ ನಾವು ವಿಶ್ವಾಸ ಇಡಬೇಕಾಗುತ್ತದೆ. ಕಾಂಗ್ರೆಸ್​ನಲ್ಲಿ ಇದ್ದಾಗ ಕಾಂಗ್ರೆಸ್​ಗೆ ಕೆಲಸ ಮಾಡಿದ್ದೇನೆ. ಬಿಜೆಪಿಯಲ್ಲಿ ಇದ್ದೇನೆ. ಈಗ ಬಿಜೆಪಿಗೆ ಕೆಲಸ ಮಾಡಿದ್ದೇನೆ. ನನ್ನ ಪ್ರಕಾರ, ನನ್ನ ಯಾವ ಬೆಂಬಲಿಗರು ಕಾಂಗ್ರೆಸ್​ಗೆ ಹೋಗಲ್ಲ. ಬಿಜೆಪಿಯಲ್ಲಿ ಎರಡು ಸುದ್ದಿಗೋಷ್ಠಿ ಹೊರತುಪಡಿಸಿ, ಎಲ್ಲಾ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಯಾಕೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬದಲಾಗಿದ್ದೀರಿ. ಕುಡಿಯುವ ನೀರಿನ ಬಗ್ಗೆ ಭಿಕ್ಷೆ ಕೇಳಬೇಕಾ? ಎಂದು ತುಷಾರ್ ಗಿರಿನಾಥ್ ಗೆ ಕೇಳಿದ್ದೇನೆ. ಇಂದು ಬೆಳಗ್ಗೆ ರಾಕೇಶ್ ಸಿಂಗ್​ಗೂ ರೇಗಿದ್ದೇನೆ. ಇವತ್ತಿನವರೆಗೂ ಒಂದು ರೂಪಾಯಿ ಅನುದಾನ ಬಂದಿಲ್ಲ ಎಂದು ತಿಳಿಸಿದರು.

ಜಿ.ಪರಮೇಶ್ವರ್‌ಗೆ ತಿರುಗೇಟು: ಕಾಂಗ್ರೆಸ್​ಗೆ ಬಂದರೆ ಫಸ್ಟ್ ಬೆಂಚ್ ಸಿಗಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ಆದರೆ, ಪರಮೇಶ್ವರ್ ಕರೆಕ್ಟ್ ಆಗಿ ಇರುತ್ತಿದ್ದರೆ ಅವರಿಗೆ ಫಸ್ಟ್ ಬೆಂಚ್ ಸಿಗುತ್ತಿತ್ತು. ಡಿಸಿಎಂ ಆಗಿದ್ದವರು ಈಗ ಎಲ್ಲಿದ್ದಾರೆ?. ನಾನು ಇಲ್ಲಿ ಹಿಂದೆಯೂ ಇಲ್ಲ, ಮುಂದೆಯೂ ಇಲ್ಲ. ಆರಾಮಾಗಿ ಇದ್ದೇನೆ ಎಂದು ಸೋಮಶೇಖರ್ ತಿರುಗೇಟು ಕೊಟ್ಟರು.

ಇದನ್ನೂ ಓದಿ: S.T.Somashekhar: ಕಾಂಗ್ರೆಸ್ ಸೇರ್ಪಡೆ ಕೇವಲ ವದಂತಿ, ಬಿಜೆಪಿ ಬಿಡುವುದಿಲ್ಲ- ಎಸ್.ಟಿ.ಸೋಮಶೇಖರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.