ETV Bharat / state

‘ಧರಣಿ ಮಂಡಲ ಮಧ್ಯದೊಳಗೆ’ ಪಂಚಭೂತಗಳಲ್ಲಿ ಲೀನರಾದ ಸಿದ್ಧಲಿಂಗಯ್ಯ - Dr. Siddhalingaiah passes away

ಅಭಿಮಾನಿಗಳು, ಗಣ್ಯರು ಸೇರಿದಂತೆ ನೂರಾರು ಜನ ನಿನ್ನೆ ವಿಧಿವಶರಾದ ಸಾಹಿತಿ ಡಾ. ಸಿದ್ಧಲಿಂಗಯ್ಯನವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದ ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು.

last respect to Dr. Siddhalingaiah
‘ಧರಣಿ ಮಂಡಲ ಮಧ್ಯದೊಳಗೆ’ ಪಂಚಭೂತಗಳಲ್ಲಿ ಲೀನರಾದ ಸಿದ್ಧಲಿಂಗಯ್ಯ
author img

By

Published : Jun 12, 2021, 12:14 PM IST

Updated : Jun 12, 2021, 2:01 PM IST

ಬೆಂಗಳೂರು: ಹಿರಿಯ ಸಾಹಿತಿ, ದಲಿತ ಕವಿ ಡಾ. ಸಿದ್ಧಲಿಂಗಯ್ಯ ಅವರ ಅಂತ್ಯ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಕಲಾಗ್ರಾಮದಲ್ಲಿ ನೆರವೇರಿಸಲಾಯಿತು.

ನಿನ್ನೆ ನಿಧನರಾದ ಸಾಹಿತಿ, ಕವಿ ಡಾ. ಸಿದ್ಧಲಿಂಗಯ್ಯ ಅವರ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ಜ್ಞಾನ ಭಾರತಿ ಆವರಣದ ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಕೋವಿಡ್ ನಿಯಮ ಪಾಲನೆಯೊಂದಿಗೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ವಿದ್ಯಾರ್ಥಿಗಳು, ಉಪನ್ಯಾಸಕರು, ಸಾಹಿತಿಗಳು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು. ಬಳಿಕ ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು.

ಅಂತಿಮ ದರ್ಶನಕ್ಕೆ ಬರುವವರು ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಎಲ್ಲರೂ ಮಾಸ್ಕ್​ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಆಗಮಿಸಿದರು. ಅಂತಿಮ ದರ್ಶನ ಸ್ಥಳದ ಸುತ್ತಮುತ್ತ ನಿರತಂತರ ಸ್ಯಾನಿಟೈಸ್​ ಮಾಡಲಾಗಿತ್ತು. ಮಧ್ಯಾಹ್ನ 12-30ರವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ಅಭಿಮಾನಿಗಳು ಸಿದ್ಧಲಿಂಗಯ್ಯ ಅವರ ಕವಿತೆಗಳನ್ನು ಹಾಡಿ ಅಂತಿಮ ವಿದಾಯ ಸಲ್ಲಿಸಿದರು.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಚಿವ ಆರ್.ಅಶೋಕ್ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಆಗಮಿಸಿ ಸಿದ್ಧಲಿಂಗಯ್ಯ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಮೃತದೇಹದ ಪಕ್ಕದಲ್ಲಿ ಬುದ್ಧನ ಪ್ರತಿಮೆಯಿಟ್ಟು ಬೌದ್ಧ ಬಿಕ್ಕುಗಳು ಮಂತ್ರ ಪಠಿಸಿದರು.

‘ಧರಣಿ ಮಂಡಲ ಮಧ್ಯದೊಳಗೆ’ ಪಂಚಭೂತಗಳಲ್ಲಿ ಲೀನರಾದ ಸಿದ್ಧಲಿಂಗಯ್ಯ

ಬಳಿಕ ಮಾತನಾಡಿದ ಬಸವರಾಜ್ ಬೊಮ್ಮಾಯಿ, ಸಿದ್ಧಲಿಂಗಯ್ಯನವರು ಸಾಹಿತ್ಯದ ಮೂಲಕ ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡಿದರು. ದೊಡ್ಡ ಹೃದಯ ಶ್ರೀಮಂತಿಕೆ ಅವರದ್ದು. ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅಪಾರ, ಅದನ್ನು ನಾವು ಉಳಿಸಿಕೊಳ್ಳಬೇಕು. ಕರ್ನಾಟಕದ ಸಂಸ್ಕೃತಿಗೆ ಹೇಳಿ ಮಾಡಿಸಿದ ವ್ಯಕ್ತಿ ಸಿದ್ಧಲಿಂಗಯ್ಯನವರು. ಸಾಮಾಜಿಕ, ಶೈಕ್ಷಣಿಕ, ಸಾಹಿತಿಕವಾಗಿ ಸಿದ್ಧಲಿಂಗಯ್ಯನವರ ಕೊಡುಗೆ ಅಪಾರ. ಅವರ ಕೆಲಸಗಳನ್ನು ನೆನಪಿಸಿಕೊಳ್ಳುವ ನಿಟ್ಟಿನಲ್ಲಿ ಸಿಎಂ ಜೊತೆ ಮಾತನಾಡುತ್ತೇನೆ ಎಂದರು.

ಸ್ಯಾಂಡಲ್​ವುಡ್​ ನಟರಾದ ದುನಿಯಾ ವಿಜಯ್, ಡಾಲಿ‌ ಧನಂಜಯ್, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್, ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಹಲವು ಗಣ್ಯರು ಅಗಲಿದ ಕವಿಗೆ ಅಂತಿಮ ನಮನ ಸಲ್ಲಿಸಿದರು. ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಸದಾನಂದಗೌಡ ಅಂತಿಮ ದರ್ಶನಕ್ಕೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

ಸಿದ್ದರಾಮಯ್ಯ ಸಂತಾಪ: ಸಿದ್ಧಲಿಂಗಯ್ಯ ಅವರದ್ದು ಅಕಾಲಿಕ ನಿಧನ. ಅವರಿಗೆ ಸಾವನ್ನಪ್ಪುವ ವಯಸ್ಸಾಗಿರಲಿಲ್ಲ. ಜೀವನದ ಉದ್ದಕ್ಕೂ ನೋವನ್ನು ಉಂಡು, ಅನುಭವಿಸಿ, ಎಲ್ಲ ದಲಿತರ ಪರ ಧ್ವನಿಯಾಗಿದ್ದರು. ದಲಿತ ಸಂಘರ್ಷ ಸಮಿತಿ ಸಂಸ್ಥಾಪಕರಲ್ಲಿ ಅವರೂ ಒಬ್ಬರು. ಎಲ್ಲ ನೋವುಂಡ ಜನರ ಧ್ವನಿಯಾಗಿ ಕವನಗಳ ಮೂಲಕ ಹೊರ ಹಾಕುತ್ತಿದ್ದರು. ಅದಕ್ಕೆ ಅವರಿಗೆ ದಲಿತ ಕವಿ ಎನ್ನುತ್ತಿದ್ದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದರು.

ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ಇಷ್ಟು ಎತ್ತರಕ್ಕೆ ಬೆಳೆದು, ದಲಿತರ ಸಾಮಾಜಿಕ ನ್ಯಾಯದ ಪರವಾಗಿ ನಿಂತರು. ಕೊನೆವರೆಗೂ ದಲಿತರ ಉದ್ಧಾರಕ್ಕಾಗಿ, ಏಳಿಗೆಗಾಗಿ ಹೊರಾಟ ನಡೆಸಿದರು. ಅವರು 1974ರಿಂದಲೂ ನನಗೆ ಸ್ನೇಹಿತರು. ಯಾವಾಗ ಸಿಕ್ಕಿದರೂ ಆತ್ಮೀಯತೆಯಿಂದ ಮಾತಾಡುತ್ತಿದ್ದರು. ದಲಿತರ ಸಮಸ್ಯೆ ಹಾಗೂ ಶೋಷಿತರ ಬಗ್ಗೆ ಚರ್ಚೆ ಮಾಡುತ್ತಿದ್ದರು ಎಂದರು.

ಸಿದ್ಧಲಿಂಗಯ್ಯ ಅವರು ಎರಡು ಬಾರಿ ಮೇಲ್ಮನೆಗೆ ಸದಸ್ಯರಾಗಿದ್ದರು. ನಾಡೋಜ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಿಕ್ಕಿವೆ. ಅವರ ಅಕಾಲಿಕ ಮರಣದಿಂದಾಗಿ ದಲಿತ ಸಾಹಿತ್ಯಕ್ಕೆ ದೊಡ್ಡ ನಷ್ಟ ಆಗಿದೆ. ಅವರ ಜಾಗ ಭರ್ತಿ ಮಾಡಲು ಸಾಧ್ಯವಿಲ್ಲ. ನಾನು ಸಿಎಂ ಆಗಿದ್ದಾಗ ಪ್ರತೀ ಸಾರಿ ಬಜೆಟ್ ಮಂಡನೆಗೆ ಮೊದಲು ಸಿದ್ಧಲಿಂಗಯ್ಯರನ್ನು ಕರೆಯುತ್ತಿದ್ದೆ. ಒಳ್ಳೆ ಸಲಹೆ ಕೊಡುತ್ತಿದ್ದರು. ಮೃದು ಮಾತಿನ ಮನುಷ್ಯ ನಮ್ಮನ್ನು ಅಗಲಿರುವುದು ಸಾಹಿತ್ಯ ಲೋಕಕ್ಕೆ ದೊಡ್ಡ ನಷ್ಟವಾಗಿದೆ ಎಂದರು.

ಬೌದ್ಧ ಸಂಪ್ರಯದಾಯದಂತೆ ಅಂತ್ಯ ಸಂಸ್ಕಾರ: ಮಧ್ಯಾಹ್ನ ಮಲ್ಲತ್ತಹಳ್ಳಿಯ ಕಲಾಗ್ರಾಮದ ಆವರಣದಲ್ಲಿ ಬೌದ್ಧ ಧರ್ಮದ ಸಂಪ್ರದಾಯದಂತೆ ಸಿದ್ಧಲಿಂಗಯ್ಯನವರ ಅಂತ್ಯ ಸಂಸ್ಕಾರ ನಡೆಯiತು. ಬೌದ್ಧ ಗುರುಗಳು ಆಗಮಿಸಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ದಿವಂಗತ ಡಾ. ಶಿವರುದ್ರಪ್ಪ ಮತ್ತು ಅನಂತ ಮೂರ್ತಿರಯವರ ಸ್ಮಾರಕದ ಪಕ್ಕದಲ್ಲಿಯೇ ಸಿದ್ಧಲಿಂಗಯ್ಯನವರ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಿದ್ಧಲಿಂಗಯ್ಯ ಅವರ ಪಾರ್ಥಿವ ಶರೀರ ಸಾರ್ವಜನಿಕ ವೀಕ್ಷಣೆ ಬಳಿಕ ಕಲಾಗ್ರಾಮದತ್ತ ಪಾರ್ಥಿವ ಶರೀರ ರವಾನೆ ಮಾಡಲಾಯಿತು. ಬಳಿಕ ಕಲಾಗ್ರಾಮದಲ್ಲಿ ಸಾಹಿತಿ ಸಿದ್ಧಲಿಂಗಯ್ಯ ಅವರಿಗೆ ಪೊಲೀಸ್ ಬ್ಯಾಂಡ್​ನಿಂದ ರಾಷ್ಟ್ರಗೀತೆ ನುಡಿಸಿ ಮತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಅಂತಿಮ ನಮನ ಸಲ್ಲಿಸಲಾಯಿತು. ಮಗ ಗೌತಮ್​​ ಸಾಹಿತಿ ಸಿದ್ಧಲಿಂಗಯ್ಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಸಾಹಿತಿಗಳ ಹೋರಾಟದ ಹಾಡಿನೊಂದಿಗೆ ಅಭಿಮಾನಿಗಳು ನೆನೆದು ಕಣ್ಣೀರು ಹಾಕಿದರು.

ಅಂತ್ಯಕ್ರಿಯೆ ವೇಳೆ ಡಿಸಿಎಂ ಅಶ್ವಥ್ ನಾರಾಯಣ್, ಶಾಸಕ ಮುನಿರತ್ನ, ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಜಿಲ್ಲಾಧಿಕಾರಿ ಮಂಜುನಾಥ್​ರಿಂದ ಹೂಗುಚ್ಚ ಇಟ್ಟು ಅಂತಿಮ ನಮನ ಸಲ್ಲಿಸಿದರು.

ಓದಿ : ಮೃಧುಭಾಷಿ, ಹಾಸ್ಯಪ್ರಿಯ, ಕ್ರಾಂತಿ ಗೀತೆಯ ಹರಿಕಾರ ಸಿದ್ದಲಿಂಗಯ್ಯ ನಡೆದು ಬಂದ ಹಾದಿ ಇದು

Last Updated : Jun 12, 2021, 2:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.