ETV Bharat / state

ಮೇಲ್ಮನೆಗೆ ಕಣಕ್ಕಿಳಿಯದ ಹೆಚ್ಚುವರಿ ಅಭ್ಯರ್ಥಿಗಳು.. ಎಲ್ಲ ಸ್ಪರ್ಧಾಳುಗಳ ಅವಿರೋಧ ಆಯ್ಕೆ ಖಚಿತ - Laxman Savadi nomination submitted to council election

ಬಿಜೆಪಿಯಿಂದ ನಾಮಪತ್ರ ಸಲ್ಲಿಸಿರುವ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಛಲವಾದಿ ನಾರಾಯಣ ಸ್ವಾಮಿ, ಹೇಮಲತಾ ನಾಯಕ್ ಹಾಗೂ ಕೇಶವ ಪ್ರಸಾದ್. ಕಾಂಗ್ರೆಸ್​ನಿಂದ ನಾಗರಾಜ ಯಾದವ್ ಮತ್ತು ಅಬ್ದುಲ್ ಜಬ್ಬಾರ್ ಜಾತ್ಯತೀತ ಜನತಾದಳದಿಂದ ಟಿ. ಎ ಶರವಣ ಅಧಿಕೃತ ಅಭ್ಯರ್ಥಿಗಳಾಗಿ ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರಗಳು ಕ್ರಮಬದ್ಧವಾದರೆ ಅಭ್ಯರ್ಥಿಗಳಾದ ಇವರೆಲ್ಲರೂ ಚುನಾವಣೆ ಇಲ್ಲದೇ ವಿಧಾನ ಪರಿಷತ್ ಪ್ರವೇಶ ಪಡೆಯಲಿದ್ದಾರೆ.

ಬಿಜೆಪಿ ಅಭ್ಯರ್ಥಿಗಳು
ಬಿಜೆಪಿ ಅಭ್ಯರ್ಥಿಗಳು
author img

By

Published : May 24, 2022, 10:44 PM IST

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಶಾಸಕರ ಸಂಖ್ಯೆಗನುಸಾರವಾಗಿ ಗೆಲ್ಲಲು ಸಾಧ್ಯವಿರುವಷ್ಟು ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಇದರಿಂದ ಚುನಾವಣೆಗೆ ಸ್ಪರ್ಧಿಸಿರುವ ಎಲ್ಲ 7 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

laxman-savadi-nomination-submitted-to-council-election
ಬಿಜೆಪಿಯಿಂದ ಹೇಮಲತಾ ನಾಯಕ್ ನಾಮಪತ್ರ ಸಲ್ಲಿಸಿರುವುದು

ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಬಿಜೆಪಿಯ 4, ಕಾಂಗ್ರೆಸ್ 2 ಹಾಗೂ ಜೆಡಿಎಸ್ ನ 1 ಅಭ್ಯರ್ಥಿ ಮಾತ್ರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕಡೆಯ ದಿನವಾದ ಹೆಚ್ಚುವರಿ ಅಭ್ಯರ್ಥಿಗಳು ಯಾರೂ ಉಮೇದುವಾರಿಕೆ ಸಲ್ಲಿಸಲಿಲ್ಲ. 7 ಜನ ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರ ನಾಳೆ 25 ರಂದು ನಡೆಯುವ ಪರಿಶೀಲನೆಯಲ್ಲಿ ಕ್ರಮಬದ್ಧವಾದರೆ ಚುನಾವಣೆ ಇಲ್ಲದೇ ಎಲ್ಲ 7 ಜನ ಅಭ್ಯರ್ಥಿಗಳು ಸರ್ವಾನುಮತದಿಂದ ಆಯ್ಕೆಯಾದಂತಾಗುತ್ತದೆ. ಅವಿರೋಧ ಆಯ್ಕೆ ಬಗ್ಗೆ ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಂತಾಗುತ್ತದೆ.

ನಾಮಪತ್ರ ಸಲ್ಲಿಸಿದ ಟಿ. ಎ ಶರವಣ

ಬಿಜೆಪಿಯಿಂದ ನಾಮಪತ್ರ ಸಲ್ಲಿಸಿರುವ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಛಲವಾದಿ ನಾರಾಯಣ ಸ್ವಾಮಿ, ಹೇಮಲತಾ ನಾಯಕ್ ಹಾಗೂ ಕೇಶವ ಪ್ರಸಾದ್. ಕಾಂಗ್ರೆಸ್​ನಿಂದ ನಾಗರಾಜ ಯಾದವ್ ಮತ್ತು ಅಬ್ದುಲ್ ಜಬ್ಬಾರ್, ಜಾತ್ಯತೀತ ಜನತಾದಳದಿಂದ ಟಿ. ಎ ಶರವಣ ಅಧಿಕೃತ ಅಭ್ಯರ್ಥಿಗಳಾಗಿ ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರಗಳು ಕ್ರಮಬದ್ಧವಾದರೆ ಅಭ್ಯರ್ಥಿಗಳಾದ ಇವರೆಲ್ಲರೂ ಚುನಾವಣೆ ಇಲ್ಲದೇ ವಿಧಾನ ಪರಿಷತ್ ಪ್ರವೇಶ ಪಡೆಯಲಿದ್ದಾರೆ.

ನಾಗರಾಜ ಯಾದವ್ ಇದ್ದಾರೆ

ಮೇಲ್ಮನೆಗೆ ಆಯ್ಕೆಯಾಗಲು ಒಬ್ಬ ಅಭ್ಯರ್ಥಿಗೆ 29 ಶಾಸಕರ ಮತಗಳ ಅಗತ್ಯತೆ ಇದೆ. ಈ ಸಂಖ್ಯೆಗನುಗುಣವಾಗಿ ವಿಧಾನಸಭೆಯಲ್ಲಿ 122 ಶಾಸಕರನ್ನು ಹೊಂದಿದ ಬಿಜೆಪಿ 4 ಅಭ್ಯರ್ಥಿಗಳನ್ನ, 70 ಶಾಸಕರನ್ನ ಹೊಂದಿರುವ ಕಾಂಗ್ರೆಸ್ 2 ಅಭ್ಯರ್ಥಿಗಳನ್ನ ಹಾಗೂ 32 ಶಾಸಕರ ಬಲ ಇರುವ ಜೆಡಿಎಸ್ ಒಬ್ಬ ಅಭ್ಯರ್ಥಿಯನ್ನ ಕಣಕ್ಕಿಳಿಸಿದೆ. ಹೆಚ್ಚುವರಿ ಅಭ್ಯರ್ಥಿಗಳನ್ನ ಯಾವ ಪಕ್ಷವೂ ನಿಲ್ಲಿಸದೇ ಇರುವುದರಿಂದ ಅವಿರೋಧ ಆಯ್ಕೆಗೆ ಅವಕಾಶ ಸಿಕ್ಕಂತಾಗಿದೆ.

ಮೇ ತಿಂಗಳ 27 ರಂದು ನಾಮಪತ್ರ ವಾಪಸ್​ ಪಡೆಯಲು ಕಡೆಯ ದಿನವಾಗಿದೆ. ಅಂದು ಮದ್ಯಾಹ್ನ 3 ಗಂಟೆಯವರೆಗೆ ಕಾದು ನೋಡಿ ನಂತರ ಚುನಾವಣಾಧಿಕಾರಿಗಳು ಅಧಿಕೃತವಾಗಿ ಅವಿರೋಧ ಆಯ್ಕೆ ಪ್ರಕಟಿಸಲಿದ್ದಾರೆ.

ಓದಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 14ನೇ ವಾರ್ಷಿಕೋತ್ಸವದ ಸಂಭ್ರಮ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.