ETV Bharat / state

ಹೊಸ ವರ್ಷಕ್ಕೆ ಕಾವ್ಯಮಯವಾಗಿ ಶುಭ ಕೋರಿದ ವಿಜಯೇಂದ್ರ, ಕುಮಾರಸ್ವಾಮಿ - ಹೊಸ ವರ್ಷಕದ ಶುಭ ಕೋರಿ

ಬಿಜೆಪಿ, ಜೆಡಿಎಸ್ ಪಕ್ಷದ ನಾಯಕರು ನಾಡಿನ ಸಮಸ್ತ ಜನತೆಗೆ ಹೊಸ ವರ್ಷ 2024ರ ಶುಭಾಶಯಗಳನ್ನು ತಿಳಿಸಿದ್ದಾರೆ.

New Year  BJP and JDS  ಹೊಸ ವರ್ಷಕದ ಶುಭ ಕೋರಿ  ಕಾವ್ಯಮಯವಾಗಿ ಶುಭ ಕೋರಿ
ಕಾವ್ಯಮಯವಾಗಿ ಹೊಸ ವರ್ಷಕದ ಶುಭ ಕೋರಿ ಗಮನ ಸೆಳೆದ ಹೆಚ್​ಡಿಕೆ, ಬಿವೈವಿ
author img

By ETV Bharat Karnataka Team

Published : Jan 1, 2024, 12:03 PM IST

ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹಾಗು ಹೆಚ್​.ಡಿ.ಕುಮಾರಸ್ವಾಮಿ ಸೇರಿದಂತೆ ರಾಜ್ಯ ಬಿಜೆಪಿ ಹಾಗು ಜೆಡಿಎಸ್ ನಾಯಕರು ನಾಡಿನ ಸಮಸ್ತ ಜನತೆಗೆ 2024ರ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. ಬಿಜೆಪಿ ಹಾಗು ಜೆಡಿಎಸ್ ರಾಜ್ಯಾಧ್ಯಕ್ಷರಿಬ್ಬರೂ ಕವಿತೆಯ ಮೂಲಕ ಶುಭ ಕೋರಿರುವುದು ವಿಶೇಷ.

ಪ್ರಗತಿ ಮತ್ತು ಯಶಸ್ಸಿನಿಂದ ಕೂಡಿರಲಿ-ಬಿಎಸ್​ವೈ: ನೂತನ ವರ್ಷ ಎಲ್ಲರಿಗೂ ಸಂತಸ, ಸಂಭ್ರಮ, ಉತ್ತಮ ಆರೋಗ್ಯ ಮತ್ತು ಹೊಸ ಭರವಸೆಗಳನ್ನು ಹೊತ್ತು ತರಲಿ. ಎಲ್ಲರ ಪಾಲಿಗೆ ಪ್ರಗತಿ ಮತ್ತು ಯಶಸ್ಸಿನಿಂದ ಕೂಡಿರಲಿ ಎಂದು ಹಾರೈಸುತ್ತೇನೆ ಎಂದು ಬಿ.ಎಸ್.ಯಡಿಯೂರಪ್ಪ ಎಕ್ಸ್‌ ಪೋಸ್ಟ್‌ ಮಾಡಿದ್ದಾರೆ.

ಸುಖ, ಶಾಂತಿ ಹಾಗೂ ಸಮೃದ್ಧಿ ತರಲಿ-ಬೊಮ್ಮಾಯಿ: ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ನೂತನ ವರ್ಷ ನಿಮ್ಮೆಲ್ಲರ ಬಾಳಿನಲ್ಲಿ ಸುಖ, ಶಾಂತಿ ಹಾಗೂ ಸಮೃದ್ಧಿ ತರಲಿ ಎಂದು ಹಾರೈಸುತ್ತೇನೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

  • 2024 ರ ನಿರೀಕ್ಷೆ -ಕನಸು.
    •ಭಾರತದ ಸಾರ್ವಭೌಮತ್ವ ಸುಭದ್ರಗೊಳಿಸುವ
    ಚುನಾವಣಾ ಫಲಿತಾಂಶ ಕಮಲದಂತೆ ಅರಳಲಿ.
    •ಕರ್ನಾಟದಲ್ಲಿ ಜಾತಿ, ಧರ್ಮಗಳನ್ನು ಒಡೆದು ಎತ್ತಿಕಟ್ಟುವ ರಾಜಕಾರಣ ಕೊನೆಯಾಗಲಿ.
    •ಕುವೆಂಪು ಅವರು ಕಂಡ "ಸರ್ವ ಜನಾಂಗದ ಶಾಂತಿಯ ತೋಟ…." ನಿರ್ಮಾಣವಾಗಲಿ.
    •ಬಾಧಿಸುವ ಬರಗಾಲ ಮತ್ತೆ ಬಾರದಿರಲಿ.
    •ಜಲ ಸಂಪತ್ತು, ಸಸ್ಯ ಸಂಪತ್ತು,… pic.twitter.com/eS6HJwK82j

    — Vijayendra Yediyurappa (@BYVijayendra) January 1, 2024 " class="align-text-top noRightClick twitterSection" data=" ">

ಚುನಾವಣಾ ಫಲಿತಾಂಶ ಕಮಲದಂತೆ ಅರಳಲಿ-ವಿಜಯೇಂದ್ರ: ಭಾರತದ ಸಾರ್ವಭೌಮತ್ವವನ್ನು ಸುಭದ್ರಗೊಳಿಸುವ ಚುನಾವಣಾ ಫಲಿತಾಂಶ ಕಮಲದಂತೆ ಅರಳಲಿ. ಕರ್ನಾಟಕದಲ್ಲಿ ಜಾತಿ, ಧರ್ಮಗಳನ್ನು ಒಡೆದು ಎತ್ತಿಕಟ್ಟುವ ರಾಜಕಾರಣ ಕೊನೆಯಾಗಲಿ. ಕುವೆಂಪು ಕಂಡ "ಸರ್ವ ಜನಾಂಗದ ಶಾಂತಿಯ ತೋಟ" ನಿರ್ಮಾಣವಾಗಲಿ. ಬಾಧಿಸುವ ಬರಗಾಲ ಮತ್ತೆ ಬಾರದಿರಲಿ. ಜಲ ಸಂಪತ್ತು, ಸಸ್ಯ ಸಂಪತ್ತು, ಧಾನ್ಯ ಸಂಪತ್ತುಗಳು ವೃದ್ಧಿಸಿ ಸಮೃದ್ಧ ಕರ್ನಾಟಕ ಕಂಗೊಳಿಸಲಿ. ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಕ್ಸ್ ಪೋಸ್ಟ್ ಮಾಡಿದ್ದಾರೆ.

ಆರ್​.ಅಶೋಕ್​ ಶುಭಾಶಯ​: 2024 ಪ್ರತಿಯೊಬ್ಬರಿಗೂ ನವ ಸಂತಸ, ಸಂಭ್ರಮ, ನೆಮ್ಮದಿ ತರಲಿ. ಉದ್ಯೋಗ-ವ್ಯಾಪಾರಗಳಲ್ಲಿ ಯಶಸ್ಸು, ಕೀರ್ತಿ ಪ್ರಾಪ್ತಿಯಾಗಲಿ. ಪ್ರತಿಯೊಬ್ಬ ಭಾರತೀಯ ಪ್ರಜೆ ಒಂದು ಹೆಜ್ಜೆ ಮುಂದಿಟ್ಟರೆ ಇಡೀ ಭಾರತದ 130 ಕೋಟಿ ಜನರ ಹೆಜ್ಜೆ ಮುಂದಿಟ್ಟಂತೆ. ವಿಕಸಿತ ಭಾರತ ನಿರ್ಮಿಸುವ ಕಾರ್ಯದಲ್ಲಿ ಭಾಗಿಯಾಗಲು ಎಲ್ಲ ಭಾರತೀಯರಿಗೂ ಈ ಹೊಸವರ್ಷ ಹೊಸ ಸ್ಪೂರ್ತಿ, ಹೊಸ ಪ್ರೇರಣೆ, ಹೊಸ ಚೈತನ್ಯ ನೀಡಲಿ ಎಂದು ಹಾರೈಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಾರೈಸಿದ್ದಾರೆ.

  • ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. 2023ರ ಸವಿನೆನಪುಗಳೊಂದಿಗೆ 2024 ನವೋಲ್ಲಾಸ ಉಂಟು ಮಾಡಲಿ. ಎಲ್ಲೆಡೆ ಸುಖ-ಶಾಂತಿ, ನೆಮ್ಮದಿ-ಸಮೃದ್ಧಿ ನೆಲೆಸಿ ಸರ್ವರ ಬಾಳಿನಲ್ಲಿಯೂ ಸಡಗರ ಮನೆ ಮಾಡಲಿ.

    "
    ಎಡರುಗಳ ಕಡಲುಗಳನೀಸಿ ಬರುವೆವು, ಘೋರ
    ನೈರಾಶ್ಯದಗ್ನಿಮುಖದಲ್ಲು ಕೂಡ
    ಹೊಕ್ಕು ಹೊರಡುವೆವೆಲ್ಲ ತೊಡಕುಗಳ ಒಡಕುಗಳ
    ಬಿಡಿಸಿ, ಇಡಿಗೊಳಿಸಿ… pic.twitter.com/F0dnZCf4sL

    — ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) January 1, 2024 " class="align-text-top noRightClick twitterSection" data=" ">

ಹೆಚ್​ಡಿಕೆ ಶುಭಾಶಯ: 2023ರ ಸವಿನೆನಪುಗಳೊಂದಿಗೆ 2024 ನವೋಲ್ಲಾಸ ಉಂಟುಮಾಡಲಿ. ಎಲ್ಲೆಡೆ ಸುಖ-ಶಾಂತಿ, ನೆಮ್ಮದಿ-ಸಮೃದ್ಧಿ ನೆಲೆಸಿ ಸರ್ವರ ಬಾಳಿನಲ್ಲಿಯೂ ಸಡಗರ ಮನೆ ಮಾಡಲಿ ಎಂದು ಹೆಚ್‌ಡಿಕೆ ಹಾರೈಸಿದ್ದಾರೆ.

ಎಡರುಗಳ ಕಡಲುಗಳನೀಸಿ ಬರುವೆವು, ಘೋರ
ನೈರಾಶ್ಯದಗ್ನಿಮುಖದಲ್ಲು ಕೂಡ
ಹೊಕ್ಕು ಹೊರಡುವೆವೆಲ್ಲ ತೊಡಕುಗಳ ಒಡಕುಗಳ
ಬಿಡಿಸಿ, ಇಡಿಗೊಳಿಸಿ ಕಟ್ಟುವೆವು ನಾಡ!

ಕವಿ ಗೋಪಾಲಕೃಷ್ಣ ಅಡಿಗರ ಈ ಕವಿತೆ ನವ ವರ್ಷಕ್ಕೆ ನಮ್ಮೆಲ್ಲರ ಸಂಕಲ್ಪವಾಗಲಿ ಎಂದು ಹಾರೈಸುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಎಕ್ಸ್‌ ಪೋಸ್ಟ್ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.