ಬೆಂಗಳೂರು: ಸಿಲಿಕಾನ್ ಸಿಟಿ ಜನರನ್ನು ಕೊರೊನಾ ಭೀತಿ ಇದೀಗ ಆತಂಕಕ್ಕೆ ಸಿಲುಕಿಸಿದೆ. ಅದು ಎಷ್ಟರ ಮಟ್ಟಿಗೆ ಕಾಡುತ್ತಿದೆ ಅಂದರೆ ಸ್ವಚ್ಛತೆಯತ್ತ ನಿಗಮಗಳು ಹೆಚ್ಚಿನ ನಿಗಾ ವಹಿಸುತ್ತಿದೆ. ಕೆಎಸ್ಆರ್ಟಿಸಿ ನಿಗಮ ಕೊರೊನಾ ವೈರಸ್ ಕುರಿತಾಗಿ ಜಾಗೃತಿ ಕೆಲಸದ ಜೊತೆಗೆ ಬಸ್ಗಳ ಶುಚಿಗೆ ಮುಂದಾಗಿದೆ. ದಿನದಲ್ಲಿ ಎರಡು ಬಾರಿ ಬಸ್ಗಳನ್ನ ಡೆಟಾಲ್ ಬಳಿಸಿ ಸ್ವಚ್ಛ ಮಾಡಲಾಗುತ್ತಿದೆ. ಡಿಪೋದಿಂದ ಬಸ್ ಹೊರಡುವಾಗ ಮತ್ತು ಸ್ಥಳವನ್ನು ತಲುಪಿದ ನಂತರ ಬಸ್ಗಳ ಒಳಗೆ ಸೀಟು ಹಾಗೂ ಕಂಬಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ.
ಇದರ ಜೊತೆಯಾಗಿ ಡಿಪೋ ಹಂತದಲ್ಲಿಯೇ ಚಾಲಕರು ಹಾಗೂ ನಿರ್ವಾಹಕರಿಗೆ ಕೊರೊನಾ ವೈರಸ್ ಕುರಿತಾಗಿ ಅರಿವು ಮೂಡಿಸಲಾಗುತ್ತಿದೆ. ಯಾವ ರೀತಿಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮುಖಕ್ಕೆ ಮಾಸ್ಕ್ ಹಾಕುವುದು ಸೇರಿದಂತೆ, ವೈರಸ್ ಹರಡುವುದು ಹೇಗೆ ಹಾಗೂ ಅದನ್ನು ತಡೆಗಟ್ಟಲು ಇರುವ ಕ್ರಮಗಳು ಏನು ಎಂಬುದನ್ನು ತಿಳಿಸಲಾಗುತ್ತಿದೆ. ಇನ್ನು ಬಸ್ನಲ್ಲಿ ಬರುವ ಪ್ರಯಾಣಿಕರಿಗೂ ಕೊರೊನಾ ವೈರಸ್ ಕುರಿತು ಚಾಲಕರು ಹಾಗೂ ನಿರ್ವಾಹಕರು ಅರಿವು ಮೂಡಿಸುತ್ತಿದ್ದಾರೆ.