ETV Bharat / state

ಶಾಸಕ ವಿಶ್ವನಾಥ್ ಮತ್ತು ನಟ ಪುನೀತ್ ರಾಜ್ ಕುಮಾರ್ ವಿರುದ್ಧ ಭೂ ಕಬಳಿಕೆ ಆರೋಪ..! - Land Accquation allegation against Actor Puneeth Rajkumar

ಯಲಹಂಕ ಶಾಸಕ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್​. ಆರ್​ ವಿಶ್ವನಾಥ್​ ಮತ್ತು ನಟ ಪುನೀತ್​ ರಾಜ್​ ಕುಮಾರ್​ ವಿರುದ್ಧ ಸರ್ಕಾರದ ಜಾಗ ಕಬಳಿಸಿದ ಆರೋಪ ಕೇಳಿ ಬಂದಿದೆ.

Land Accquation allegation against Ylahanka MLA Vishwanath
ಶಾಸಕ ಎಸ್.ಆರ್ ವಿಶ್ವನಾಥ್
author img

By

Published : Aug 16, 2020, 3:57 PM IST

ನೆಲಮಂಗಲ: ಯಲಹಂಕ ಶಾಸಕ ಎಸ್​.ಆರ್​ ವಿಶ್ವನಾಥ್ ಮತ್ತು ನಟ ಪುನೀತ್ ರಾಜ್ ಕುಮಾರ್ ವಿರುದ್ಧ ಭೂ ಕಬಳಿಕೆ ಆರೋಪ ಕೇಳಿ ಬಂದಿದ್ದು , ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್ ವಿಶ್ವನಾಥ್, ಕಾಂಗ್ರೆಸ್ ಮುಖಂಡರು ದಾಖಲೆ ನೋಡದೆ ಆರೋಪ ಮಾಡುತ್ತಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಹೇಳಿದ್ದಾರೆ.

ಯಲಹಂಕ ತಾಲೂಕಿನ ಲಿಂಗರಾಜಪುರದ ಸರ್ವೆ ನಂಬರ್ 5 ರಲ್ಲಿ 8 ಎಕರೆ, ಮೈಲನಹಳ್ಳಿ ಸರ್ವೆ ನಂಬರ್ 25 ರಲ್ಲಿ 10 ಎಕರೆ ಸರ್ಕಾರಿ ಜಾಗ ಕಬಳಿಕೆ ಮಾಡಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಶಾಸಕರ ಪತ್ನಿ ಹೆಸರಿಗೆ 5 ಎಕರೆ ಮತ್ತು ನಟ ಪುನೀತ್ ರಾಜ್ ಕುಮಾರ್ ಪತ್ನಿ ಹೆಸರಿಗೆ 5 ಎಕರೆ ನೋಂದಣಿ ಮಾಡಲಾಗಿದೆ ಎಂದು ರೈತ ಸಂಘಟನೆ ಪ್ರತಿಭಟನೆ ಮಾಡಿತ್ತು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಕೇಶವ ರಾಜಣ್ಣ ಮತ್ತು ಗೋಪಾಲಕೃಷ್ಣ ಸೂಕ್ತ ತನಿಖೆ ನಡೆಸಿ ಅಕ್ರಮ ಬಯಲುಗೊಳಿಸುವಂತೆ ಆರೋಪ ಮಾಡಿದ್ದರು.

ಶಾಸಕ ಎಸ್.ಆರ್ ವಿಶ್ವನಾಥ್

ಬೆಂಗಳೂರು ಉತ್ತರ ತಾಲೂಕಿನ ಹೊನ್ನಸಂದ್ರ ಗ್ರಾಮದ ಖಾಸಗಿ ಹೋಟೆಲ್​ ಉದ್ಘಾಟನೆಗೆ ಆಗಮಿಸಿದ ಶಾಸಕ ಎಸ್ .ಆರ್ ವಿಶ್ವನಾಥ್, ಕಾಂಗ್ರೆಸ್ ಮುಖಂಡರ ಆರೋಪಕ್ಕೆ ತಿರುಗೇಟು ನೀಡಿದರು. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವಾಗ ಬೇರೆಯವರ ತಟ್ಟೆಯಲ್ಲಿನ ನೊಣ ಹೊಡೆಯೋ ಬುದ್ದಿ ಬೀಡಬೇಕು. ಸರ್ಕಾರಿ ಜಾಗ ತೆಗೆದುಕೊಳ್ಳುವ ದುರ್ಗತಿ ಪುನೀತ್ ರಾಜ್ ಕುಮಾರ್​ರವರಿಗೆ ಬಂದಿಲ್ಲ. ದಾಖಲೆ ನೋಡದೆ ಜಮೀನು ಖರೀದಿ ಮಾಡೋದಿಲ್ಲ. ಕರ್ನಾಟಕದ ಪ್ರಸಿದ್ದ ಸಿನಿಮಾ ನಟರ ಕುಟುಂಬ ಅವರದ್ದು, ಸುಖಾ ಸುಮ್ಮನೆ ಆ ಕುಟುಂಬದ ಮೇಲೆ ಆರೋಪ ಮಾಡಬಾರದು. ಅದು ಸರ್ಕಾರಿ ಜಾಗವಲ್ಲ, ಪಿತ್ರಾರ್ಜಿತವಾಗಿ ಬಂದಿರುವ ಅಸ್ತಿ. ದಾಖಲೆಗಳನ್ನು ನೋಡದೆ ಆರೋಪ ಮಾಡುತ್ತಿದ್ದಾರೆ. ಚುನಾವಣೆ ರಣರಂಗದಲ್ಲಿ ಯಾವ ರೀತಿ ಎದುರಿಸಬೇಕೆನ್ನುವುದು ನನಗೆ ಗೊತ್ತು. ಕೇಶವ ರಾಜಣ್ಣನಿಗೆ ಈ ಕ್ಷೇತ್ರದ ಗಂಧ ಗಾಳಿ ಗೊತ್ತಿಲ್ಲ, ಚುನಾವಣೆ ಬಂದಾಗ ಮಾತನಾಡ್ತಾರೆ. ಆ ಬಳಿಕ ಮಾಯವಾಗ್ತಾರೆ. ಹಾಸನದ ಚನ್ನರಾಯಪಟ್ಟಣದ ರೈತರನ್ನು ತಂದು ಹೋರಾಟ ಮಾಡ್ತಾರೆ, ಹೋರಾಟ ಮಾಡುವ ಶಕ್ತಿ ಇವರಿಗಿಲ್ವಾ. ನಾನು 42 ವರ್ಷಗಳಿಂದ ರಾಜಕೀಯ ಮಾಡಿದವನು ಇಂಥವರನ್ನು ಸಾಕಷ್ಟು ನೋಡಿದ್ದೇನೆ ಎಂದರು.

ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬೋಗಸ್ ಸೈನ್ ಮಾಡಿ ಜೈಲಿಗೆ ಹೋಗಿ ಬಂದವರು ಯಾರು ಅನ್ನೊದು ಅವರಿಗೆ ಗೊತ್ತಿರಬೇಕು. ಹಾಲು ಕೊಟ್ಟು ಗಿಮಿಕ್ ಮಾಡೋದು ಯಾರು ಅನ್ನೋದು ಗೊತ್ತಿದೆ. ಕಾಂಗ್ರೆಸ್​ನವರು ದ್ವೇಷದ ರಾಜಕಾರಣ ಮಾಡ್ತಿದ್ದಾರೆ. ಕೆ.ಜಿ ಹಳ್ಳಿ ಮತ್ತು ಡಿ.ಜೆ ಹಳ್ಳಿ ಗಲಭೆಗಳಲ್ಲಿ ರಾಜಕೀಯ ದುರುದ್ದೇಶದಿಂದ ಅಮಾಯಕರ ಮನೆ ಮತ್ತು ದಲಿತ ಶಾಸಕನ ಮನೆ ಸುಟ್ಟು ಹಾಕಿದ್ದಾರೆ. ಜಮೀರ್ ಅಹ್ಮದ್​ ಒಬ್ಬ ಕ್ರಿಮಿ, ಸತ್ತವರಿಗೆ ಪರಿಹಾರ ಮತ್ತು ಪ್ರೋತ್ಸಾಹ ಕೊಡುತ್ತಿದ್ದಾನೆ ಎಂದು ಕಿಡಿಕಾರಿದರು. ಭೂ ಕಬಳಿಕೆ ಆರೋಪ ಮಾಡಿದ ಸ್ಥಳೀಯ ಕಾಂಗ್ರೆಸ್ ಮುಖಂಡರ ವಿರುದ್ಧ ಮಾನನಷ್ಟ ವಿಚಾರವಾಗಿ ನೋಟಿಸ್ ನೀಡಿದ್ದು, 15 ದಿನಗಳಲ್ಲಿ ಉತ್ತರ ನೀಡದಿದ್ದಲ್ಲಿ ಕೋರ್ಟ್​ನಲ್ಲಿ ಕೇಸ್ ಹಾಕುವುದ್ದಾಗಿ ಎಚ್ಚರಿಕೆ ನೀಡಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.