ಬೆಂಗಳೂರು: ಒಂದು ಕಡೆ ಸದನದಲ್ಲಿ ಕಲಾಪ ಆರಂಭವಾಗಿ ಚರ್ಚೆ ತಾರಕಕ್ಕೇರಿದೆ. ಇತ್ತ ಸಿ.ಎಂ. ಕುಮಾರಸ್ವಾಮಿಯವರ ಸುತ್ತಾಟ ಜೋರಾಗಿದೆ.
ವಿಧಾನಸಭೆ ಕಲಾಪಕಕ್ಕೆ ತೆರಳದೇ ತಾಜ್ ಹೋಟೆಲ್ಗೆ ಸಿ.ಎಂ. ಕುಮಾರಸ್ವಾಮಿ ತೆರಳಿದ್ದಾರೆ. ಜೆಡಿಎಸ್ ವರಿಷ್ಠ ದೇವೇಗೌಡರ ನಿವಾಸದಲ್ಲಿ ನಿರಂತರ ಚರ್ಚೆಯ ನಂತರ ಸಿ.ಎಂ. ಕುಮಾರಸ್ವಾಮಿ, ಸದನಕ್ಕೆ ಹಾಜರಾಗದೇ ದೇವೇಗೌಡರ ನಿವಾಸದಿಂದ ನೇರವಾಗಿ ತಾಜ್ ವೆಸ್ಟ್ಂಡ್ ಹೋಟೆಲ್ಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.