ETV Bharat / state

ಶಿಕ್ಷಣ ಸಂಸ್ಥೆ ನಿರ್ಮಾಣಕ್ಕೆ ಜಮೀನು ಮಂಜೂರು : ಕಟ್ಟಡ ನಿರ್ಮಿಸದ ಹಿನ್ನೆಲೆ ಭೂಮಿ ಹಿಂಪಡೆದ ಕ್ರಮ ಎತ್ತಿಹಿಡಿದ ಹೈಕೋರ್ಟ್

author img

By ETV Bharat Karnataka Team

Published : Oct 17, 2023, 7:38 AM IST

ಶೈಕ್ಷಣಿಕ ಕಟ್ಟಡ ನಿರ್ಮಾಣಕ್ಕೆಂದು ಮಂಜೂರು ಮಾಡಲಾಗಿದ್ದ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡದ್ದಕ್ಕೆ ಜಮೀನು ಹಿಂಪಡೆದ ಕೆಎಚ್​ಬಿ ಕ್ರಮವನ್ನು ಹೈಕೋರ್ಟ್​ ಎತ್ತಿ ಹಿಡಿದಿದೆ.

land-issued-for-education-institution-was-taken-back-by-khb
ಶಿಕ್ಷಣ ಸಂಸ್ಥೆ ನಿರ್ಮಾಣಕ್ಕೆ ಜಮೀನು ಮಂಜೂರು : ಕಟ್ಟಡ ನಿರ್ಮಿಸದ ಹಿನ್ನೆಲೆ ಜಮೀನು ಹಿಂಪಡೆದಿದ್ದ ಕ್ರಮ ಎತ್ತಿಹಿಡಿದ ಹೈಕೋರ್ಟ್

ಬೆಂಗಳೂರು : ಶೈಕ್ಷಣಿಕ ಕಟ್ಟಡ ನಿರ್ಮಿಸುವ ಉದ್ದೇಶಕ್ಕೆಂದು ನಾಗರಿಕ ಸೌಲಭ್ಯ ನಿವೇಶನ (ಸಿಎ) ಪಡೆದು 20 ವರ್ಷಗಳೇ ಕಳೆದರೂ ಕಟ್ಟಡ ನಿರ್ಮಾಣ ಮಾಡದ್ದಕ್ಕೆ ದಿವ್ಯಾ ಜ್ಯೋತಿ ವಿದ್ಯಾಕೇಂದ್ರಕ್ಕೆ ಮಂಜೂರು ಮಾಡಿದ್ದ ಜಮೀನನ್ನು ಹಿಂಪಡೆದಿದ್ದ ಕರ್ನಾಟಕ ವಸತಿ ಮಂಡಳಿ (ಕೆಎಚ್‌ಬಿ) ಕ್ರಮವನ್ನು ಹೈಕೋರ್ಟ್‌ ವಿಭಾಗೀಯ ಪೀಠ ಎತ್ತಿಹಿಡಿದಿದೆ.

ಕೆಎಚ್‌ಬಿ ಹೊರಡಿಸಿದ್ದ ನಿವೇಶನ ಮಂಜೂರಾತಿ ರದ್ದತಿ ಆದೇಶ ಪುರಸ್ಕರಿಸಿದ್ದ ಏಕ ಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ದಿವ್ಯಾ ಜ್ಯೋತಿ ವಿದ್ಯಾಕೇಂದ್ರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠ ಆದೇಶಿಸಿದೆ. ಶೈಕ್ಷಣಿಕ ಕಟ್ಟಡ ನಿರ್ಮಾಣ ಮಾಡಬೇಕೆಂಬ ನಿರ್ದಿಷ್ಟ ಉದ್ದೇಶಕ್ಕೆ ಸಾರ್ವಜನಿಕ ಸ್ವತ್ತನ್ನು (ಸಿಎ ನಿವೇಶನ) ಮಂಜೂರು ಮಾಡಿದರೆ, ಆ ಆದೇಶವನ್ನು ಅರ್ಜಿದಾರ ಸಂಸ್ಥೆ ಪೂರೈಸಿಲ್ಲ. ಇಂತಹ ಸಂದರ್ಭದಲ್ಲಿ ನಿವೇಶನ ಮಂಜೂರಾತಿ ಆದೇಶವನ್ನು ಉಳಿಸುವುದು ಸಾರ್ವಜನಿಕ ಹಿತಾಸಕ್ತಿಯ ವಿರೋಧಿ ಕ್ರಮವಾಗಲಿದೆ ಎಂದು ಪೀಠ ತಿಳಿಸಿದೆ.

ಅಲ್ಲದೆ, ಸಮಾಜದ ಶೈಕ್ಷಣಿಕ ಅಗತ್ಯತೆ ಪೂರೈಸುವುದು ಸಂವಿಧಾನದ ಆಶಯವಾಗಿದೆ. ಶೈಕ್ಷಣಿಕ ಕಟ್ಟಡ ನಿರ್ಮಾಣ ಮಾಡದೆ ನಿವೇಶನ ಮಂಜೂರಾತಿಯ ಷರತ್ತುನ್ನು ಉಲ್ಲಂಘನೆ ಮಾಡಿದಾಗ ಉದಾರತೆ ಪ್ರದರ್ಶಿಸುವುದು ತಪ್ಪಾದ ಸಹಾನುಭೂತಿಗೆ ಉದಾಹರಣೆಯಾಗಲಿದೆ. ಜತೆಗೆ, ನಿವೇಶನ ಮಂಜೂರಾತಿ ಷರತ್ತುಗಳ ದುರುಪಯೋಗವಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಅರ್ಜಿದಾರ ಸಂಸ್ಥೆಯು ನಿವೇಶನದ ಸ್ವಾಧೀನಾನುಭವನ್ನು ನಾಲ್ಕು ವಾರದಲ್ಲಿ ಕೆಎಚ್‌ಬಿ ವಶಕ್ಕೆ ನೀಡಬೇಕು. ಹಾಗೆಯೇ, ಕೆಎಚ್‌ಬಿ ಸಹ ಸಂಸ್ಥೆ ಪಾವತಿಸಿರುವ ಹಣವನ್ನು ಹಿಂದಿರುಗಿಸಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ : ಶಾಲಾ ಕಟ್ಟಡ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಲು ಕೋರಿ ಜ್ಯೋತಿ ವಿದ್ಯಾ ಕೇಂದ್ರವು 2003ರಲ್ಲಿ ಅರ್ಜಿ ಸಲ್ಲಿಸಿತ್ತು. 2013ರ ಡಿ.16ರಂದು 79,75,705 ರು.ಗೆ ಸಿಎ ನಿವೇಶನವನ್ನು ಮಂಜೂರು ಮಾಡಿತ್ತು. ಅದರಂತೆ 53,10,293 ರು.ವನ್ನು ಪಾವತಿ ಮಾಡಿದ್ದರಿಂದ ಸಂಸ್ಥೆಗೆ ಷರತ್ತುಬದ್ಧ ಕ್ರಯ ನೀಡಿ, 2005ರ ಅ.20ರಂದು ನಿವೇಶನವನ್ನು ಸ್ವಾಧೀನಾನುಭವಕ್ಕೆ ನೀಡಲಾಗಿತ್ತು. 2014ರ ಮಾ.12ರಂದು ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡಲು ಬಿಬಿಎಂಪಿಗೆ ಅರ್ಜಿ ಸಲ್ಲಿಸಲಾಗಿತ್ತು. ಬಿಬಿಎಂಪಿ ನಕ್ಷೆ ಮಂಜೂರಾತಿ ನೀಡಿತ್ತು. 2018ರಲ್ಲಿ ಕೆಎಚ್‌ಬಿಗೆ ಮನವಿ ಪತ್ರ ಸಲ್ಲಿಸಿ, ಪಿಲ್ಲರ್‌ ಮಟ್ಟಕ್ಕೆ ಕಟ್ಟಡ ನಿರ್ಮಾಣವು ತಲುಪಿದ್ದು, ಕಾಮಗಾರಿ ಪೂರ್ಣಗೊಳಿಸಲು ಸ್ವಲ್ಪ ಸಮಯ ವಿಸ್ತರಣೆ ಮಾಡಬೇಕು ಎಂದು ಕೋರಿದ್ದರು.

ಆದರೆ, 2018ರ ಅ.17ರಂದು ನಿವೇಶನ ಮಂಜೂರಾತಿಯನ್ನು ರದ್ದುಪಡಿಸಿ ಕೆಎಚ್‌ಬಿ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ 2018ರಲ್ಲಿ ಹೈಕೋರ್ಟ್‌ಗೆ ತರಕಾರು ಅರ್ಜಿ ಸಲ್ಲಿಸಿದ್ದ ವಿದ್ಯಾಕೇಂದ್ರವು, ಯಾವುದೇ ನೊಟೀಸ್‌ ನೀಡದೆ ಏಕಾಏಕಿ ನಿವೇಶನ ಮಂಜೂರಾತಿ ಆದೇಶ ರದ್ದುಪಡಿಸಲಾಗಿದೆ ಎಂದು ಆಕ್ಷೇಪಿಸಿತ್ತು. ನಿವೇಶನವನ್ನು ಸ್ವಾಧೀನಾನುಭವಕ್ಕೆ ನೀಡಿದ ನಂತರ ಎರಡು ವರ್ಷದಲ್ಲಿ ಶೈಕ್ಷಣಿಕ ಸಂಸ್ಥೆಯ ಕಟ್ಟಡ ಕಾಮಗಾರಿ ಪೂರ್ಣಗೊಳಿಸಬೇಕು. ಆದರೆ, 18 ವರ್ಷ ಕಳೆದರೂ ಕಟ್ಟಡ ನಿರ್ಮಾಣ ಪೂರ್ಣಗೊಳಿಸದೆ ನಿವೇಶನ ಮಂಜೂರಾತಿಯ ಷರತ್ತು ಉಲ್ಲಂಘಿಸಲಾಗಿದೆ ಎಂದು ಹೇಳಿದ್ದ ಏಕ ಸದಸ್ಯ ಪೀಠ, ಅರ್ಜಿ ವಜಾಗೊಳಿಸಿ 2023ರ ಜು.4ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ದಿವ್ಯಾ ಜ್ಯೋತಿ ವಿದ್ಯಾ ಕೇಂದ್ರವು ಮೇಲ್ಮನವಿ ಸಲ್ಲಿಸಿತ್ತು.

ಉಚಿತವಾಗಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಜಮೀನು ದಾನ ನೀಡಲು ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್ :

ಬೀದರ್​​ನಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ತಮ್ಮ ಮೂರು ಎಕರೆ ಜಮೀನನ್ನು ದಾನ ರೂಪದಲ್ಲಿ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬೀದರ್ ನಿವಾಸಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿ‌ ಆದೇಶಿಸಿದೆ. ಬೀದರ್‌ ನಿವಾಸಿ ವಿಶ್ವನಾಥಪ್ಪ ಎ. ಕದಾಡಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಸರ್ಕಾರವು ಸಾರ್ವಜನಿಕ ಉದ್ದೇಶಕ್ಕಾಗಿ ಖಾಸಗಿ ಜಮೀನನ್ನು ಕಡ್ಡಾಯವಾಗಿ ಸ್ವಾಧೀನಕ್ಕೆ ಪಡೆಯಬಹುದು. ಆದರೆ, ಉಚಿತವಾಗಿ ಸ್ವೀಕರಿಸುವಂತೆ ನ್ಯಾಯಾಲಯವು ಸರ್ಕಾರಕ್ಕೆ ಒತ್ತಾಯಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಬೀದರ್ ಜಿಲ್ಲಾಡಳಿತವು ಹೊಳಸೂರಿನಲ್ಲಿ 8 ಎಕರೆ 25 ಗುಂಟಾ ಜಾಗವನ್ನು ಆಡಳಿತ ಭವನ (ಮಿನಿ ವಿಧಾನ ಸೌಧ) ನಿರ್ಮಾಣಕ್ಕಾಗಿ ಖರೀದಿಸಿ ಆದೇಶ ಹೊರಡಿಸಿತ್ತು. ಕದಾಡಿ ಅವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಸರ್ಕಾರ ಗುರುತಿಸಿರುವ ಜಾಗದ ಸುತ್ತಮುತ್ತ ತಮಗೆ ಸೇರಿದ ಮೂರು ಎಕರೆ ಜಮೀನು ಇದೆ. ಮಿನಿ ವಿಧಾನಸೌಧ ಕಟ್ಟಡಕ್ಕಾಗಿ ಆ ಮೂರು ಎಕರೆಯನ್ನು ಸರ್ಕಾರಕ್ಕೆ ಉಡುಗೊರೆ ನೀಡಲಾಗುವುದು. ಸರ್ಕಾರ ಜಮೀನು ಖರೀದಿಸುವ ಬದಲು ತಮ್ಮ ಜಮೀನನ್ನು ಉಚಿತವಾಗಿ ಬಳಸಿಕೊಳ್ಳಬೇಕು ಎಂದು ಕೋರಿದ್ದರು. ಆ ಮನವಿಯನ್ನು ಸರ್ಕಾರ ತಿರಸ್ಕರಿಸಿದ್ದರಿಂದ ಕದಾಡಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರಿ ವಕೀಲರು, ಮಿನಿ ವಿಧಾನಸೌಧ ನಿರ್ಮಾಣಕ್ಕೆ ಯಾವ ಜಮೀನು ಸೂಕ್ತವಾಗಿದೆ ಎಂಬುದನ್ನು ಪ್ರಾಧಿಕಾರ ನಿರ್ಧರಿಸುತ್ತದೆ. ಅಂತಹ ನಿರ್ಧಾರದಲ್ಲಿ ಖಾಸಗಿ ವ್ಯಕ್ತಿಗಳು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಸರ್ಕಾರವು ಸಾರ್ವಜನಿಕ ಉದ್ದೇಶಕ್ಕಾಗಿ ಖಾಸಗಿ ಭೂಮಿಯನ್ನು ಕಡ್ಡಾಯವಾಗಿ ಸ್ವಾಧೀನಪಡಿಸಿಕೊಳ್ಳಬಹುದಾದರೂ, ನಾಗರಿಕರಿಂದ ಭೂಮಿಯ ಉಚಿತವಾಗಿ ಸ್ವೀಕರಿಸಲು ನಿರ್ದೇಶಿಸಲಾಗದು ಎಂದು ವಾದಿಸಿದ್ದರು.

ಇದನ್ನೂ ಓದಿ : 15 ತಿಂಗಳಿಂದ ವೇತನ ಬಿಡುಗಡೆ ಮಾಡದ ವಿಶ್ವವಿದ್ಯಾಲಯದ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಹೈಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.