ETV Bharat / state

ಕಾರ್ಮಿಕ ಸಂಘಟನೆಗಳ ದೇಶವ್ಯಾಪಿ ಮುಷ್ಕರ: ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಭಾಗಿ

author img

By

Published : Jan 7, 2020, 8:42 PM IST

ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ನಾಳೆ ಕಾರ್ಮಿಕ ಸಂಘಟನೆಗಳು‌ ದೇಶವ್ಯಾಪಿ ಮುಷ್ಕರಕ್ಕೆ‌‌ ಕರೆ ಕೊಟ್ಟಿವೆ. ಮುಷ್ಕರದಲ್ಲಿ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಕರ್ನಾಟಕ ರಾಜ್ಯ ಶಾಖೆ ಭಾಗಿಯಾಗಲಿದೆ.

labor-unions-strike-tomorrow
ಐಎನ್‌ಟಿ ಯುಸಿ ಅಧ್ಯಕ್ಷ ಪ್ರಕಾಶ್

ಬೆಂಗಳೂರು: ಕೇಂದ್ರ ಸರ್ಕಾರ ಜನವಿರೋಧಿ ಕಾರ್ಮಿಕ ವಿರೋಧಿ ನೀತಿ ಅನಸರಿಸುತ್ತಿದೆ ಎಂದು ಆರೋಪಿಸಿ ಕಾರ್ಮಿಕ ಸಂಘಟನೆಗಳು‌ ದೇಶವ್ಯಾಪಿ ಮುಷ್ಕರಕ್ಕೆ‌‌ ಕರೆ ಕೊಟ್ಟಿವೆ. ಇನ್ನು ಇದರಲ್ಲಿ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್‌ನ ಕರ್ನಾಟಕ ರಾಜ್ಯ ಶಾಖೆ ಭಾಗಿಯಾಗಲಿದೆ.

ಈ ಕುರಿತು ಮಾಹಿತಿ ನೀಡಿದ ಐಎನ್‌ಟಿಯುಸಿ ಅಧ್ಯಕ್ಷ ಪ್ರಕಾಶ್, ಪ್ರತಿಭಟನೆಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಬಳಿ ಅನುಮತಿ ಕೇಳಿದ್ದೇವೆ. ಅವರು ಯಾವುದೇ ರೀತಿಯ ಪ್ರತಿಭಟನೆ ನಡೆಸಲು ಬಿಡಲ್ಲ. ಫ್ರೀಡಂ ಪಾರ್ಕ್‌ಗೆ ಹೋಗಿ ಸಭೆ ಮಾಡಿ ಎಂದು ತಿಳಿಸಿದ್ದಾರೆ ಎಂದರು.

ಐಎನ್‌ಟಿ ಯುಸಿ ಅಧ್ಯಕ್ಷ ಪ್ರಕಾಶ್

ನಾಳೆ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್​ ಭವನದಲ್ಲಿ ಕೆ.ಪಿ.ಸಿ.ಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರ್ಯಾಲಿ ಉದ್ಘಾಟಿಸಲಿದ್ದಾರೆ. ಕೆ.ಪಿಸಿ.ಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ವಿಧಾನ ಪರಿಷತ್​ ಸದಸ್ಯರಾದ ಉಗ್ರಪ್ಪ, ಕೆಪಿಸಿಸಿ ಕಾರ್ಮಿಕ ವಿಭಾಗದ ಸದಸ್ಯರೂ ಸೇರಿದಂತೆ ವಿವಿಧ ಸಂಘಟನೆಗಳು ಪಾಲ್ಗೊಳ್ಳಲಿವೆ.

Intro:ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ನಾಳೆ ಮುಷ್ಕರ
ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ವತಿಯಿಂದ ನಗರ ಆಯುಕ್ತರಿಗೆ ‌ಮನವಿ

Mojo
ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ನಾಳೆ ಕಾರ್ಮಿಕ ಸಂಘಟನೆಗಳು‌ ಮುಷ್ಕರಕ್ಕೆ‌‌ ಕರೆ ಕೊಟ್ಟಿದ್ದಾರೆ. ಇನ್ನು ಇದರಲ್ಲಿ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಕರ್ನಾಟಕ ರಾಜ್ಯ ಶಾಖೆ ಭಾಗಿಯಾಗಿಲಿದ್ದಾರೆ‌ . ಮೊದಲು ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೇಸ್ ಭವನದಲ್ಲಿ ಕೆ.ಪಿ.ಸಿ.ಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರ್ಯಾಲಿ ಯನ್ನು ಉದ್ಘಾಟಿಸಲಿದ್ದಾರೆ. ಹಾಗೆ ಇದರಲ್ಲಿ ಕೆ.ಪಿಸಿ.ಸಿ ಕಾರ್ಯಧ್ಯಕ್ಷರಾದ ಈಶ್ವರ್ ಖಂಡ್ರೆ , ವಿಧಾನ ಪರಿಷತ್ತು ಸದಸ್ಯರಾದ ಉಗ್ರಪ್ಪ ಕೆ.ಪಿಸಿಸಿ ಕಾರ್ಮಿಕ ವಿಭಾಗ ಸೇರಿದಂತೆ ವಿವಿಧ ಮುಂಚೂಣಿ ಘಟಕ, ಐಎನ್.ಟಿ.ಯು.ಸಿ, ಎ.ಐ.ಟಿ.ಯು.ಸಿ, ಹೆಚ್ .ಎಂ.ಎಸ್, ಸಿ.ಐ.ಟಿ.ಯು,ಎ.ಐ.ಯು.ಟಿ.ಯು.ಸಿ,ಟಿ.ಯು.ಸಿ.ಸಿ,ಎ.ಐ.ಸಿ.ಸಿ.ಟಿಯು,ಹೆಚ್.ಎಂ.ಕೆ.ಪಿ,ಬ್ಯಾಂಕ್, ವಿಮಾ, ಬಿಮೆಸ್ ಎನ್. ಎಲ್. ಜೆ.ಎ.ಎಪ್, ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರು ಭಾಗಿಯಾಗಲಿದ್ದಾರೆ
ಇನ್ನು ಇಂದು ಈ ರ್ಯಾಲಿ ಗೆ ಜೆ.ಸಿಟಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಬಳಿ ಅನುಮತಿ ಪಡೆಯಲು ಬಂದಿದ್ರು. ಆದ್ರೆ ನಗರ ಆಯುಕ್ತ ಯಾವುದೇ ರೀತಿಯ ಪ್ರತಿಭಟನೆ ನಡೆಸಲು ಬಿಡಲ್ಲ ಫ್ರೀಡಂ ಫಾರ್ಕ್ ಹೋಗಿ ಸಭೆ ಮಾಡಿ ಎಂದು ತಿಳಿಸಿದ್ದಾರೆ..

12;-ಅಂಶಗಳ ಬೇಡಿಕೆ ಏನು?

1-21ಸಾವಿರ ರೂಪಾಯಿ ರಾಷ್ಟ್ರ ವ್ಯಾಪಿ ಸಮಾನ ಕನಿಷ್ಠ ವೇತನ
2- ಕಾರ್ಪೋರೇಟ್ ಬಂಡವಾಳದ ಪರ ಕಾರ್ಮಿಕ ವಿರೋಧಿಯಾಗಿ ಕಾರ್ಮಿಕ ಕಾನೂನಗಳ ಕಟ್ಟುನಿಟ್ಟಿನ ಜಾರಿಗಾಗಿ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಮಿಕ ನ್ಯಾಯಲಯದ ಸ್ಥಾಪನೆ
3-ಖಾತ್ರಿ ಪಿಂಚಣಿಗಾಗಿ, ಎಲ್ಲಾರಿಗೂ ಮಾಸಿಕ ಪಿಂಚಣಿ ಕನಿಷ್ಠ 10ಸಾವಿರ ರೂಪಾಯಿ
4- ಬೆಲೆ ಏರಿಕೆ ನಿಯಂತ್ರಣ ಕ್ಕಾಗಿ ಸಾರ್ವರ್ತಿಕರ ಪಡಿತರ ವ್ಯವಸ್ಥೆ
5-ಆರ್ಥಿಕ ಹಿಂಜರಿತ ಕ್ಕೆ ಕಾರಣವಾಗಿರುವ ನೀತಿ ವಿರುದ್ದ ,ಉದ್ಯೂಗ ಕಳೆದುಕೊಳ್ಖುವ ಕಾರ್ಮಿಕ ರ ಉದ್ಯೋಗ
6- ಅಸಂಘಟಿತ ಕಾರ್ಮಿಕರಿಗೆ ಶಾಸನಬದ್ದ ಭವಿಷ್ಯನಿಧಿ ಮತ್ತು ಪಿಂಚಣಿ ,ಸಾಮಾಜಿಕ ಭದ್ರತಾ ಮಂಡಳಿ ನಿಧಿಯ ಕಲ್ಯಾಣ ಯೋಜನೆ
7-ಗುತ್ತಿಗೆ ಪದ್ದತಿ ನಿಯಂತ್ರಣ ಕ್ಕಾಗಿ ಸಮಾನ ಕೆಲಸ ,ಸಮಾನ ವೇತನ, fTE, NEEM, NEESAರದ್ದು‌ಮಾಡಲು ಮನವು
8-_ILO 87ಮತ್ತು 98 ಸಮಾವೇಶಗಳ ಸಂಸತ್ತಿನ ಅನುಮೋದನೆಗಾಗಿ
9-ರೈತರ ಬೆಳೆಗಳಿಗೆ ಸ್ವಾಮಿನಾಥನ್ ವರದಿ , ಸಾಲಮನ್ನಾ ,ರೈತರ ಆತ್ಮಹತ್ಯೆ, ಗ್ರಾಮೀಣ ಉದ್ಯೋಗ ಖಾತ್ರಿ‌ಯೋಜನೆ
10_ರಕ್ಷಣೆ, ಕಲ್ಲಿದ್ದಲು ಬ್ಯಾಕಿಂಗ್, ವಿಮೆ ಮುಂತಾದ ನಿರ್ಣಾಯಕ ಆಯಕಟ್ಡಿನ ರಂಗದಲ್ಲಿ ವಿದೇಶಿ ನೇರ ಬಂಡವಾಳ
11- ಸ್ಕೀಂ ನೌಕರರನ್ನು ನೌಕರರೆಂದು ಪರಿಗಣಿಸಲು ಭಾರತ ಕಾರ್ಮಿಕರ ಸಮ್ಮೇಳನ ಕ್ಕಾಗಿ ನಾಳೆ ಮುಷ್ಕರ ನಡೆಸಲಿದ್ದಾರೆ.

ಇನ್ನು ಈ ಮುಷ್ಕರದಿಂದ ನಗರದಲ್ಲಿ ವಾಹನ ಸವಾರರಿಗೆ ಹಾಗೆ ಕೆಲಸಕ್ಕೆ ಹೋಗುವವರಿಗೆ ಬಹಳಷ್ಟು ಅಡೆತಡೆ ಉಂಟಾಗಲಿದೆBody:KN_BNG_05_BANDU_7204498Conclusion:KN_BNG_05_BANDU_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.