ETV Bharat / state

ರೋಲರ್ ಸ್ಕೇಟಿಂಗ್​: 3 ಚಿನ್ನದ ಪದಕ ಗೆದ್ದ ಕರ್ನಾಟಕದ 'ಕುಸುಮಾ' - ರೋಲರ್ ಸ್ಕೇಟಿಂಗ್​ ಚಾಂಪಿಯನ್​ಶಿಪ್​

ಪಂಜಾಬ್​ನ ಮೊಹಾಲಿಯ ದೇಲ್​ಪುರದಲ್ಲಿ ನಡೆದ 58ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್​ ಚಾಂಪಿಯನ್​ ಶಿಪ್​ನಲ್ಲಿ ರಾಜ್ಯದ ಕುಸುಮಾ ಸುರೇಶ್​ ಗೌಡ ಅದ್ಭುತ ಸಾಧನೆ ತೋರಿದ್ದರು.

Kusuma won 3 gold medals in Roller Skating Championship
ರೋಲರ್ ಸ್ಕೇಟಿಂಗ್​ ಚಾಂಪಿಯನ್​ಶಿಪ್​ನಲ್ಲಿ 3 ಚಿನ್ನದ ಪದಕ ಗೆದ್ದ ಕರ್ನಾಟಕದ "ಕುಸುಮಾ"
author img

By

Published : Apr 9, 2021, 7:40 AM IST

ಬೆಂಗಳೂರು: ಮೂರು ವರ್ಷದ ಮಗು ಇರುವಾಗಲೇ ಸ್ಕೇಟಿಂಗ್​ನಲ್ಲಿ ತೊಡಗಿದ್ದ ಬಾಲಕಿ ಇದೀಗ ನೂರಾರು ಪದಕಗಳ ಸಾಧನೆ ಮಾಡುವ ಮೂಲಕ ರಾಜ್ಯದ ಕೀರ್ತಿ ಹೆಚ್ಚಿಸಿದ್ದಾಳೆ.

ಮಾಗಡಿ ರಸ್ತೆಯ ಕಾಮಾಕ್ಷಿಪಾಳ್ಯದ ಸುರೇಶ್​ ಗೌಡ - ಮಂಜುಳ ದಂಪತಿಯ ಮಗಳು ಕುಸುಮಾ ಎಸ್. ಗೌಡ ಈ ಸಾಧನೆ ಮಾಡಿದ ಬಾಲಕಿ. ಈಕೆ ಫೋರ್ಸ್​ ವನ್​ ಸ್ಪೀಡ್​ ಸ್ಕೇಟಿಂಗ್​ ಅಕಾಡೆಮಿ ಕ್ಲಬ್​ನಲ್ಲಿ ಸ್ಕೇಟಿಂಗ್​ ಕಲಿಯುತ್ತಿದ್ದು, ಮೈನವಿರೇಳಿಸುವಂತೆ ಸ್ಪೀಡ್​ ಸ್ಕೇಟಿಂಗ್​​ ಮಾಡಬಲ್ಲಳು.

ರೋಲರ್ ಸ್ಕೇಟಿಂಗ್​ ಚಾಂಪಿಯನ್​ಶಿಪ್​ನಲ್ಲಿ ಕರ್ನಾಟಕದ ಬಾಲಕಿಯ ಸಾಧನೆ

ಇತ್ತೀಚೆಗೆ ಪಂಜಾಬ್​ನ ಮೊಹಾಲಿಯ ದೇಲ್​ಪುರದಲ್ಲಿ ನಡೆದ 58ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್​ ಚಾಂಪಿಯನ್​ ಶಿಪ್​ನಲ್ಲಿ ಕುಸುಮಾ 9 ರಿಂದ 11 ವರ್ಷದ ವಯೋಮಿತಿಯ ಒನ್​ ರೌಂಡ್​ ಲ್ಯಾಪ್​ ಹಾಗೂ 500 ಮೀಟರ್​ ವಿಭಾಗದಲ್ಲಿ 3 ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾಳೆ.

ಬಾಲಕಿಯ ಸಾಧನೆಗೆ ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ. ಚೆನ್ನಮ್ಮನ ಕೆರೆ ಅಚ್ಚುಕಟ್ಟು ಸ್ಕೇಟಿಂಗ್​ ತರಬೇತಿ ಶಾಲೆಯ ಏಕಲವ್ಯ ಪ್ರಶಸ್ತಿ ಪುರಸ್ಕೃತ ಪ್ರತೀಕ್​ ರಾಜ ಅವರ ಮಾರ್ಗದರ್ಶನದಲ್ಲಿ ದಿನಕ್ಕೆ ಮೂರು ಪಾಳಿಯಲ್ಲಿ ಈ ಪುಟ್ಟ ಪೋರಿ ತರಬೇತಿ ಪಡೆದು ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದಾಳೆ.

ಇದನ್ನೂ ಓದಿ : ಸಾಲ ಮಾಡಿ ಲಾಟರಿ ಖರೀದಿಸಿದ್ದ ವಾಚ್​ಮ್ಯಾನ್​ಗೆ 1 ಕೋಟಿ ರೂ. ಲಾಟ್ರಿ ಬಹುಮಾನ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.