ETV Bharat / state

ಸುತ್ತೋಲೆ ಮೇಲೆ ಸುತ್ತೋಲೆ ಬಂದ್ರೂ ಆಮೆಗತಿಯಲ್ಲಿ ಭೂ ಒತ್ತುವರಿ ತೆರವು ಕಾರ್ಯ

author img

By

Published : Nov 29, 2020, 7:18 PM IST

ರಾಜ್ಯದಲ್ಲಿ ಸರ್ಕಾರಿ ಭೂಮಿಗಳ ಒತ್ತುವರಿ ಕುರಿತಂತೆ ಸುತ್ತೋಲೆ ಮೇಲೆ ಸುತ್ತೋಲೆ ಹೊರಡಿಸಲಾಗುತ್ತಿದೆ. ಆದರೆ ಅಧಿಕಾರಿಗಳು ಮಾತ್ರ ಈ ಕುರಿತಂತೆ ನಿರ್ಲಕ್ಷ್ಯ ವಹಿಸಿದ್ದು, ಒತ್ತುವರಿ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದೆ. ಇನ್ನದರೂ ಸರ್ಕಾರ ಇತ್ತ ಗಮನ ಹರಿಸಬೇಕಾಗಿದೆ..

ಆಮೆಗತಿಯಲ್ಲಿ ಸಾಗುತ್ತಿರುವ ಭೂ ಒತ್ತುವರಿ ತೆರವು ಕಾರ್ಯ
Land clearance work going Slowly in Bangalore

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಭೂಮಿಯನ್ನು ನುಂಗಿ ನೀರು ಕುಡಿಯುತ್ತಿರುವ ಪ್ರಕರಣ ಹೆಚ್ಚುತ್ತಲೇ ಇವೆ. ಆದರೆ, ಒತ್ತುವರಿ ಭೂಮಿಯನ್ನು ತೆರವುಗೊಳಿಸುವಲ್ಲಿ ಅಧಿಕಾರಿಗಳು ಮಾತ್ರ ದಿವ್ಯ ನಿರ್ಲಕ್ಷ್ಯ ತೋರುತ್ತಿರುವುದು ಸ್ಪಷ್ಟವಾಗಿದೆ. ಸರ್ಕಾರಿ ಒತ್ತುವರಿ ಭೂಮಿಯ ತೆರವಿಗೆ ಸುತ್ತೋಲೆಗಳನ್ನು ಹೊರಡಿಸುತ್ತಿದ್ದರೂ ವಾಸ್ತವ ಚಿತ್ರಣ ಮಾತ್ರ ನಿರಾಶಾದಾಯಕವಾಗಿದೆ.

ಸರ್ಕಾರಿ ಭೂಮಿಗಳ ಒತ್ತುವರಿ ಕುರಿತು ಹಲವು ಸದನ‌ ಸಮಿತಿಗಳು ವರದಿ ನೀಡಿ ರಾಜ್ಯದಲ್ಲಿ ಲಕ್ಷಾಂತರ ಎಕರೆ ಸರ್ಕಾರಿ ಭೂಮಿ ಒತ್ತುವರಿ ಬಗ್ಗೆ ಬೆಳಕು ಚೆಲ್ಲಿದೆ. ಎ ಟಿ ರಾಮಸ್ವಾಮಿ ನೇತೃತ್ವದ ಜಂಟಿ ಸದನ‌ ಸಮಿತಿ ಮತ್ತು ವಿ ಬಾಲ ಸುಬ್ರಮಣಿಯನ್ ನೇತೃತ್ವದ ಸರ್ಕಾರಿ ಭೂ ಒತ್ತುವರಿ ತೆರವು ಮತ್ತು ಸಂರಕ್ಷಣೆ ಕಾರ್ಯಪಡೆ ರಾಜ್ಯದಲ್ಲಾಗಿರುವ ಸರ್ಕಾರಿ ಭೂಮಿ ಒತ್ತುವರಿಗಳ ಸಂಬಂಧ ಪ್ರತ್ಯೇಕವಾಗಿ ವರದಿಗಳನ್ನು ನೀಡಿತ್ತು. ಈ ಎರಡೂ ವರದಿಗಳಲ್ಲಿ ರಾಜ್ಯದಲ್ಲಿನ ಸರ್ಕಾರಿ ಭೂಮಿ ಒತ್ತುವರಿ ಪ್ರಕರಣಗಳ ಸ್ಪಷ್ಟ ಚಿತ್ರಣ ನೀಡಲಾಗಿತ್ತು.

ಈ ಒತ್ತುವರಿ ತೆರವಿಗೆ ಸರ್ಕಾರ ಪದೇಪದೆ ಸುತ್ತೋಲೆಗಳನ್ನು ಹೊರಡಿಸಿತ್ತಿದೆ. ಆದರೆ, ನಿರೀಕ್ಷಿತ ಫಲ ಮಾತ್ರ ನೀಡುತ್ತಿಲ್ಲ. ಸರ್ಕಾರಿ ಆಸ್ತಿ ರಕ್ಷಿಸುವ ಕೆಲಸ ಪರಿಣಾಮಕಾರಿಯಾಗಿ ಆಗಿಲ್ಲ. ಇದರಿಂದ ಕೋಟ್ಯಂತರ ರೂ. ಮೌಲ್ಯದ ಸ್ವತ್ತು ಕೈತಪ್ಪಿದೆ. ಭೂ ಒತ್ತುವರಿ ಸಂಬಂಧ ಈವರೆಗೆ ಸರ್ಕಾರ 10 ಸುತ್ತೋಲೆ ಹೊರಡಿಸಿದೆ.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಕಾರ್ಯ ಪಡೆಗಳನ್ನು ರಚಿಸಿ, ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಲಾಗಿದೆ. ಆದರೂ ನಿರೀಕ್ಷಿತ ಫಲ ಮಾತ್ರ ಮರಿಚಿಕೆಯಾಗಿದೆ. ರಾಜ್ಯ ವಿಧಾನ ಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಸರ್ಕಾರಿ ಜಮೀನು ಒತ್ತುವರಿ ತೆರವು ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿದೆ.

ಭೂ ಒತ್ತುವರಿದಾರರ ವಿರುದ್ಧ ನಿರೀಕ್ಷಿತ ಮಟ್ಟದಲ್ಲಿ ಕ್ರಮ ಆಗಿಲ್ಲ. ನಕಲಿ ದಾಖಲೆ ಸೃಷ್ಟಿಸಿ ಅಕ್ರಮವೆಸಗಿರುವವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಇದರಿಂದ ಕೋಟ್ಯಂತರ ರೂ. ಮೌಲ್ಯದ ಸಾರ್ವಜನಿಕ ಜಮೀನು ಸರ್ಕಾರದ ಕೈತಪ್ಪಿ ಹೋಗಿವೆ ಎಂಬ ಆಕ್ಷೇಪ ವ್ಯಕ್ತಡಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಇದೇ ವರ್ಷ ಜ.20 ರಂದು ಸರ್ಕಾರಿ ಒತ್ತುವರಿ ತೆರವುಗೊಳಿಸುವುದು, ಒತ್ತುವರಿದಾರರ ವಿರುದ್ಧ ಕ್ರಮ ಜರುಗಿಸುವುದು, ಒತ್ತುವರಿ ತೆರವುಗೊಳಿಸಲು ವಿಫಲರಾಗಿರುವ ಅಧಿಕಾರಿಗಳು ಹಾಗೂ ಭೂ ಕಬಳಿಕೆಗೆ ಪ್ರೇರಣೆ ನೀಡುವ ನಕಲಿ ದಾಖಲೆಗಳನ್ನು ಸೃಷ್ಟಿಸಲು ಶಾಮೀಲಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಲು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿತ್ತು. ಆದರೂ ಒತ್ತುವರಿ ತೆರವಿನಲ್ಲಿ ಯಾವುದೇ ನಿರೀಕ್ಷಿತ ಪ್ರಗತಿ ಮಾತ್ರ ಸಾಧ್ಯವಾಗಿಲ್ಲ.

ಆಗಿರುವ ಒಟ್ಟು ಒತ್ತುವರಿ ಏನು?:

ರಾಜ್ಯದಲ್ಲಿ ಒಟ್ಟು 61,88,891 ಎಕರೆ ಸರ್ಕಾರಿ ಭೂಮಿಗಳಿವೆ. ಈ ಪೈಕಿ ಒಟ್ಟು 14,01,074 ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿದೆ. ಈ ಒತ್ತುವರಿಯಾಗಿರುವ ಪ್ರಕರಣಗಳಲ್ಲಿ 9530 ಎಕರೆ ಒತ್ತುವರಿ ಪ್ರಕರಣ ಕೋರ್ಟಿನಲ್ಲಿ ವಿವಿಧ ಹಂತದಲ್ಲಿ ವಿಚಾರಣೆ ಹಂತದಲ್ಲಿದೆ. ಇನ್ನು ಸುಮಾರು 13,248 ಎಕರೆ ಒತ್ತುವರಿಗಳು ಸಾರ್ವಜನಿಕ ಉದ್ದೇಶಕ್ಕಾಗಿ ಮಾಡಲಾಗಿದೆ. ಉಳಿದಂತೆ ಎಲ್ಲಾ ಒತ್ತುವರಿಗಳನ್ನು ಖಾಸಗಿ ವ್ಯಕ್ತಿಗಳು, ಸಂಘ ಸಂಸ್ಥೆಗಳು, ಕೈಗಾರಿಕೆಗಳು ಮಾಡಿವೆ.

ರಾಜ್ಯದಲ್ಲಿ ಅತಿ ಹೆಚ್ಚು ಸರ್ಕಾರಿ ಭೂಮಿ ಒತ್ತುವರಿಯಾಗಿರುವುದು ಚಿತ್ರದುರ್ಗ ಜಿಲ್ಲೆಯಲ್ಲಿ. ಸುಮಾರು 2,06,441 ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ. ಇನ್ನು ಚಿಕ್ಕಮಗಳೂರಿನಲ್ಲಿ 1,45,111 ಎಕರೆ, ಶಿವಮೊಗ್ಗದಲ್ಲಿ 1,44,063 ಎಕರೆ,ಉಡುಪಿ ಜಿಲ್ಲೆಯಲ್ಲಿ 1,11,499 ಎಕರೆ, ಬಳ್ಳಾರಿಯಲ್ಲಿ 1,02,954 ಎಕರೆ ಜಮೀನನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಉಳಿದಂತೆ ಬೆಂಗಳೂರು ಗ್ರಾಮಾಂತರದಲ್ಲಿ 36,229 ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿದ್ದರೆ, ಬೆಂಗಳೂರು ನಗರ ಜಿಲ್ಲೆಯಲ್ಲಿ 38,707 ಎಕರೆ ಭೂಮಿ ಗುಳುಂ ಆಗಿದೆ.

ಒತ್ತುವರಿ ತೆರವಿನ ಸ್ಥಿತಿಗತಿ ಹೇಗಿದೆ?:

ಆದರೆ ಒತ್ತುವರಿ ತೆರವಿನ ಪ್ರಗತಿ ಮಾತ್ರ ಮಂದಗತಿಯಲ್ಲಿದೆ. ಸುಮಾರು 14 ಲಕ್ಷ ಭೂ ಒತ್ತುವರಿ ಪೈಕಿ ಈವರೆಗೆ ತೆರವು ಮಾಡಲು ಸಾಧ್ಯವಾಗಿರುವುದು. ಕೇವಲ 2,70,047 ಎಕರೆ ಮಾತ್ರ. ಕಂದಾಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಮಾರ್ಚ್ ಅಂತ್ಯದವರೆಗೆ ಸರ್ಕಾರ 2,70,047 ಎಕರೆ ಸರ್ಕಾರಿ ಭೂಮಿಯನ್ನು ತೆರವು ಮಾಡಲು ಸಾಧ್ಯವಾಗಿದೆ. ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ನಿರೀಕ್ಷಿತ ಒಲವು ತೋರುತ್ತಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಫಾರ್ಮ್ 50 ಮತ್ತು 53ರ ಮೂಲಕ ಅರ್ಜಿ ಸಲ್ಲಿಸಿದರೆ ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ರೈತರು ಮಾಡಿದ ಭೂ ಒತ್ತುವರಿಯನ್ನು ಸಕ್ರಮಗೊಳಿಸಲಾಗುತ್ತದೆ. ರಾಜ್ಯದಲ್ಲಿ ಅಂಥ ಸರ್ಕಾರಿ ಭೂ ಒತ್ತುವರಿ ಪ್ರಕರಣ ಸುಮಾರು 9,73,572 ಎಕರೆ ಇದೆ. ಅವುಗಳನ್ನು ಹೊರತು ಪಡಿಸಿ 4,94,724 ಎಕರೆ ಭೂ ಒತ್ತುವರಿಯನ್ನು ತೆರವುಗೊಳಿಸಬೇಕು. ಈ ಪೈಕಿ ಸರ್ಕಾರ ಹೇಳುವಂತೆ ಕಳೆದ 10 ವರ್ಷಗಳಿಂದ ಕೇವಲ 2,70,047 ಎಕರೆ ಭೂಮಿ ತೆರವುಗೊಳಿಸಲಾಗಿದೆ. ಉಳಿದಂತೆ 1,34,677 ಎಕರೆ ಸರ್ಕಾರಿ ಭೂ ಒತ್ತುವರಿ ತೆರವು ಕಾರ್ಯ ಬಾಕಿ ಉಳಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.