ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನ (ಎಚ್‌ಎಎಲ್) ನಿರ್ದೇಶಕ ಅಲೋಕ್ ವರ್ಮಾ ಅವರು ಎಚ್‌ಎಎಲ್-ಐಐಎಸ್ಸಿ ಕೌಶಲ್ಯ ಅಭಿವೃದ್ಧಿ ಕೇಂದ್ರದ ಅಡಿಯಲ್ಲಿ ಆಯೋಜಿಸಲಾಗುತ್ತಿರುವ ಐಒಟಿ ಮತ್ತು ಎಂಬೆಡೆಡ್ ಅಪ್ಲಿಕೇಶನ್‌ಗಳ ತರಬೇತಿ ಕಾರ್ಯಕ್ರಮವನ್ನು ಚಿತ್ರದುರ್ಗದ ಚಳ್ಳಕೆರೆಯಲ್ಲಿ ಪ್ರಾರಂಭಿಸಿದರು.
ವರ್ಚುವಲ್ ಕಾನ್ಫರೆನ್ಸ್ ಮೂಲಕ ಎಚ್‌ಎಎಲ್ ಜನರಲ್ ಮ್ಯಾನೇಜರ್ ವೆಂಕಟೇಶ್ವರ ರಾವ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಡೀನ್ ಪ್ರೊ. ಎಸ್.ಕೆ.ಸತೀಶ್ ಸಮ್ಮುಖದಲ್ಲಿ ಕಾರ್ಯಾಗಾರ ಪ್ರಾರಂಭಿಸಲಾಯಿತು.
"ಎಚ್‌ಎಎಲ್-ಐಐಎಸ್ಸಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವು ಮಹತ್ವಾಕಾಂಕ್ಷೆಯದ್ದಾಗಿದ್ದು, ಇದು ಅಗತ್ಯ ತರಬೇತಿ ನೀಡುವ ಮೂಲಕ ದೇಶದ ಅಗತ್ಯಗಳನ್ನು ಪೂರೈಸುತ್ತದೆ" ಎಂದು ವರ್ಮಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೇಳಿದರು.
ಡಿಸೆಂಬರ್ 2020ರಿಂದ ಫೆಬ್ರವರಿ 2021ರವರೆಗೆ ವರ್ಚುವಲ್ ಮೋಡ್‌ನಲ್ಲಿ ಐದು ಕೋರ್ಸ್‌ಗಳೊಂದಿಗೆ ತರಬೇತಿ ಪ್ರಾರಂಭವಾಗುತ್ತದೆ ಎಂದು ಎಚ್‌ಎಎಲ್-ಐಐಎಸ್ಸಿ ಎಸ್‌ಡಿಸಿ ಕನ್ವೀನರ್ ಡಾ.ಸುಬ್ಬಾ ರೆಡ್ಡಿ ಬಿ ಹೇಳಿದರು.