ಬೆಂಗಳೂರು : ಸಿದ್ದಾರ್ಥ್ ನಮ್ಮ ರಾಜ್ಯದ ಅಸ್ತಿ. ಕನ್ನಡಿಗರಾಗಿ ಇಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ. ವಿಶ್ವಾಸದಿಂದ ಜನರನ್ನ ನೋಡಿಕೊಂಡಿದ್ದ ವ್ಯಕ್ತಿ ಕೊನೆ ಉಸಿರು ಎಳೆದಿದ್ದಾರೆ ಎಂಬುದನ್ನು ನನಗೆ ಇವತ್ತೂ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಿಳಿಸಿದರು.
ಅವರ ಸಿಬ್ಬಂದಿ ವರ್ಗ, ಕುಟುಂಬಸ್ಥರಿಗೆ ದುಃಖಬರಿಸುವ ಶಕ್ತಿ ಆ ದೇವರು ನೀಡಲಿ. ಆದಾಯ ತೆರಿಗೆಯವರು ತುಂಬಾ ಅರ್ಜೆಂಟ್ನಲ್ಲಿ ಏನೇನೋ ಮಾತ್ನಾಡಲಿ. ಆ ದೇವರೇ ಅದನ್ನ ನೋಡಿಕೊಳ್ಳಲಿ. ನಾನು ಅದರ ಬಗ್ಗೆ ಏನು ಮಾತ್ನಡಲ್ಲ ಎಂದು ಭಾವನಾತ್ಮಕವಾಗಿ ನುಡಿದರು.
ಎಂಬಿ ಪಾಟೀಲ್ ಸಂತಾಪ
ಇನ್ನು ಸಿದ್ದಾರ್ಥ್ ಸಾವಿನ ಬಗ್ಗೆ ಎಂಬಿ ಪಾಟೀಲ್ ಮಾತನಾಡಿ, ಆತ್ಮೀಯ, ಸ್ನೇಹಿತ ಹಾಗೂ ಕರ್ನಾಟಕ ರಾಜ್ಯದ ಹೆಮ್ಮೆಯ ಉದ್ಯಮಿ ಸಿದ್ದಾರ್ಥ್ ಅವರ ಅಕಾಲಿಕ ಸಾವು ರಾಜ್ಯದ ಜನತೆ ವಿಶೇಷವಾಗಿ ಯುವಕರಿಗೆ ಹಾಗೂ ಸಿಬ್ಬಂದಿಗೆ ದುಃಖ ತಂದಿದೆ. ಈ ಸಾವು ಅವರಿಗೆ ತುಂಬಾ ಅನ್ಯಾಯ ತಂದಿದೆ. ಸಿದ್ದಾರ್ಥ್ನನ್ನು ನಾನು 20 ವರ್ಷದಿಂದ ನೋಡಿದ್ದೇನೆ. ಎಲ್ಲಾರೂ ಪ್ರೀತಿಸುವಂತಹ ವ್ಯಕ್ತಿ, ಶ್ರೇಷ್ಠವಾದ ವ್ಯಕಿತ್ವ ಎಂದು ಹೇಳಿದರು.
ಸಿದ್ದಾರ್ಥ್ ಆಫೀಸ್ ಬಿಟ್ಟರೆ ಮನೆಯಲ್ಲಿ ಮಾತ್ರ ಕಾಲ ಕಳೆಯುತ್ತಿದ್ರು. ತಂದೆಯಿಂದ ಕೇವಲ 5 ಲಕ್ಷ ಸಾಲ ಪಡೆದು ಉದ್ಯೋಗ ಪ್ರಾರಂಭಿಸಿದ್ರು. ವ್ಯವಹಾರಗಳ ಒತ್ತಡದಿಂದ ಹೀಗೆ ಮಾಡಿಕೊಳ್ಳಬಾರದಿತ್ತು ಎದು ಎಂಬಿ ಪಾಟೀಲ್ ಸಂತಾಪ ಸೂಚಿಸಿದ್ದಾರೆ.
ಸದಾನಂದಗೌಡ ಟ್ವೀಟ್
-
ಅತ್ಯಂತ ಸಭ್ಯ, ಸುಸಂಸ್ಕೃತ ವ್ಯಕ್ತಿ ,ಕಾಫಿ ಕಿಂಗ್ ಎಂದೇ ಪ್ರಖ್ಯಾತ ರಾಗಿದ್ದ ಕೆಫೆ ಕಾಫಿ ಡೇ ಸಂಸ್ಥಾಪಕ ಯುವ ಉದ್ಯಮಿ ಚಿಕ್ಕಮಗಳೂರು ಮೂಲದ ಸಿದ್ದಾರ್ಥ ರವರ ಜೀವನ ಈ ರೀತಿ ಅಂತ್ಯವಾದದ್ದು ಆಘಾತಕರ. ನಂಬಲಾಸಾಧ್ಯ. ಏನು ಹೇಳಬೇಕು ತಿಳಿಯುತ್ತಿಲ್ಲ.ಇದನ್ನು ಎದುರಿಸುವ ಮನೋ ಶಕ್ತಿ ಅವರ ಕುಟುಂಬಕ್ಕೆ ಸಿಗಲೆಂದು ದೇವರಲ್ಲಿ ಪ್ರಾರ್ಥನೆ. pic.twitter.com/C9SuApfEY0
— Sadananda Gowda (@DVSadanandGowda) July 31, 2019 " class="align-text-top noRightClick twitterSection" data="
">ಅತ್ಯಂತ ಸಭ್ಯ, ಸುಸಂಸ್ಕೃತ ವ್ಯಕ್ತಿ ,ಕಾಫಿ ಕಿಂಗ್ ಎಂದೇ ಪ್ರಖ್ಯಾತ ರಾಗಿದ್ದ ಕೆಫೆ ಕಾಫಿ ಡೇ ಸಂಸ್ಥಾಪಕ ಯುವ ಉದ್ಯಮಿ ಚಿಕ್ಕಮಗಳೂರು ಮೂಲದ ಸಿದ್ದಾರ್ಥ ರವರ ಜೀವನ ಈ ರೀತಿ ಅಂತ್ಯವಾದದ್ದು ಆಘಾತಕರ. ನಂಬಲಾಸಾಧ್ಯ. ಏನು ಹೇಳಬೇಕು ತಿಳಿಯುತ್ತಿಲ್ಲ.ಇದನ್ನು ಎದುರಿಸುವ ಮನೋ ಶಕ್ತಿ ಅವರ ಕುಟುಂಬಕ್ಕೆ ಸಿಗಲೆಂದು ದೇವರಲ್ಲಿ ಪ್ರಾರ್ಥನೆ. pic.twitter.com/C9SuApfEY0
— Sadananda Gowda (@DVSadanandGowda) July 31, 2019ಅತ್ಯಂತ ಸಭ್ಯ, ಸುಸಂಸ್ಕೃತ ವ್ಯಕ್ತಿ ,ಕಾಫಿ ಕಿಂಗ್ ಎಂದೇ ಪ್ರಖ್ಯಾತ ರಾಗಿದ್ದ ಕೆಫೆ ಕಾಫಿ ಡೇ ಸಂಸ್ಥಾಪಕ ಯುವ ಉದ್ಯಮಿ ಚಿಕ್ಕಮಗಳೂರು ಮೂಲದ ಸಿದ್ದಾರ್ಥ ರವರ ಜೀವನ ಈ ರೀತಿ ಅಂತ್ಯವಾದದ್ದು ಆಘಾತಕರ. ನಂಬಲಾಸಾಧ್ಯ. ಏನು ಹೇಳಬೇಕು ತಿಳಿಯುತ್ತಿಲ್ಲ.ಇದನ್ನು ಎದುರಿಸುವ ಮನೋ ಶಕ್ತಿ ಅವರ ಕುಟುಂಬಕ್ಕೆ ಸಿಗಲೆಂದು ದೇವರಲ್ಲಿ ಪ್ರಾರ್ಥನೆ. pic.twitter.com/C9SuApfEY0
— Sadananda Gowda (@DVSadanandGowda) July 31, 2019
ಇನ್ನು ಸಂಸದ ಸದಾನಂದಗೌಡ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಅತ್ಯಂತ ಸಭ್ಯ, ಸುಸಂಸ್ಕೃತ ವ್ಯಕ್ತಿ, ಕಾಫಿ ಕಿಂಗ್ ಎಂದೇ ಪ್ರಖ್ಯಾತರಾಗಿದ್ದ ಕೆಫೆ ಕಾಫಿ ಡೇ ಸಂಸ್ಥಾಪಕ ಯುವ ಉದ್ಯಮಿ ಚಿಕ್ಕಮಗಳೂರು ಮೂಲದ ಸಿದ್ದಾರ್ಥ ರವರ ಜೀವನ ಈ ರೀತಿ ಅಂತ್ಯವಾದದ್ದು ಆಘಾತಕರ. ನಂಬಲಾಸಾಧ್ಯ. ಏನು ಹೇಳಬೇಕು ತಿಳಿಯುತ್ತಿಲ್ಲ. ಇದನ್ನು ಎದುರಿಸುವ ಮನೋ ಶಕ್ತಿ ಅವರ ಕುಟುಂಬಕ್ಕೆ ಸಿಗಲೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.