ನೆಲಮಂಗಲ: ವಿವಾದಿತ ಜಮೀನಿನಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗ್ತಿದೆ ಎಂದು ಆರೋಪಿಸಿ ದಾಯಾದಿಗಳು ಹೊಡೆದಾಡಿಕೊಂಡಿದ್ದಾರೆ. ನೆಲಮಂಗಲ ತಾಲೂಕಿನ ಮಾಚೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಪ್ರಕರಣದ ವಿವರ: 1975-76ರಲ್ಲಿ ಉಳುವವನೇ ಭೂಮಿಯ ಒಡೆಯ ಯೋಜನೆಯಲ್ಲಿ ಬೈಲಪ್ಪ ಎಂಬುವವರಿಗೆ 5.38 ಎಕರೆ ಜಮೀನು ಮಂಜುರಾಗಿತ್ತು. ಈ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ದಾಯಾದಿಗಳಾದ ಕೃಷ್ಣಮೂರ್ತಿ ಮತ್ತು ನಾಗರಾಜು ನಡುವೆ ಜಗಳ ಇದ್ದು, ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್ ತಡೆಯಾಜ್ಞೆ ಇದ್ದರು ಸಹ ಕಟ್ಟಡ ನಿರ್ಮಾಣಕ್ಕೆ ನಾಗರಾಜ್ ಕುಟುಂಬ ಮುಂದಾಗಿತ್ತು.
ಕೋರ್ಟ್ ವಿವಾದದ ನಾಮಫಲಕಗಳನ್ನು ಕಿತ್ತೆಸೆದು ಸುಮಾರು 20 ಜನರೊಂದಿಗೆ ಅಕ್ರಮವಾಗಿ ಕಟ್ಟಡ ನಿರ್ಮಿಸಲು ಮುಂದಾಗಿತ್ತು. ಕೃಷ್ಣಮೂರ್ತಿ ಕುಟುಂಬ ತಡೆಯಲು ಮುಂದಾದಾಗ ಎರಡು ಕುಟುಂಬಗಳ ಸದಸ್ಯರು ಹೊಡೆದಾಡಿಕೊಂಡಿದ್ದಾರೆ. ಇನ್ನು ನಾಗರಾಜ್ ರೌಡಿಶೀಟರ್ ಮಂಜುನಾಥ್ ಅಲಿಯಾಸ್ ದಾಸ ಇವನ ತಮ್ಮ ಪ್ರಭು ಸಹಾಯದಿಂದ ಬೆದರಿಕೆ ಹಾಕಿದ್ದಾರೆಂದು ಕೃಷ್ಣಮೂರ್ತಿ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ 2 ಕೋಮಿನ ಯುವಕರ ನಡುವೆ ಗಲಾಟೆ: ಓರ್ವನಿಗೆ ಚಾಕು ಇರಿತ