ETV Bharat / state

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಕುಮಾರ ಕೃಪಾ ನಿವಾಸ - ಪ್ರತಿಪಕ್ಷ ‌ನಾಯಕ ಸಿದ್ದರಾಮಯ್ಯ

ಪ್ರತಿಪಕ್ಷ ‌ನಾಯಕ ಸಿದ್ದರಾಮಯ್ಯಗೆ ಕುಮಾರ ಕೃಪಾ ಪೂರ್ವದಲ್ಲಿನ ಸರ್ಕಾರಿ ನಿವಾಸವನ್ನು ಹಂಚಿ ಮತ್ತೆ ಹೊಸ ಆದೇಶ ಹೊರಡಿಸಲಾಗಿದೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
author img

By

Published : Oct 26, 2019, 12:33 PM IST

Updated : Oct 26, 2019, 1:32 PM IST

ಬೆಂಗಳೂರು: ಪ್ರತಿಪಕ್ಷ ‌ನಾಯಕ ಸಿದ್ದರಾಮಯ್ಯಗೆ ಕುಮಾರ ಕೃಪಾ ಪೂರ್ವದಲ್ಲಿನ ಸರ್ಕಾರಿ ನಿವಾಸವನ್ನು ಹಂಚಿಕೆ ಮಾಡಿ ಮತ್ತೆ ಹೊಸ ಆದೇಶ ಹೊರಡಿಸಲಾಗಿದೆ.

ಈ‌ ಮುಂಚೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ರೇಸ್ ವ್ಯೂ ಕಾಟೇಜ್ ನಿವಾಸವನ್ನು ಹಂಚಿಕೆ ಮಾಡಿ ಅದೇಶಿಸಲಾಗಿತ್ತು. ಆದರೆ ಸಿದ್ದರಾಮಯ್ಯ ಅವರು ತಮಗೆ ಕುಮಾರಕೃಪಾ ಪೂರ್ವದಲ್ಲಿನ ನಂ.1 ನಿವಾಸವನ್ನು ನೀಡುವಂತೆ ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ದರು. ಈ ನಿಟ್ಟಿನಲ್ಲಿ ಇದೀಗ ಸಿಎಂ ಯಡಿಯೂರಪ್ಪ ಅವರು ಸಿದ್ದರಾಮಯ್ಯ ಅವರ ಮನವಿಯಂತೆ ಕುಮಾರ ಕೃಪಾ ಪೂರ್ವದಲ್ಲಿನ ನಿವಾಸವನ್ನೇ ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದಾರೆ.

Banglore
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಕುಮಾರ ಕೃಪಾ ನಿವಾಸ ಹಂಚಿಕೆ

ಕುಮಾರ ಕೃಪಾ ಪೂರ್ವ ನಿವಾಸವನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಹಂಚಿಕೆ‌ ಮಾಡಲಾಗಿತ್ತು.‌ ಇದೀಗ ನಿವಾಸ ಹಂಚಿಕೆಯನ್ನು ಪರಿಷ್ಕರಣೆ ಮಾಡಲಾಗಿದ್ದು, ರೇಸ್ ವ್ಯೂ ಕಾಟೇಜ್ ನಿವಾಸವನ್ನು ಸ್ಪೀಕರ್ ಕಾಗೇರಿಗೆ ಹಂಚಿಕೆ ಮಾಡಲಾಗಿದೆ. ಮೈತ್ರಿ ಸರ್ಕಾರದಲ್ಲಿ ಹೆಚ್.ಡಿ.ರೇವಣ್ಣಗೆ ಕುಮಾರ ಕೃಪಾ ಪೂರ್ವ ನಂ.1 ನಿವಾಸವನ್ನು ಹಂಚಿಕೆ ಮಾಡಲಾಗಿತ್ತು. ಸಿದ್ದರಾಮಯ್ಯ ಈ ಹಿಂದೆ ಪ್ರತಿಪಕ್ಷ ನಾಯಕಾರಗಿದ್ದಾಗಲೂ ಕುಮಾರ ಕೃಪಾ ಪೂರ್ವ ನಂ.1 ನಿವಾಸದಲ್ಲೇ ವಾಸವಾಗಿದ್ದರು. ಇದೀಗ ಮತ್ತೆ ಅವರಿಗೆ ಅದೇ ನಿವಾಸವನ್ನು ಹಂಚಿಕೆ ಮಾಡಲಾಗಿದೆ.

ಕೆಲ ದಿನಗಳಿಂದ ಸಿದ್ದರಾಮಯ್ಯ ಅವರಿಗೆ ನಿವಾಸ ಹಂಚಿಕೆ ಸಂಬಂಧ ಗೊಂದಲ ಮೂಡಿತ್ತು. ಇದೀಗ ಈ ಗೊಂದಲಕ್ಕೆ ತೆರೆ ಬಿದ್ದಿದೆ. ಇನ್ನು ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಿಂದ ಹೊಸದಾಗಿ ಹಂಚಿಕೆಯಾದ ಕುಮಾರ ಕೃಪಾ ಪೂರ್ವ ನಿವಾಸಕ್ಕೆ ಸ್ಥಳಾಂತರಗೊಳ್ಳಲಿದ್ದಾರೆ.

Intro:Body:KN_BNG_01_SIDDARAMAYYA_KUMARAKRIPAHOME_SCRIPT_7201951

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗೆ ಕುಮಾರ ಕೃಪಾ ಪೂರ್ವ ನಿವಾಸ ಹಂಚಿಕೆ

ಬೆಂಗಳೂರು: ಪ್ರತಿಪಕ್ಷ ‌ನಾಯಕ ಸಿದ್ದರಾಮಯ್ಯಗೆ ಕುಮಾರ ಕೃಪಾ ಪೂರ್ವದಲ್ಲಿನ ಸರ್ಕಾರಿ ನಿವಾಸವನ್ನು ಹಂಚಿ ಮತ್ತೆ ಹೊಸ ಆದೇಶ ಹೊರಡಿಸಲಾಗಿದೆ.

ಈ‌ ಮುಂಚೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗೆ ರೇಸ್ ವ್ಯೂ ಕಾಟೇಜ್ ನಿವಾಸವನ್ನು ಹಂಚಿ ಅದೇಶಿಸಲಾಗಿತ್ತು. ಆದರೆ ಸಿದ್ದರಾಮಯ್ಯ ಅವರು ತಮಗೆ ಕುಮಾರಕೃಪಾ ಪೂರ್ವದಲ್ಲಿನ ನಂ.1 ನಿವಾಸವನ್ನು ನೀಡುವಂತೆ ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ದರು. ಈ ನಿಟ್ಟಿನಲ್ಲಿ ಇದೀಗ ಸಿಎಂ ಯಡಿಯೂರಪ್ಪ ಅವರು ಸಿದ್ದರಾಮಯ್ಯ ಅವರ ಮನವಿಯಂತೆ ಕುಮಾರ ಕೃಪಾ ಪೂರ್ವದಲ್ಲಿನ ನಿವಾಸವನ್ನೇ ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿದೆ.

ಕುಮಾರ ಕೃಪಾ ಪೂರ್ವ ನಿವಾಸವನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಹಂಚಿಕೆ‌ ಮಾಡಲಾಗಿತ್ತು.‌ ಇದೀಗ ನಿವಾಸ ಹಂಚಿಕೆಯನ್ನು ಪರಿಷ್ಕರಣೆ ಮಾಡಲಾಗಿದ್ದು, ರೇಸ್ ವ್ಯೂ ಕಾಟೇಜ್ ನಿವಾಸವನ್ನು ಸ್ಪೀಕರ್ ಕಾಗೇರಿಗೆ ಹಂಚಿಕೆ ಮಾಡಲಾಗಿದೆ.

ಮೈತ್ರಿ ಸರ್ಕಾರದಲ್ಲಿ ಎಚ್.ಡಿ.ರೇವಣ್ಣಗೆ ಕುಮಾರ ಕೃಪಾ ಪೂರ್ವ ನಂ.1 ನಿವಾಸವನ್ನು ಹಂಚಿಕೆ ಮಾಡಲಾಗಿತ್ತು. ಸಿದ್ದರಾಮಯ್ಯ ಈ ಹಿಂದೆ ಪ್ರತಿಪಕ್ಷ ನಾಯಕಾರಗಿದ್ದಾಗಲೂ ಕುಮಾರ ಕೃಪಾ ಪೂರ್ವ ನಂ.1 ನಿವಾಸದಲ್ಲೇ ವಾಸವಾಗಿದ್ದರು. ಇದೀಗ ಮತ್ತೆ ಅವರಿಗೆ ಅದೇ ನಿವಾಸವನ್ನು ಹಂಚಿಕೆ ಮಾಡಲಾಗಿದೆ.

ಕೆಲ ದಿನಗಳಿಂದ ಸಿದ್ದರಾಮಯ್ಯ ರಿಗೆ ನಿವಾಸ ಹಂಚಿಕೆ ಸಂಬಂಧ ಗೊಂದಲ ಮೂಡಿತ್ತು. ಇದೀಗ ಈ ಗೊಂದಲಕ್ಕೆ ತೆರೆ ಬಿದ್ದಿದೆ. ಇನ್ನು ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಿಂದ ಹೊಸದಾಗಿ ಹಂಚಿಕೆಯಾದ ಕುಮಾರ ಕೃಪಾ ಪೂರ್ವ ನಿವಾಸಕ್ಕೆ ಸ್ಥಳಾಂತರಗೊಳ್ಳಲಿದ್ದಾರೆ. Conclusion:
Last Updated : Oct 26, 2019, 1:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.