ಬೆಂಗಳೂರು : ಹಾಡಹಾಗಲೇ ಕಾನ್‌ಸ್ಟೇಬಲ್ ಮನೆಗೆ ನುಗ್ಗಿ ಹೆದರಿಸಿ ಲಕ್ಷಾಂತರ ರೂಪಾಯಿ ದರೋಡೆ ಮಾಡಿದ್ದ 10 ಮಂದಿ ದರೋಡೆಕೋರರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ಸಿಎಆರ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಶಾಂತ್ ಕುಮಾರ್ ಎಂಬುವರ ಪತ್ನಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಬಳಿಕ ನಾಗೇಂದ್ರ, ಪಾರ್ಥಿಬನ್, ಮಹದೇವ, ಸೈಯದ್ ಸಿದ್ದಿಕ್, ನಯಾಜ್ ಪಾಷಾ, ಸುರೇಶ್, ಸತೀಶ್, ಹನುಮೇಗೌಡ, ಧರ್ಮರಾಜ್, ಇಮ್ರಾನ್ ಪಾಷಾ ಹಾಗೂ ಹೇಮಂತ್ ಎಂಬ ಆರೋಪಿಗಳನ್ನ ಬಂಧಿಸಲಾಗಿದೆ. ಬಂಧಿತರಿಂದ 5 ಲಕ್ಷ ಮೌಲ್ಯದ 80 ಗ್ರಾಂ ಚಿನ್ನಾಭರಣ, 1.45 ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಸಿದ ಎರಡು ಆಟೋ ಹಾಗೂ ಎರಡು ಬೈಕ್ ಜಪ್ತಿ ಮಾಡಿದ್ದಾರೆ.
ಸಿಎಆರ್ ಕಾನ್‌ಸ್ಟೇಬಲ್ ಆಗಿ ಹಾಗೂ ಎಡಿಜಿಪಿ ಉಮೇಶ್ ಕುಮಾರ್ ಅವರಿಗೆ ಕಾರು ಚಾಲಕರಾಗಿ ಪ್ರಶಾಂತ್ ಕರ್ತವ್ಯ ನಿರ್ವಹಿಸುತ್ತಿದ್ದರು. ಅನ್ನಪೂರ್ಣೇಶ್ವರಿ ನಗರದ ಮುದ್ದಿನಪಾಳ್ಯದಲ್ಲಿರುವ ಮನೆಯೊಂದರಲ್ಲಿ ವಾಸಿಸುತ್ತಿದ್ದರು.
ಮಾರ್ಚ್ 6ರಂದು ಮಧ್ಯಾಹ್ನ ಪ್ರಶಾಂತ್ ಮನೆಯಲ್ಲಿ ಇಲ್ಲದಿರುವುದನ್ನು ಅರಿತಿದ್ದ ಮೂರು ಬೈಕ್ನಲ್ಲಿ ಬಂದ ದರೋಡೆಕೋರರು ಮನೆ ಬಾಗಿಲು ತಟ್ಟಿದ್ದಾರೆ. ಕಾನ್‌ಸ್ಟೇಬಲ್ ಪತ್ನಿ ದೀಪಾ ಅವರೊಂದಿಗೆ ಮಾತನಾಡುವ ಸೋಗಿನಲ್ಲಿ ಏಕಾಏಕಿ ಮನೆಗೆ ನುಗ್ಗಿದ್ದಾರೆ.
ಓದಿ:ಕೊಡಗು ಒಂಟಿ ಮಹಿಳೆಯ ಕೊಲೆ ಪ್ರಕರಣ: ಒಂದು ತಿಂಗಳ ಬಳಿಕ ಆರೋಪಿ ಅಂದರ್
ಪ್ರಶಾಂತ್ ಅವರು ಡಾಕ್ಯುಮೆಂಟ್ ತರುವುದಕ್ಕೆ ಹೇಳಿದ್ದಾರೆ ಎಂದು ಮಾಸ್ಟರ್ ಬೆಡ್ ರೂಂಗೆ ಪ್ರವೇಶಿಸಿದ್ದಾರೆ. ಮಾರಕಾಸ್ತ್ರ ತೋರಿಸಿ 7 ಲಕ್ಷ ರೂ.ಮೌಲ್ಯದ 250 ಗ್ರಾಂ ಚಿನ್ನಾಭರಣ ಹಾಗೂ ಮೊಬೈಲ್ ದರೋಡೆ ಮಾಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಂದ ಆರೋಪಿಗಳನ್ನು ಖೆಡ್ಡಾಕ್ಕೆ ಬೀಳಿಸಿ ಬಂಧಿತರಿಂದ 88 ಗ್ರಾಂ ಚಿನ್ನಾಭರಣ ಹಾಗೂ 1.5 ಲಕ್ಷ ನಗದು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.