ETV Bharat / state

ತೋಟದಲ್ಲಿ ವಿನಾಯಕನಿಗೆ ಪೂಜೆ ಸಲ್ಲಿಸಿದ ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ - ಈಟಿವಿ ಭಾರತ್​ ಕನ್ನಡ

ಪರಿಸರ ಗಣಪನನ್ನು ಪೂಜಿಸಿದ ಕುಮಾರಸ್ವಾಮಿ ಅವರು, ನಮ್ಮ ನೆಲದ ಸಂಸ್ಕೃತಿ, ಪರಂಪರೆಯ ಅನುಸಾರ ಮಣ್ಣಿನ ಗಣಪನನ್ನೇ ಪೂಜಿಸಿದ್ದೇನೆ. ಎಲ್ಲರೂ ಪರಿಸರಕ್ಕೆ ಪೂರಕವಾದ ಪರಿಸರ ಗಣಪನನ್ನು ಪೂಜಿಸಿಬೇಕು ಎಂದು ವಿನಂತಿ ಮಾಡಿದ್ದಾರೆ.

kumaraswamy-ganesh-chaturthi-festival-celebration
ಪರಿಸರ ಗಣಪನನ್ನು ಪೂಜಿಸಿದ ಕುಮಾರಸ್ವಾಮಿ
author img

By

Published : Aug 31, 2022, 11:03 AM IST

ಬೆಂಗಳೂರು : ಗಣೇಶ ಚತುರ್ಥಿ ಹಬ್ಬದ ನಿಮಿತ್ತ ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬಿಡದಿಯ ಕೇತಗಾನಹಳ್ಳಿಯ ತಮ್ಮ ತೋಟದಲ್ಲಿ ಶ್ರೀ ವಿನಾಯಕನಿಗೆ ಪೂಜೆ ಸಲ್ಲಿಸಿದರು.

ಪರಿಸರ ಗಣಪನನ್ನು ಪೂಜಿಸಿದ ಕುಮಾರಸ್ವಾಮಿ ಅವರು, ನಮ್ಮ ನೆಲದ ಸಂಸ್ಕೃತಿ, ಪರಂಪರೆಯ ಅನುಸಾರ ಮಣ್ಣಿನ ಗಣಪನನ್ನೇ ಪೂಜಿಸಿದ್ದೇನೆ. ಎಲ್ಲರೂ ಪರಿಸರಕ್ಕೆ ಪೂರಕವಾದ ಪರಿಸರ ಗಣಪನನ್ನು ಪೂಜಿಸಿಬೇಕು ಎಂದು ವಿನಂತಿ ಮಾಡಿದ್ದಾರೆ. ಅಲ್ಲದೆ, ಇದೇ ವೇಳೆ ಮಾಜಿ ಮುಖ್ಯಮಂತ್ರಿಗಳು ಗೋ ಮಾತೆಯ ಪೂಜೆಯನ್ನೂ ನೆರವೇರಿಸಿದರು.

ಪರಿಸರ ಗಣಪನನ್ನು ಪೂಜಿಸಿದ ಕುಮಾರಸ್ವಾಮಿ

ನಾಡಿನ ಸಮಸ್ತ ಜನತೆಗೆ ಶ್ರೀ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು. ಶ್ರೀ ವಿನಾಯಕನ ಕರುಣೆ, ಅನುಗ್ರಹದಿಂದ ಎಲ್ಲರಿಗೂ ಒಳ್ಳೆಯದಾಗಲಿ ಹಾಗೂ ಎಲ್ಲೆಡೆ ಸುಖ ಶಾಂತಿ, ನೆಮ್ಮದಿ, ಸಮೃದ್ಧಿ ನೆಲೆಸಲಿ ಎಂದು ಆ ವಿಘ್ನ ನಿವಾರಕನಲ್ಲಿ ಪ್ರಾರ್ಥಿಸಿದ್ದೇನೆ ಎಂದು ಕುಮಾರಸ್ವಾಮಿ ಅವರು ನಾಡಿನ ಜನತೆಗೆ ಹಬ್ಬದ ಶುಭಾಶಯ ಕೋರಿದ್ದಾರೆ.

ಜೆಪಿ ನಗರದ ತಮ್ಮ ನಿವಾಸಲ್ಲಿಯೂ ಮಾಜಿ ಮುಖ್ಯಮಂತ್ರಿಗಳು ತಮ್ಮ ಕುಟುಂಬದ ಸದಸ್ಯರೊಂದಿಗೆ ಗಣಪನ ಪೂಜೆ ನೆರವೇರಿಸುವರು. ಬಳಿಕ ಪದ್ಮನಾಭ ನಗರದಲ್ಲಿರುವ ತಂದೆ ಹೆಚ್.ಡಿ.ದೇವೇಗೌಡರ ನಿವಾಸಕ್ಕೆ ತೆರಳಿ ವಿನಾಯಕನ ಪೂಜೆಯಲ್ಲಿ ಪಾಲ್ಗೊಂಡು ತಂದೆ ತಾಯಿಯವರ ಆಶೀರ್ವಾದ ಪಡೆಯಲಿದ್ದಾರೆ.

  • || ಏಕದಂತಂ ಮಹಾಕಾಯಂ ಲಂಬೋದರಂ ಗಜಾನನಂ
    ವಿಘ್ನನಾಶಕರಂ ದೇವಂ ಹೇರಂಬ ಪ್ರಣಮಾಮ್ಯಹಂ ||

    ನಾಡಿನ ಸಮಸ್ತ ಜನತೆಗೆ ಶ್ರೀ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು.
    ಈ ಪುಣ್ಯ ದಿನದಂದು ಶ್ರೀ ವರಸಿದ್ಧಿ ವಿನಾಯಕನು ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಲಿ ಎಂದು ಪ್ರಾರ್ಥಿಸುತ್ತೇನೆ. ಶುಭವಾಗಲಿ. #HappyGaneshChaturthi pic.twitter.com/RWkiW2KnOs

    — H D Devegowda (@H_D_Devegowda) August 31, 2022 " class="align-text-top noRightClick twitterSection" data=" ">

ನಾಡಿನ ಜನತೆಗೆ ಶುಭ ಕೋರಿದ ಹೆಚ್​​ಡಿಡಿ : ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಟ್ವೀಟ್ ಮೂಲಕ, ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ. ಈ ಪುಣ್ಯ ದಿನದಂದು ವರಸಿದ್ಧಿ ವಿನಾಯಕನು ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಗಣೇಶ ಚತುರ್ಥಿ 2022: ಈ ಐದು ವಿಶಿಷ್ಟ ಗಣಪ ಮೂರ್ತಿಗಳ ಬಗ್ಗೆ ನಿಮಗೆಷ್ಟು ಗೊತ್ತು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.