ಬೆಂಗಳೂರು: ಕೋರಮಂಗಲ ವ್ಯಾಪ್ತಿಯ ಪಬ್, ಬಾರ್ಗಳ ಮೇಲೆ ದಾಳಿ ನಡೆಸಿದ ಪೋಲಿಸರಿಗೆ ರೌಡಿ ಶೀಟರ್ ಕುಣಿಗಲ್ ಗಿರಿ ಸಿಕ್ಕಿಬಿದ್ದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಬಹಳ ದಿನಗಳಿಂದ ತಲೆಮರೆಸಿಕೊಂಡಿದ್ದ ಕುಣಿಗಲ್ ಗಿರಿ ಕೋರಮಂಗಲ ಪಬ್ ಒಂದರಲ್ಲಿ ಪಾರ್ಟಿ ನಡೆಸುತ್ತಿರುವ ವಿಚಾರ ಗೊತ್ತಾಗಿದೆ. ಹೀಗಾಗಿ ಬಾರುಗಳ ಮೇಲೆ ಸ್ಪೆಷಲ್ ಡ್ರೈವ್ ಮಾಡ್ತಿದ್ದ ಪೊಲೀಸರ ಕಣ್ಣಿಗೆ ಕುಣಿಗಲ್ ಗಿರಿ ಬಿದ್ದಿದ್ದಾನೆ. ತಕ್ಷಣ ಅಲರ್ಟ್ ಆದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಇತ್ತೀಚೆಗಷ್ಟೇ ಗಿರಿ ಬರ್ತ್‌ಡೇ ದಿನ ಸಿಸಿಬಿ ಪೋಲಿಸರು ಡ್ಯಾನ್ಸ್ ಬಾರ್ ಮೇಲೆ ದಾಳಿ ಮಾಡಿದ್ದರು. ಆದರೆ ಪೊಲೀಸರ ಕಣ್ಣು ತಪ್ಪಿಸಿ ಎಸ್ಕೆಪ್ ಆಗಿದ್ದ ಈತ ಸದ್ಯ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸಿಸಿಬಿ ಪೋಲಿಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ.