ಬೆಂಗಳೂರು: ಪರಿಚಯಸ್ಥರ ಸೋಗಿನಲ್ಲಿ ಹಾಡಹಾಗಲೇ ಪೇಯಿಂಗ್ ಗೆಸ್ಟ್ಗೆ ನುಗ್ಗಿದ ಖದೀಮನೊಬ್ಬ ಲ್ಯಾಪ್ ಟಾಪ್ ಕಳ್ಳತನ ಮಾಡಿದ್ದಾನೆ.
ನಗರದ ಖಾಸಗಿ ಕಾಲೇಜಿನಲ್ಲಿ ಕಳೆದ ವರ್ಷವಷ್ಟೇ ಎಂಜಿನಿಯರಿಂಗ್ ವ್ಯಾಸಂಗ ಮುಗಿಸಿದ್ದ ಹರಿಪ್ರಸಾದ್ ಲ್ಯಾಪ್ಟಾಪ್ ಕಳೆದುಕೊಂಡಿದ್ದಾರೆ. ಅವರು ನಗರದ ಹೆಚ್ಆರ್ಬಿಆರ್ ಲೇಔಟ್ನ ಹೆಬಿಟೇಟ್ ಬಾಯ್ಸ್ ಪಿಜಿಯಲ್ಲಿ ಉಳಿದುಕೊಂಡಿದ್ದು, ಕಳೆದ ತಿಂಗಳು 29 ರಂದು ಕಳ್ಳತನ ನಡೆದಿದೆ.
ಹರಿಪ್ರಸಾದ್ ಕಳೆದ ವರ್ಷ ಎಂಜಿನಿಯರಿಂಗ್ ಮುಗಿಸಿದ್ದರೂ ಕೆಲಸ ಸಿಕ್ಕಿರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಮನೆಯಲ್ಲೇ ಪಾರ್ಟ್ ಟೈಂ ಕೆಲಸ ಮಾಡ್ತಿದ್ದ. ಇನ್ನು ತನ್ನ ಕೆಲಸಕ್ಕೆ ಅವಶ್ಯವಿರುವ ಲಾಪ್ ಟಾಪ್ಅನ್ನು ಕೊಳ್ಳಲು ತಾಯಿಯ ಬಳಿ 5 ಸಾವಿರ ಹಣ ಪಡೆದು ಇಎಂಐನಲ್ಲಿ 40 ಸಾವಿರ ರೂಪಾಯಿ ಮೌಲ್ಯದ ಹೆಚ್ಪಿ ಕಂಪೆನಿಯ ಲ್ಯಾಪ್ಟಾಪ್ ಖರೀದಿಸಿದ್ದ.
ಬಾಣಸವಾಡಿ, ಹೆಣ್ಣೂರು, ಇಂದಿರಾನಗರ ಜೀವನ ಭೀಮಾನಗರ ಹಲಸೂರು ಭಾಗದಲ್ಲಿ ವಿದೇಶಿಯರು, ಉತ್ತರ ಭಾರತೀಯ ಟೆಕ್ಕಿಗಳು ವಾಸವಿರೋ ಪಿಜಿಗಳೇ ಹೆಚ್ಚಾಗಿದ್ದು, ಕಳ್ಳತನ ಪ್ರಕರಣಗಳು ದುಪ್ಪಟ್ಟಾಗಿವೆ. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.