ETV Bharat / state

ಜೆಡಿಎಸ್​ಗೆ ಸಭಾಪತಿ ಸ್ಥಾನ ತಪ್ಪಿಸಲು ಸಿದ್ದರಾಮಯ್ಯ ಷಡ್ಯಂತ್ರ: ಹೆಚ್​​ಡಿಕೆ ಆರೋಪ

ನಾನೇನು ನಾಳೆಯೇ ಸಭಾಪತಿ ಸ್ಥಾನ ಸಿಗುತ್ತದೆ ಎಂಬ ಭ್ರಮೆಯಲ್ಲಿ ಇಲ್ಲ. ನಾಲ್ಕೈದು ದಿನ ತಡವಾಗಬಹುದು. ಇಲ್ಲವೇ ಮುಂದಿನ ಅಧಿವೇಶನಕ್ಕೆ ಹೋಗಬಹುದು. ಸಭಾಪತಿ ಸ್ಥಾನವನ್ನು ದಾಳಿ ಮಾಡಿ ಪಡೆಯಬೇಕೆಂಬುದು ಏನಿಲ್ಲ. ಆದ್ರೆ ಜೆಡಿಎಸ್​ಗೆ ಸಭಾಪತಿ ಸ್ಥಾನ ತಪ್ಪಿಸಲು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆರೋಪ

author img

By

Published : Feb 2, 2021, 10:56 PM IST

ಬೆಂಗಳೂರು: ವಿಧಾನ ಪರಿಷತ್​ನ ಸಭಾಪತಿ ಸ್ಥಾನವನ್ನು ಜೆಡಿಎಸ್​ಗೆ ತಪ್ಪಿಸಲು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಷಡ್ಯಂತ್ರ ನಡೆಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದಾರೆ.

ಖಾಸಗಿ ಹೋಟೆಲ್​ನಲ್ಲಿ ಇಂದು ರಾತ್ರಿ ಕರೆದಿರುವ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಏನೇನು ಮಾಡ್ತಿದ್ದಾರೆ ಅನ್ನೋದು ಎಲ್ಲಾ ಗೊತ್ತಿದೆ. ಜೆಡಿಎಸ್​ಗೆ ಯಾಕೆ ಬೆಂಬಲ ಕೊಡ್ತಿದ್ದೀರಾ ಅಂತಾ ಬಿಜೆಪಿಯ ಕೆಲ ಸದಸ್ಯರನ್ನು ಕೇಳಿದ್ದಾರೆ. ಜೆಡಿಎಸ್​ನ ಐದಾರು ಜನರನ್ನು ಕರೆದುಕೊಂಡು ಬರುತ್ತೇನೆ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ. ಇದೆಲ್ಲವೂ ನನಗೆ ಚೆನ್ನಾಗಿ ಗೊತ್ತಿದೆ. ಈಗ ರಾಜಕೀಯ ಲಾಭ ಪಡೆಯಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ನಾನೇನು ನಾಳೆಯೇ ಸಭಾಪತಿ ಸ್ಥಾನ ಸಿಗುತ್ತದೆ ಎಂಬ ಭ್ರಮೆಯಲ್ಲಿ ಇಲ್ಲ. ನಾಲ್ಕೈದು ದಿನ ತಡವಾಗಬಹುದು. ಇಲ್ಲವೇ ಮುಂದಿನ ಅಧಿವೇಶನಕ್ಕೆ ಹೋಗಬಹುದು. ಸಭಾಪತಿ ಸ್ಥಾನವನ್ನು ದಾಳಿ ಮಾಡಿ ಪಡೆಯಬೇಕೆಂಬುದು ಏನಿಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

ಸಿದ್ದರಾಮಯ್ಯನವರು ಜೆಡಿಎಸ್ ಒಂದು ಪಕ್ಷವೇ ಅಲ್ಲ ಅಂತಾರೆ. ಆದರೆ ದಿನ ಬೆಳಗಾದರೆ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ಬಗ್ಗೆ ಮಾತಾಡ್ತಾರೆ ಎಂದು ಕಿಡಿಕಾರಿದರು. ಕಾನೂನು ಬಾಹಿರವಾಗಿ ಸಭಾಪತಿ ಸ್ಥಾನದಲ್ಲಿ ಮುಂದುವರೆಸಿದ್ದಾರೆ. ಸಣ್ಣತನದ ರಾಜಕೀಯದಿಂದಾಗಿ ಆತ್ಮೀಯ ಸ್ನೇಹಿತ ಉಪಸಭಾಪತಿಯನ್ನು ಕಳೆದುಕೊಂಡಿದ್ದೇವೆ ಎಂದರು. ಗೋಹತ್ಯೆ ನಿಷೇಧ ಕಾಯ್ದೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್​ಡಿಕೆ, ವಿಷಯಾಧಾರಿತವಾಗಿ ಬೆಂಬಲ ನೀಡಲಾಗುವುದು.

ಓದಿ: ರಾಜ್ಯ ಆರೋಗ್ಯ ಇಲಾಖೆಯಿಂದ ಹೊಸ ಕೋವಿಡ್​​ ಮಾರ್ಗಸೂಚಿ ಬಿಡುಗಡೆ

ನಾಡಿನ ಜನತೆಗೆ ಒಳಿತಾಗುವ ಕಾರ್ಯಕ್ರಮಗಳಿಗೆ ನಮ್ಮ ಬೆಂಬಲ ಇದೆ. ಆದರೆ ಜನರಿಗೆ ಅನಾಹುತವಾಗುವ ಕಾರ್ಯಕ್ರಮಗಳಿಗೆ ನನ್ನ ಬೆಂಬಲ ಇಲ್ಲ. ಜನರ ರಕ್ಷಣೆಯ ಜವಾಬ್ದಾರಿ ಬಹಳ ಮುಖ್ಯ ಎಂದು ಕುಮಾರಸ್ವಾಮಿ ನೇರವಾಗಿ ಏನನ್ನೂ ಸ್ಪಷ್ಟಪಡಿಸದೆ ನುಡಿದರು.

ನಮ್ಮ‌ ಪಕ್ಷದ ಜಾತ್ಯಾತೀತತೆಯನ್ನು ಪರೀಕ್ಷಿಸಲು ಹೊರಟಿದ್ದಾರೆ. ಕಾಂಗ್ರೆಸ್​ನ ಕೆಲವರು ಮಾತ್ರ ಈ ರೀತಿ ಮಾಡ್ತಿದ್ದಾರೆ. ಸಿದ್ದರಾಮಯ್ಯ ನಮ್ಮ ಬಂಡವಾಳ ಬಯಲು ಮಾಡುತ್ತೇನೆಂದು ಹೇಳ್ತಾರೆ. ಇವರಿಂದ ನಾವು ಸರ್ಟಿಫಿಕೇಟ್ ಪಡೆಯಬೇಕಿಲ್ಲ. ಜನರೇ ನಮಗೆ ಸರ್ಟಿಫಿಕೇಟ್ ಕೊಡುತ್ತಾರೆ ಎಂದು ಮತ್ತೆ ವಾಗ್ದಾಳಿ ನಡೆಸಿದರು.

ಬಿಜೆಪಿಗೆ ಕುಮಾರಸ್ವಾಮಿ ಕಂಬಳಿ ಹಾಸಿದ್ದಾರೆಂಬ ಹೆಚ್.ವಿಶ್ವನಾಥ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾನೆಲ್ಲೂ ಯಾರಿಗೂ ಕಂಬಳಿ ಹಾಸಿಲ್ಲ. ಹಾಕಿಸಿಕೊಳ್ಳೋರು ಬರ್ತಾರೆ, ಹೋಗ್ತಾರೆ. ಜೆಡಿಎಸ್‌ ಪಕ್ಷವನ್ನು ಉಪಯೋಗ ಮಾಡಿಕೊಳ್ಳುತ್ತಾರೆ, ಹೋಗ್ತಾರೆ ಎಂದು ವಿಶ್ವನಾಥ್​ಗೆ ಟಾಂಗ್ ನೀಡಿದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.