ಬೆಂಗಳೂರು: ಕೆಲಸ ಮಾಡುತ್ತಿದ್ದ ಮಾಲೀಕನ ಅಂಗಡಿಯಲ್ಲಿಯೇ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ವೇಣು ಕುಮಾರ್ ಬಂಧಿತ ಆರೋಪಿ. ಮಿಟ್ರ್ಸಿ ಮೈಂಡ್ ಐಟಿ ಅಂಡ್ ಇಂಜಿನಿಯರಿಂಗ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ನಲ್ಲಿ ಈತ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಅದೇ ಅಂಗಡಿಯಲ್ಲಿ ಮಾಲೀಕನಿಲ್ಲದ ವೇಳೆ ಲ್ಯಾಪ್ಟಾಪ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನ ಕಳ್ಳತನ ಮಾಡಿದ್ದಾನೆ. ಈ ಸಂಬಂಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನದ ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವೇಣು ಕುಮಾರ್ನನ್ನು ವಿಚಾರಣೆ ನಡೆಸಿದಾಗ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ.
ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು, 25 ಲಕ್ಷ ರೂ. ಮೌಲ್ಯದ 21 ಲ್ಯಾಪ್ಟಾಪ್, 21 ಮಾನೀಟರ್, 79 ರ್ಯಾಮ್, 43 ಹಾರ್ಡ್ ಡಿಸ್ಕ್, 18 ಕೀ ಬೋರ್ಡ್, 21 ಪ್ರೊಸೆಸರ್ ಹಾಗೂ 12 ಮದರ್ ಬೋರ್ಡ್ಗಳನ್ನು ವಶಕ್ಕೆ ಪಡೆದಿದ್ದಾರೆ.