ETV Bharat / state

ಕಕ್ಷಿದಾರರಿಗೆ ವಂಚನೆ ಆರೋಪ: ವಕೀಲರ ಪತ್ನಿ, ಪುತ್ರನಿಗೆ ಜಾಮೀನು

ಕಕ್ಷಿದಾರರಿಗೆ ಹೈಕೋರ್ಟ್‌ನ ನಕಲಿ ಆದೇಶ ಪ್ರತಿ ಕಳುಹಿಸಿ ವಂಚಿಸಿದ ಆರೋಪ ಪ್ರಕರಣದಲ್ಲಿ ವಕೀಲರ ಪತ್ನಿ ಹಾಗೂ ಪುತ್ರನಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಹೈಕೋರ್ಟ್
ಹೈಕೋರ್ಟ್
author img

By

Published : Nov 17, 2022, 8:52 PM IST

ಬೆಂಗಳೂರು: ವಕೀಲರೊಬ್ಬರು ತಮ್ಮ ಕಕ್ಷಿದಾರರಿಗೆ ಹೈಕೋರ್ಟ್‌ನ ನಕಲಿ ಆದೇಶ ಪ್ರತಿ ಕಳುಹಿಸಿ ವಂಚಿಸಿದ ಆರೋಪ ಪ್ರಕರಣದಲ್ಲಿ ವಕೀಲರ ಪತ್ನಿ ಹಾಗೂ ಪುತ್ರನಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ವಕೀಲರ ಪತ್ನಿ ಉಮಾದೇವಿ ಮುರುಗೇಶ್ ಮತ್ತು ಪುತ್ರ ಬಸವರಾಜು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ.ರಾಜೇಂದ್ರ ಬದಾಮಿಕರ್ ಅವರಿದ್ದ ಏಕಸದಸ್ಯ ಪೀಠ ಜಾಮೀನು ಅರ್ಜಿಯನ್ನು ಪುರಸ್ಕರಿಸಿದೆ.

ಪ್ರಕರಣದ ಮೊದಲ ಆರೋಪಿಯಾಗಿರುವ ವಕೀಲನ ವಿರುದ್ಧ ಕೋರ್ಟ್ ಆದೇಶ ನಕಲು ಮಾಡಿ, ದೂರುದಾರರಿಗೆ ವಾಟ್ಸ್ ಆ್ಯಪ್ ಮೂಲಕ ಕಳುಹಿಸಿದ ಆರೋಪವಿದೆ. ಕೇಸ್ ನಡೆಸಲು ವಕೀಲರಿಗೆ ನೀಡಿದ್ದ ಹಣವನ್ನು ಅವರ ಪತ್ನಿ ಹಾಗೂ ಮಗ ಪಡೆದಿದ್ದರೆಂದು ದೂರುದಾರರು ಆರೋಪಿಸಿದ್ದರೂ, ಅದನ್ನು ಸಾಬೀತುಪಡಿಸುವ ಯಾವೊಂದು ದಾಖಲೆಯನ್ನೂ ಪ್ರಾಸಿಕ್ಯೂಷನ್ ಒದಗಿಸಿಲ್ಲ ಎಂದು ಅಭಿಪ್ರಾಯಪಟ್ಟು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಅಲ್ಲದೆ, ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ನೇರ ಆರೋಪವಿಲ್ಲ. ಒಂದನೇ ಆರೋಪಿಯ ವಿರುದ್ಧ ನಕಲು ಮತ್ತು ವಂಚನೆಯ ಪ್ರಮುಖ ಆರೋಪಗಳನ್ನು ಮಾಡಲಾಗಿದೆ. ಹಾಗಾಗಿ ಇದರಲ್ಲಿ ಅರ್ಜಿದಾರರು ಮತ್ತು ಅವರ ಪುತ್ರನ ಪಾತ್ರ ಮೇಲ್ನೋಟಕ್ಕೆ ಕಂಡುಬರುತ್ತಿಲ್ಲವೆಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ತಾನು ಹೈಕೋರ್ಟ್‌ನಲ್ಲಿ ಎರಡು ಕೇಸುಗಳನ್ನು ದಾಖಲಿಸಿದ್ದೆ, ಅದಕ್ಕಾಗಿ ವಕೀಲರಿಗೆ ಡಿಡಿ ನಗದು ಮತ್ತು ಚೆಕ್ ಮೂಲಕ 10 ಲಕ್ಷ ರೂ. ನೀಡಿದ್ದೆ. ಆದರೆ, ಹೈಕೋರ್ಟ್ ಸೀಲ್ ಮತ್ತು ರಿಜಿಸ್ಟ್ರಾರ್ ಸಹಿ ನಕಲು ಮಾಡಿ, ತಾವೇ ಕೋರ್ಟ್ ಆದೇಶವನ್ನು ಸೃಷ್ಟಿಸಿ ವಾಟ್ಸಪ್ ಮೂಲಕ ಕಳುಹಿಸಿಕೊಟ್ಟಿದ್ದರು. ಆದರೆ ಹೈಕೋರ್ಟ್ ವೆಬ್ ಸೈಟ್​​ನಲ್ಲಿ ಪರಿಶೀಲಿಸಿದಾಗ ಅಂತಹ ಆದೇಶವೇ ಆಗಿರಲಿಲ್ಲ. ಆ ಬಗ್ಗೆ ವಕೀಲರನ್ನು ಕೇಳಿದಾಗ ಕೋವಿಡ್ ಕಾರಣಕ್ಕೆ ಕೆಲ ಆದೇಶಗಳು ಅಪ್ಲೋಡ್ ಆಗಿಲ್ಲ ಎಂದು ಸುಳ್ಳು ಹೇಳಿದ್ದರು. ಆ ನಂತರ ಸಂಶಯ ವ್ಯಕ್ತಪಡಿಸಿದಾಗ ಅವಾಚ್ಯ ಪದಗಳಿಂದ ನಿಂದಿಸಿದ್ದರು ಮತ್ತು ಹಣವನ್ನೂ ನೀಡಲಿಲ್ಲ. ಹಾಗಾಗಿ ವಕೀಲರ ವಿರುದ್ಧ ವಂಚನೆ, ನಕಲು ಆರೋಪದಡಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

(ಓದಿ: ರಸ್ತೆ ಅಪಘಾತದಲ್ಲಿ ಅಂಗವೈಕಲ್ಯಕ್ಕೆ ಒಳಗಾಗಿದ್ದ ಇಂಜಿನಿಯರ್​​ಗೆ 44 ಲಕ್ಷ ಪರಿಹಾರ ಕೊಡಿಸಿದ ಹೈಕೋರ್ಟ್ )

ETV Bharat Logo

Copyright © 2024 Ushodaya Enterprises Pvt. Ltd., All Rights Reserved.