ETV Bharat / state

ಯುದ್ಧ ವಿಮಾನಗಳ ಉಪಕರಣ ಸಂಸ್ಥೆಗೆ ಭೂಮಿ ಮಂಜೂರು : ಈಟಿವಿ ಭಾರತಕ್ಕೆ ಎಡಿಡಿ ಸಂಸ್ಥೆ ಧನ್ಯವಾದ - ಎಡಿಡಿ ನಿರ್ದೇಶಕ ಗಿರೀಶ್

ಈ ಬಗ್ಗೆ ವರದಿ ಮಾಡಿ ಎಡಿಡಿ ಸಂಸ್ಥೆಗೆ ಕೈಗಾರಿಕಾ ಭೂಮಿ ಮಂಜೂರು ವಿಚಾರವಾಗಿ ಸರ್ಕಾರದ ಕಣ್ಣು ತೆರೆಸಿದ ಈಟಿವಿ ಭಾರತಕ್ಕೆ ಗಿರೀಶ್​ ಧನ್ಯವಾದ ಸಲ್ಲಿಸಿದರು. ಕಂಪನಿಯು ದೇವನಹಳ್ಳಿಯಲ್ಲಿನ ಏರೋಸ್ಪೇಸ್ ಪಾರ್ಕ್​ನಲ್ಲಿ ಭೂಮಿ ಮಂಜೂರಾತಿಗಾಗಿ ಕಾಯುತ್ತಿದೆ..

ADD thanks to ETV Bharat
ಈಟಿವಿ ಭಾರತಕ್ಕೆ ಎಡಿಡಿ ಸಂಸ್ಥೆ ಧನ್ಯವಾದ
author img

By

Published : Jun 4, 2021, 9:18 PM IST

ಬೆಂಗಳೂರು : ಎಡಿಡಿ ಎಂಜಿನಿಯರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ತನ್ನ ಉತ್ಪಾದನಾ ಘಟಕ ಸ್ಥಾಪನೆಗೆ ತುಮಕೂರು ಮಶಿನ್ ಟೂಲ್ಸ್ ಪಾರ್ಕ್​ನಲ್ಲಿ ಕೆಐಎಡಿಬಿ ಭೂಮಿ ಮಂಜೂರು ಮಾಡಿದೆ.

ಈಟಿವಿ ಭಾರತಕ್ಕೆ ಎಡಿಡಿ ಸಂಸ್ಥೆ ಧನ್ಯವಾದ..

ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಗಿರೀಶ್, ಎಡಿಡಿ ಎಂಜಿನಿಯರಿಂಗ್ ಹೆಚ್ಎಎಲ್ ತಯಾರಿಸುವ ತೇಜಸ್ ಯುದ್ಧ ವಿಮಾನ ಮತ್ತು ಇದರ ಇನ್ನಿತರೆ ವರ್ಗಗಳಿಗೆ ಕಟ್ಟಿಂಗ್ ಟೂಲ್ ಸಲೂಶನ್ಸ್ ಪೂರೈಕೆ ಮಾಡಲಿದೆ. ಎಡಿಜಿಇ(ಎಡ್ಜ್) ಗ್ರೂಪ್ ಪಿಜೆಜಿಇ ಸಂಸ್ಥೆಯು 2019ರಲ್ಲಿ ಆರಂಭವಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಅಬುದಾಬಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ.

ಈ ಸಂಸ್ಥೆಯ ಮಾಲೀಕತ್ವವನ್ನು ಎಮಿರಾಟಿ ಮೂಲದ ಉದ್ದಿಮೆಗಳು ಹೊಂದಿವೆ. ಸರ್ಕಾರದಿಂದ ಭೂಮಿ ಪಡೆಯಲು ಕಂಪನಿ ಕಳೆದ ಎರಡು ವರ್ಷಗಳಿಂದ ಹರಸಾಹಸ ಪಟ್ಟಿತ್ತು. ಮೊದಲಿಗೆ ನೆಲಮಂಗಲ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ನೀಡುವಂತೆ ಕೆಎಸ್ಎಸ್ಐಡಿಸಿಗೆ ಮನವಿ ಮಾಡಿದ್ದೆವು.

ಆದರೆ, ಕೆಎಸ್ಎಸ್ಐಡಿಸಿ ಈ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲೇ ಇಲ್ಲ. ಹಲವಾರು ಪ್ರಯತ್ನಗಳ ನಂತರ ಇಂದು ಮಹತ್ವದ ಯೋಜನೆ ಪರಿಗಣಿಸಿದ ರಾಜ್ಯ ಸರ್ಕಾರ ಭೂಮಿಗಾಗಿ ಕೆಐಎಡಿಬಿಗೆ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿತ್ತು.

'ಈಟಿವಿ ಭಾರತ' ಇಂಪ್ಯಾಕ್ಟ್: ಏರೋ ಇಂಡಿಯಾ 2021ರಲ್ಲಿ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದ ಎಡಿಡಿ ಸಂಸ್ಥೆ

ಈ ಬಗ್ಗೆ ವರದಿ ಮಾಡಿ ಎಡಿಡಿ ಸಂಸ್ಥೆಗೆ ಕೈಗಾರಿಕಾ ಭೂಮಿ ಮಂಜೂರು ವಿಚಾರವಾಗಿ ಸರ್ಕಾರದ ಕಣ್ಣು ತೆರೆಸಿದ ಈಟಿವಿ ಭಾರತಕ್ಕೆ ಗಿರೀಶ್​ ಧನ್ಯವಾದ ಸಲ್ಲಿಸಿದರು. ಕಂಪನಿಯು ದೇವನಹಳ್ಳಿಯಲ್ಲಿನ ಏರೋಸ್ಪೇಸ್ ಪಾರ್ಕ್​ನಲ್ಲಿ ಭೂಮಿ ಮಂಜೂರಾತಿಗಾಗಿ ಕಾಯುತ್ತಿದೆ.

ಸೇವಾವಲಯ, ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಗಳಿಗೆ ಈ ಸಂಸ್ಥೆಯು ಹೂಡಿಕೆ ಮಾಡುತ್ತದೆ. ಇದಕ್ಕೆ ರಾಜ್ಯ ಮಾಲೀಕತ್ವದ ಉದ್ದಿಮೆ (ಎಸ್ಒಇ) ಮಾನ್ಯತೆ ನೀಡಲಾಗಿದೆ ಎಂದು ಗಿರೀಶ್​ ಮಾಹಿತಿ ನೀಡಿದ್ದಾರೆ.

ಎಡಿಡಿ ಎಂಜಿನಿಯರಿಂಗ್ ಮತ್ತು ಅಬುದಾಬಿಯ ಎಡಿಜಿಇ ಗ್ರೂಪ್ ಒಪ್ಪಂದ : ಎಡಿಡಿ ಎಂಜಿನಿಯರಿಂಗ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್‌ನ ಮಾತೃ ಸಂಸ್ಥೆಯಾದ ಎಡಿಡಿ ಎಂಜಿನಿಯರಿಂಗ್ ಜಿಎಂಬಿಹೆಚ್ ಯುಎಇ ಮೂಲದ ರಕ್ಷಣಾ ಕ್ಷೇತ್ರದ ಉದ್ಯಮವಾದ ಎಡಿಜಿಇ ಗ್ರೂಪ್ ಪಿಜೆಜಿಇ ಜತೆಯಲ್ಲಿ ಪರಸ್ಪರ ಒಪ್ಪಂದಕ್ಕೆ ಸಹಿ ಮಾಡಿದೆ.

ರಕ್ಷಣಾ ವೈಮಾನಿಕ ಕ್ಷೇತ್ರದಲ್ಲಿನ ನಿರ್ವಹಣೆ, ದುರಸ್ಥಿ ಮತ್ತು ಓವರ್ ಹೌಲ್ (ಎಂಆರ್ ಒ)ದ ಕಾರ್ಯಕ್ಷಮತೆ ಸುಧಾರಣೆ ಮಾಡುವುದು. ಉತ್ಪಾದನೆಯನ್ನು ಹೆಚ್ಚಳ ಮಾಡುವ ನಿರ್ಣಾಯಕ ತಂತ್ರಜ್ಞಾನವನ್ನು ಹಂಚಿಕೊಳ್ಳುವ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿದೆ.

ಈ ಒಪ್ಪಂದವು ಎರಡು ವರ್ಷಗಳವರೆಗೆ ಜಾರಿಯಲ್ಲಿರಲಿದೆ. ಎಡಿಡಿ ಎಂಜಿನಿಯರಿಂಗ್ ಪರವಾಗಿ ನೊರ್ಬರ್ಟ್ ಕ್ರೆಲ್ಲರ್, ವರ್ನರ್ ಗ್ರೆಕ್ಸಾ, ಅಲೆಕ್ಸಾಂಡರ್ ಲೊಕ್ಟೆವ್ ಹಾಗೂ ಇಡಿಜಿಇ ಪರವಾಗಿ ಮೊಹ್ಮದ್ ಅಲ್ ರಶೀದ್ ಮತ್ತು ಇತರರು ಒಪ್ಪಂದಕ್ಕೆ ಸಹಿ ಹಾಕಿದರು. ಎಡಿಜಿಇ ಒಂದು ಖಾಸಗಿ ಸಂಸ್ಥೆಯಾಗಿದ್ದು, ಅಬುದಾಬಿಯಲ್ಲಿ ತನ್ನ ಕೇಂದ್ರ ಕಚೇರಿ ಹೊಂದಿದೆ.

ಓದಿ:ಇದೇನಾ ಆತ್ಮನಿರ್ಭರ? 2 ವರ್ಷದಿಂದ ಜಾಗ ಸಿಗದೆ ಯುದ್ಧ ವಿಮಾನ ಉಪಕರಣ ತಯಾರಿಕಾ ಸಂಸ್ಥೆ ಪರದಾಟ!!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.